GT VS PBKS: ಶಮಿಗೆ ಹ್ಯಾಟ್ರಿಕ್ ಸಿಕ್ಸರ್ ಹೊಡೆತ ಲಿವಿಂಗ್‌ಸ್ಟೋನ್, ಓವರ್‌ಗೆ 28ರನ್!

ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಟೂರ್ನಮೆಂಟ್‌ನಲ್ಲಿ ಕೇವಲ ಒಂದೇ ಒಂದು ಪಂದ್ಯ ಸೋತಿದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್‌ಗೆ ಪಂಜಾಬ್ ಸೋಲಿನ ರುಚಿ ತೋರಿಸಿದೆ.
ಗುಜರಾತ್ ನೀಡಿದ 144ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಆರಂಭ ಕೂಡ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ಜಾನಿ ಬೈಸ್ಟ್ರೋವ್ 1ರನ್‌ಗೆ ಔಟಾದ್ರು. ಆದ್ರೆ ಓಪನರ್ ಶಿಖರ್ ಧವನ್ ಅಜೇಯ 62, ರಾಜಪಕ್ಷೆ 40ರನ್, ಲಿಯಾಮ್ ಲಿವಿಂಗ್‌ಸ್ಟೋನ್ ಸ್ಫೋಟಕ 30ರನ್‌ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ಇನ್ನೂ ನಾಲ್ಕು ಓವರ್ ಬಾಕಿ ಇರುವಂತೆಯೇ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಅದ್ರಲ್ಲೂ 16ನೇ ಓವರ್‌ನಲ್ಲಿ ಶಮಿ ಬೌಲಿಂಗ್‌ನಲ್ಲಿ ಲಿವಿಂಗ್‌ಸ್ಟೋನ್ ಹ್ಯಾಟ್ರಿಕ್ ಸಿಕ್ಸರ್ ಹೊಡೆಯುವ ಮೂಲಕ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. 16ನೇ ಮೊದಲ ಎಸೆತದಲ್ಲಿ ಡೀಪ್ ಸ್ಕ್ವೈರ್ ಲೆಗ್ ಕಡೆಗೆ 117 ಮೀಟರ್ ಸಿಕ್ಸರ್ ಹೊಡೆದ ಲಿವಿಂಗ್‌ಸ್ಟೋನ್, ಎರಡನೇ ಎಸೆತದಲ್ಲಿ ಮಿಡ್‌ವಿಕೆಟ್ ಕಡೆಗೆ ಸಿಕ್ಸರ್ ಸಿಡಿಸಿದ್ರು.
ಇನ್ನು ಮೂರನೇ ಎಸೆತದಲ್ಲಿ ಗಟ್ಟಿಯಾಗಿ ಬ್ಯಾಟ್ ಬೀಸಿದ ಪರಿಣಾಮ ಚೆಂಡು ಟಾಪ್ ಎಡ್ಜ್ ಆಗಿ ಕೀಪರ್ ತಲೆ ಮೇಲೆ ತೇಲಿ ಸಿಕ್ಸರ್ ಗಡಿ ದಾಟಿತು. ಇದರ ನಂತರದ ಎಸೆತದಲ್ಲೇ ಲಿವಿಂಗ್‌ಸ್ಟೋನ್ ಬೌಂಡರಿ ಕಲೆಹಾಕಿದರು. ಐದನೇ ಎಸೆತದಲ್ಲೇ ಎರಡು ರನ್‌ಗಳನ್ನ ಓಡಿದ ಲಿವಿಂಗ್‌ಸ್ಟೋನ್ , ಆರನೇ ಎಸೆತದಲ್ಲಿ ಸ್ವಲ್ಪದರಲ್ಲೇ ಮಿಸ್ ಆಗಿ ಶಾರ್ಟ್ ಥರ್ಡ್ ಮ್ಯಾನ್ ಬಳಿ ಬೌಂಡರಿ ಬಾರಿಸಿದ್ರು.
ಈ ಮೂಲಕ 16ನೇ ಓವರ್‌ನಲ್ಲಿ ಲಿವಿಂಗ್‌ಸ್ಟೋನ್ ಹ್ಯಾಟ್ರಿಕ್ ಸಿಕ್ಸರ್, ಎರಡು ಬೌಂಡರಿ ಸೇರಿದಂತೆ ಒಟ್ಟು 28ರನ್ ಚಚ್ಚಿದ್ರು. ಗೆಲುವಿಗಾಗಿ ಹಾತೊರೆಯುತ್ತಿದ್ದ ಪಂಜಾಬ್ ಕಿಂಗ್ಸ್ ನಾಲ್ಕು ಓವರ್ ಇರುವಾಗಲೇ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ.
ಗುಜರಾತ್ ಟೈಟನ್ಸ್ ವಿರುದ್ಧ ನಾಲ್ಕು ವಿಕೆಟ್ ಪಡೆದ ಕಗಿಸೊ ರಬಾಡಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಲಭಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications