For Quick Alerts
ALLOW NOTIFICATIONS  
For Daily Alerts
 

ಕೆ.ಎಲ್ ರಾಹುಲ್ ಕಲ್ಯಾಣವಂತೆ! ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ರಾಹುಲ್-ಅಥಿಯಾ ಜೋಡಿ?

KL Rahul And Athiya shetty
DK ಸಾಂಸಾರಿಕ ಜೀವನದಲ್ಲಿ ಮುರಳಿ ವಿಜಯ್ ವಿಲನ್ ಆಗಿದ್ದು ಹೇಗೆ? | Oneindia Kannada

ಸದ್ಯ ಕ್ರಿಕೆಟ್ ಲೋಕಕ್ಕೆ ಅದ್ರಲ್ಲೂ, ಭಾರತದ ಕ್ರಿಕೆಟ್‌ನಲ್ಲಿ ಲವ್‌ ಬರ್ಡ್ಸ್‌ ಅಂದ್ರೆ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅಲ್ಲದೆ ಮತ್ಯಾರು ಅಲ್ಲ. ಯಾವಾಗಲೂ ಟ್ರೆಂಡಿಂಗ್‌ನಲ್ಲಿರುವ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಮೂಲಕ ಅಭಿಮಾನಿಗಳ ಸೆಳೆಯುವ ಜೋಡಿ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂಬ ಸುದ್ದಿ ಹರಿದಾಡಿದೆ.

ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಕೆಲವು ವರ್ಷಗಳಿಂದ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಸಂಬಂಧವು ಮತ್ತಷ್ಟು ಗಟ್ಟಿಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿ ಅನೇಕ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದೆ. ಇದುವರೆಗೂ ತಮ್ಮ ಸಂಬಂಧದ ಕುರಿತು ರಾಹುಲ್ ಆಗಲಿ, ಅಥಿಯಾ ಶೆಟ್ಟಿ ಆಗಲಿ, ಎರಡೂ ಕುಟುಂಬದ ಸದಸ್ಯರು ಆಗಲಿ ಎಲ್ಲೂ ಸಾರ್ವಜನಿಕವಾಗಿ ಬಾಯ್ಬಿಟ್ಟಿಲ್ಲ.

ದಕ್ಷಿಣ ಭಾರತದ ಶೈಲಿಯಲ್ಲಿ ರಾಹುಲ್-ಅಥಿಯಾ ಮದುವೆ

ದಕ್ಷಿಣ ಭಾರತದ ಶೈಲಿಯಲ್ಲಿ ರಾಹುಲ್-ಅಥಿಯಾ ಮದುವೆ

ಪಿಂಕ್‌ವಿಲ್ಲಾ ವರದಿ ಪ್ರಕಾರ ಬಾಲಿವುಡ್ ನಟಿ ಅಥಿಯಾ ಹಾಗೂ ಇನ್‌ಫಾರ್ಮ್ ಕ್ರಿಕೆಟರ್ ಕೆ.ಎಲ್ ರಾಹುಲ್‌ ಇದೇ ವರ್ಷದಲ್ಲಿ ದಕ್ಷಿಣ ಭಾರತದ ಶೈಲಿಯಲ್ಲಿ ಮದುವೆ ಆಗಲಿದ್ದಾರೆ. ಸುನಿಲ್ ಶೆಟ್ಟಿ ಕುಟುಂಬಕ್ಕೆ ಹತ್ತಿರದ ವ್ಯಕ್ತಿಯೊಬ್ಬರ ಮಾಹಿತಿಯಂತೆ ಈಗಾಗಲೇ ಎರಡೂ ಕುಟುಂಬಗಳು ಮದುವೆಗೆ ತಯಾರಿ ನಡೆಸಿವೆಯಂತೆ.

ಎರಡೂ ಕುಟುಂಬಗಳು ಪರಸ್ಪರ ಚೆನ್ನಾಗಿ ತಿಳಿದಿದ್ದು, ಮದುವೆ ಕುರಿತು ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ 2022ರ ವರ್ಷ ಕೊನೆಗೊಳ್ಳುವ ಮೊದಲೇ ಕೆ.ಎಲ್ ರಾಹುಲ್ -ಅಥಿಯಾ ಶೆಟ್ಟಿ ಮದುವೆ ನಡೆಯಲಿದೆ.

ಆರ್‌ಸಿಬಿ ಮ್ಯಾಚ್‌ನಲ್ಲಿ ಅಧೀರ..! ಗೆಲುವು ತಂದುಕೊಟ್ಟ ಫಾಫ್, ಹೇಜಲ್‌ವುಡ್‌

ಮಂಗಳೂರು ಮೂಲದ ಸುನಿಲ್ ಶೆಟ್ಟಿಗೆ, ಮಂಗಳೂರಿನದ್ದೇ ಅಳಿಯ

ಮಂಗಳೂರು ಮೂಲದ ಸುನಿಲ್ ಶೆಟ್ಟಿಗೆ, ಮಂಗಳೂರಿನದ್ದೇ ಅಳಿಯ

ಬಾಲಿವುಡ್‌ನ ಖ್ಯಾತ ನಟ ಸುನಿಲ್‌ ಶೆಟ್ಟಿ ಮೂಲತಃ ಮಂಗಳೂರಿನವರು. ತುಳು ಮಾತನಾಡುವ ಈ ಫ್ಯಾಮಿಲಿಯು ಮುಲ್ಕಿಯವರು. ಹೀಗಿರುವಾಗಿ ದಕ್ಷಿಣ ಭಾರತದ ಅದ್ರಲ್ಲೂ ತಮ್ಮ ಮಂಗಳೂರಿನ ಅಳಿಯನೇ ಸಿಗುತ್ತಿರುವುದು ಅವರಿಗೆ ಮತ್ತಷ್ಟು ಖುಷಿ ತಂದಿದೆ. ಕೆ.ಎಲ್ ರಾಹುಲ್ ಕೂಡ ಮಂಗಳೂರಿನಲ್ಲಿ ಬೆಳೆದು, ಬೆಂಗಳೂರಿನಲ್ಲಿ ಸೆಟಲ್ ಆಗಿದ್ದು, ಒಂದೇ ಊರಿನವರಾಗಿದ್ದಾರೆ.

ಹರ್ಷಲ್, ಹಸರಂಗ ಅಲ್ಲ: ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸಬಲ್ಲ ಬೌಲರ್ ಈತ ಎಂದು ಕೊಂಡಾಡಿದ ಕೈಫ್

ನಿನ್ನೊಂದಿಗೆ ಎಲ್ಲಾ ಕಡೆಯಲ್ಲೂ ಇರುತ್ತೇನೆ ಎಂದಿದ್ದ ಅಥಿಯಾ

ಇತ್ತೀಚೆಗಷ್ಟೇ ಕೆ.ಎಲ್ ರಾಹುಲ್ 30ನೇ ವಸಂತಕ್ಕೆ ಕಾಲಿಟ್ಟಿದರು. ಪ್ರೇಯಸಿ ಅಥಿಯಾ ಶೆಟ್ಟಿ ಕೂಡ ಕೆ.ಎಲ್ ರಾಹುಲ್‌ಗೆ ಬರ್ತ್‌ಡೇಗೆ ಶುಭ ಕೋರಿದ್ದು, ನಿನ್ನೊಂದಿಗೆ ಎಲ್ಲಾ ಕಡೆಯಲ್ಲೂ ಇರುತ್ತೇನೆ, ಹ್ಯಾಪಿ ಬರ್ತ್‌ಡೇ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಕೆ.ಎಲ್ ರಾಹುಲ್ ''ಲವ್ ಯೂ'' ಎಂದು ಬ್ಲಾಕ್‌ ಹಾರ್ಟ್‌ ಎಮೊಜಿಯನ್ನ ಸಹ ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿಯೊಂದಿಗೆ ಬಹುಕಾಲದಿಂದ ಪ್ರೀತಿಯಲ್ಲಿರುವ ರಾಹುಲ್‌ ಇತ್ತೀಚಿನ ದಿನಗಳಲ್ಲಿ ಮುಕ್ತವಾಗಿಯೇ ಅತಿಯಾ ಶೆಟ್ಟಿ ಮತ್ತು ತನ್ನ ನಡುವೆ ಪ್ರೀತಿ ಇದೆ ಎಂಬ ವಿಷಯವನ್ನು ಭಿನ್ನ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಆಥಿಯಾ ಶೆಟ್ಟಿ ಕೂಡ ರಾಹುಲ್ ಜೊತೆಗಿನ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Story first published: Wednesday, April 20, 2022, 16:30 [IST]
Other articles published on Apr 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+