
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್
ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 48 ಎಸೆತಗಳಿಗೆ 73 ರನ್ ಬಾರಿಸಿದ ರುತುರಾಜ್ ಗಾಯಕ್ವಾಡ್ ಫಾರ್ಮ್ ಕಂಡುಕೊಂಡಿದ್ದಾರೆ. ಇನ್ನು ರುತುರಾಜ್ ಗಾಯಕ್ವಾಡ್ ಜತೆ ಆರಂಭಿಕನಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ 10 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಔಟ್ ಆದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 1 ರನ್, ಅಂಬಾಟಿ ರಾಯುಡು 31 ಎಸೆತಗಳಲ್ಲಿ 46 ರನ್ ಮತ್ತು ಶಿವಂ ದುಬೆ 17 ಎಸೆತಗಳಲ್ಲಿ 19 ರನ್ ಸಿಡಿಸಿದರು. ತಂಡದ ನಾಯಕ ರವೀಂದ್ರ ಜಡೇಜಾ 12 ಎಸೆತಗಳಲ್ಲಿ 22 ರನ್ ಬಾರಿಸಿ ಅಜೇಯರಾಗಿ ಉಳಿದರು.
ಗುಜರಾತ್ ಟೈಟನ್ಸ್ ಪರ ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಯಶ್ ದಯಾಳ್ ತಲಾ ಒಂದೊಂದು ವಿಕೆಟ್ ಪಡೆದರು

ಗುಜರಾತ್ ಟೈಟನ್ಸ್ ಇನ್ನಿಂಗ್ಸ್
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ 170 ರನ್‌ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟನ್ಸ್ ತೀರಾ ಕೆಟ್ಟ ಆರಂಭವನ್ನು ಪಡೆದುಕೊಂಡಿತು. ವೃದ್ದಿಮಾನ್ ಸಹಾ 11, ಶುಬ್ ಮನ್ ಗಿಲ್ 0, ವಿಜಯ್ ಶಂಕರ್ 0 ಮತ್ತು ಅಭಿನವ್ ಮನೋಹರ್ 12 ರನ್ ಗಳಿಸಿ ನೀರಸ ಪ್ರದರ್ಶನ ತೋರಿದರು. ಹೀಗೆ ಮೇಲಿನ ಕ್ರಮಾಂಕದ ಆಟಗಾರರ ವೈಫಲ್ಯತೆಯಿಂದ 48 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಆಸರೆಯಾದದ್ದು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ ಮತ್ತು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಶೀದ್ ಖಾನ್. ರಶೀದ್ ಖಾನ್ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ 40 ರನ್ ಕಲೆ ಹಾಕಿದರೆ, ಅಂತಿಮ ಹಂತದವರೆಗೂ ಹೋರಾಡಿದ ಡೇವಿಡ್ ಮಿಲ್ಲರ್ 51 ಎಸೆತಗಳಲ್ಲಿ ಅಜೇಯ 94 ರನ್ ಬಾರಿಸಿ ಮಿಂಚಿದರು. ಇನ್ನುಳಿದಂತೆ ರಾಹುಲ್ ತೆವಾಟಿಯಾ 6 ರನ್ ಗಳಿಸಿದರೆ ಅಲ್ಜಾರಿ ಜೋಸೆಫ್ 0 ಮತ್ತು ಲಾಕಿ ಫರ್ಗ್ಯುಸನ್ ಯಾವುದೇ ರನ್ ಗಳಿಸದೆ ಅಜೇಯರಾಗಿ ಉಳಿದರು. ಅಬ್ಬರಿಸಿ ಪಂದ್ಯ ಗೆಲ್ಲಿಸಿದ ಡೇವಿಡ್ ಮಿಲ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಆರಂಭದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೊ 3 ವಿಕೆಟ್, ಮಹೀಶ್ ತೀಕ್ಷಣ 2 ವಿಕೆಟ್ ಮತ್ತು ರವೀಂದ್ರ ಜಡೇಜಾ ಹಾಗೂ ಮುಕೇಶ್ ಚೌಧರಿ ತಲಾ ಒಂದೊಂದು ವಿಕೆಟ್ ಪಡೆದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವಿಲನ್ ಆದ ಕ್ರಿಸ್ ಜಾರ್ಡನ್
ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟನ್ಸ್ ತಂಡದ ವಿಕೆಟ್‍ಗಳನ್ನು ಬೇಗನೆ ತೆಗೆದು ಒತ್ತಡ ಹೇರಿ ಪಂದ್ಯವನ್ನು ಕೈ ವಶಪಡಿಸಿಕೊಳ್ಳುವ ಸನಿಹದಲ್ಲಿದ್ದಾಗ 18ನೇ ಓವರ್ ಬೌಲಿಂಗ್ ಮಾಡಿದ ಕ್ರಿಸ್ ಜೋರ್ಡಾನ್ ಆ ಒಂದು ಓವರ್‌ನಲ್ಲಿ 25 ರನ್ ನೀಡಿದರು. ಈ ಓವರ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಿಡಿತದಲ್ಲಿದ್ದ ಪಂದ್ಯ ಕೈತಪ್ಪಿತ್ತು. ಆ ಓವರ್‌ನಲ್ಲಿ ರಶೀದ್ ಖಾನ್ 3 ಸಿಕ್ಸರ್ ಮತ್ತು 1 ಬೌಂಡರಿ ಚಚ್ಚಿ ಅಬ್ಬರಿಸಿದರು. ಇನ್ನು ಪಂದ್ಯದ ಅಂತಿಮ ಓವರ್‌ನ್ನೂ ಸಹ ಕ್ರಿಸ್ ಜೋರ್ಡನ್ ಮಾಡಿದರು. ಹಾಗೂ 6 ಎಸೆತಗಳಲ್ಲಿ 13 ರನ್ ಬೇಕಿದ್ದಾಗ ಡೇವಿಡ್ ಮಿಲ್ಲರ್ 1 ಸಿಕ್ಸರ್ ಮತ್ತು 1 ಬೌಂಡರಿ ಸಿಡಿಸಿದರು ಹಾಗೂ ಈ ಓವರ್‌ನಲ್ಲಿ ಕ್ರಿಸ್ ಜೋರ್ಡಾನ್ ಎಸೆದ ನೋಬಾಲ್ ಸೋಲಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ.


Click it and Unblock the Notifications
