IPL 2022: ದಿಕ್ಕೆಟ್ಟ ಮುಂಬೈ ಇಂಡಿಯನ್ಸ್‌ಗೆ ಬಲ ತುಂಬಲಿದ್ದಾನೆ ಈ ಅನುಭವಿ ಬೌಲರ್

ಐಪಿಎಲ್ 15ನೇ ಸೀಸನ್ ನಲ್ಲಿ ಅತ್ಯುತ್ತಮ ಬೌಲರ್ ಗಳಿಲ್ಲದೇ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತೀರಾ ಕಳಪೆ ಪ್ರದರ್ಶನ ತೋರಿದೆ. ಆಡಿದ ಆರು ಪಂದ್ಯಗಳಲ್ಲಿ ಪಂದೂ ಪಂದ್ಯವನ್ನ ಗೆಲ್ಲಲು ಸಾಧ್ಯವಾಗದೆ ಮುಗ್ಗರಿಸಿದೆ. ಆದ್ರೀಗ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಹಿರಿಯ ವೇಗಿ ಧವಳ್ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಮುಂಬೈ ಸಜ್ಜಾಗಿದೆ.
ಸದ್ಯ ಕುಲಕರ್ಣಿ ಪ್ರಸ್ತುತ ಸ್ಟಾರ್ ಸ್ಪೋರ್ಟ್ಸ್‌ನ ಕಾಮೆಂಟರಿ ಪ್ಯಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟರಲ್ಲಿ ಅವರಿಗೆ ಮುಂಬೈನಿಂದ ಅಚ್ಚರಿಯ ಕರೆ ಬಂತು. ಇದರ ಬೆನ್ನಲ್ಲೇ ಕುಲಕರ್ಣಿ ಕಾಮೆಂಟರಿ ಮುಗಿಸಿ ಮೈದಾನಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ.
ಈ ಋತುವಿನಲ್ಲಿ ಆಡಿದ ಎಲ್ಲಾ ಆರು ಪಂದ್ಯಗಳನ್ನು ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ ಹಿಂದೆಂದೂ ಕಾಣದ ಬಿಕ್ಕಟ್ಟಿನಲ್ಲಿದೆ. ಇನ್ನುಳಿದ ಎಂಟು ಪಂದ್ಯಗಳನ್ನು ಗೆದ್ದರೂ ಮುಂಬೈ ಪ್ಲೇಆಫ್ ತಲುಪುವ ಸಾಧ್ಯತೆ ಕಡಿಮೆ. ಇಂತಹ ಸನ್ನಿವೇಶದಲ್ಲಿ ರೋಹಿತ್ ಶರ್ಮಾ ಮತ್ತು ಅವರ ತಂಡ ಉಳಿದಿರುವ ಅರ್ಧ ಪಂದ್ಯವನ್ನಾದರೂ ಗೆಲ್ಲುವ ಹಂಬಲದಲ್ಲಿದೆ.

ಬುಮ್ರಾ ಹೊರತುಪಡಿಸಿದ್ರೆ ಉಳಿದ ಬೌಲರ್‌ಗಳ ಪ್ರದರ್ಶನ ಠುಸ್ ಪಟಾಕಿ
ಈ ಋತುವಿನಲ್ಲಿ ಬೌಲಿಂಗ್ ಮುಂಬೈ ಇಂಡಿಯನ್ಸ್‌ನ ದೊಡ್ಡ ದೌರ್ಬಲ್ಯವಾಗಿದೆ. ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಹೊರತುಪಡಿಸಿದರೆ ಮುಂಬೈ ತಂಡದಲ್ಲಿ ವಿಕೆಟ್ ಪಡೆಯುವ ನಂಬಿಕಸ್ಥರು ಯಾರೂ ಇಲ್ಲ. ಮುಂಬೈ ಇತಿಹಾಸದಲ್ಲಿ ಇಂತಹ ದಯನೀಯ ಬೌಲಿಂಗ್ ಲೈನ್ ಅಪ್ ಹಿಂದೆಂದೂ ಇರಲಿಲ್ಲ. ಮುಂಬೈ ಬೌಲರ್‌ಗಳು ವಿಕೆಟ್ ಕಬಳಿಸಲು ಅಥವಾ ರನ್‌ಗಳ ಹರಿವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಮುಂಬೈ ಗೆಲ್ಲಬಹುದಾಗಿದ್ದ ಕೆಲವು ಪಂದ್ಯಗಳನ್ನೂ ಕೈ ಚೆಲ್ಲಿದೆ.

ಬುಮ್ರಾ ಬಿಟ್ಟು ಉಳಿದ ಬೌಲರ್‌ಗಳೇ ಟಾರ್ಗೆಟ್
ಮುಂಬೈ ಲೈನ್‌ಅಪ್‌ನಲ್ಲಿ ಭಯಪಡುವ ಏಕೈಕ ಬೌಲರ್ ಬುಮ್ರಾ ಎಂದು ತಿಳಿದ ಇತರ ತಂಡಗಳು ಆತನಿಗೆ ವಿಕೆಟ್ ನೀಡದೆ ಎಚ್ಚರಿಕೆ ಆಡುತ್ತವೆ. ಆದ್ರೆ ಆತನ ನಾಲ್ಕು ಓವರ್ ಖೋಟಾ ಮುಗಿದ ಬಳಿಕ ಉಳಿದ ಬೌಲರ್‌ಗಳ ಮೇಲೆ ದಾಳಿ ಮಾಡುವ ತಂತ್ರವನ್ನು ಪ್ರಯೋಗಿಸುತ್ತಿವೆ.
CSK vs MI Preview: ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

92 ಐಪಿಎಲ್ ಪಂದ್ಯಗಳನ್ನಾಡಿರುವ ಧವಳ್ ಕುಲಕರ್ಣಿ
ಧವಳ್ ಕುಲಕರ್ಣಿ ವಿಷಯಕ್ಕೆ ಬಂದರೆ, ಅವರು ಐಪಿಎಲ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ವೇಗದ ಬೌಲರ್. 33 ವರ್ಷದ ವೇಗಿ ಐಪಿಎಲ್‌ನಲ್ಲಿ 92 ಪಂದ್ಯಗಳಲ್ಲಿ ಆಡಿದ್ದಾರೆ. 86 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ಹೊರತಾಗಿ, ಕುಲಕರ್ಣಿ ರಾಜಸ್ಥಾನ್ ರಾಯಲ್ಸ್ ಮತ್ತು ಈಗ ನಿಷ್ಕ್ರಿಯವಾಗಿರುವ ಗುಜರಾತ್ ಲಯನ್ಸ್ ಫ್ರಾಂಚೈಸಿಗಾಗಿಯೂ ಆಡಿದ್ದಾರೆ.
ಕೆ.ಎಲ್ ರಾಹುಲ್ ಕಲ್ಯಾಣವಂತೆ! ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ರಾಹುಲ್-ಅಥಿಯಾ ಜೋಡಿ?
2020 ರ ಹರಾಜಿನಲ್ಲಿ ಮುಂಬೈ ಈತನನ್ನ 75 ಲಕ್ಷ ರೂಪಾಯಿಗೆ ಖರೀದಿಸಿತು. 2021ರಲ್ಲಿ ಕುಲಕರ್ಣಿ ಮತ್ತೊಮ್ಮೆ ತಂಡದ ಭಾಗವಾಗಿದ್ದರು. ಆದ್ರೆ ಒಂದು ಪಂದ್ಯದಲ್ಲಿ ಮಾತ್ರ ಆಡುವ ಅವಕಾಶ ಸಿಕ್ಕಿತು. ಆದ್ರೆ 2022ರ ಸೀಸನ್‌ನಲ್ಲಿ ಆತನನ್ನ ಯಾರೂ ಖರೀದಿಸಲಿಲ್ಲ. ಆದ್ರೀಗ ಜೊಫ್ರಾ ಆರ್ಚರ್ ಅಲಭ್ಯರಾಗಿದ್ದರ ಪರಿಣಾಮ ಆತನಿಗೆ ಮಣೆ ಹಾಕಲು ಮುಂದಾಗಿದೆ.

ಧವಳ್‌ಗೆ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಈ ಬಾರಿ ಧವಳ್ ಕುಲಕರ್ಣಿ ಹೆಚ್ಚಿನ ಅವಕಾಶ ಪಡೆಯುವುದು ಖಚಿತ. ಅವರು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ವೇಗದ ಬೌಲಿಂಗ್‌ನ ಚುಕ್ಕಾಣಿ ಹಿಡಿಯಬಹುದು. ನಾಯಕ ರೋಹಿತ್ ಶರ್ಮಾ ತಮ್ಮ ವೇಗದ ಬೌಲಿಂಗ್ ಅನ್ನು ಬಲಪಡಿಸಲು ಕುಲಕರ್ಣಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಮುಂಬೈ ಮೂಲದವರಾದ ಅವರಿಗೆ ಮುಂಬೈ ಮತ್ತು ಪುಣೆಯಲ್ಲಿನ ಪಿಚ್‌ಗಳಲ್ಲಿ ಬೌಲಿಂಗ್ ಮಾಡುವುದು ಹೇಗೆ ಎಂದು ತಿಳಿದಿದೆ ಎಂದು ತಂಡದ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications