For Quick Alerts
ALLOW NOTIFICATIONS  
For Daily Alerts
 

GT vs KKR: ಕೆಕೆಆರ್ ವಿರುದ್ಧ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಗುಜರಾತ್ ಟೈಟನ್ಸ್

IPL 2022: Gujarat Titans beat Kolkata Knight Riders by 8 runs

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 35ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಮತ್ತು ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದು, ಗುಜರಾತ್ ಟೈಟನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ರನ್‌ಗಳ ರೋಚಕ ಗೆಲುವನ್ನು ಕಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ವೃದ್ದಿಮಾನ್ ಸಹಾ ಮತ್ತು ಶುಬ್ ಮನ್ ಗಿಲ್ ಉತ್ತಮ ಆರಂಭ ಕಟ್ಟಿ ಕೊಡುವಲ್ಲಿ ವಿಫಲರಾದರು. ಶುಬ್ ಮನ್ ಗಿಲ್ 7 ರನ್ ಗಳಿಸಿ ಔಟ್ ಆದರೆ, ವೃದ್ದಿಮಾನ್ ಸಹಾ 25 ಎಸೆತಗಳಲ್ಲಿ 25 ರನ್ ಕಲೆಹಾಕಿ ಸಾಧಾರಣ ಪ್ರದರ್ಶನ ನೀಡಿದರು. ಇನ್ನು ಶುಬ್ ಮನ್ ಗಿಲ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ ಗುಜರಾತ್ ಟೈಟನ್ಸ್ ತಂಡಕ್ಕೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಪ್ರದರ್ಶನ ನೀಡಿ ಆಸರೆಯಾದರು. ಹಾರ್ದಿಕ್ ಪಾಂಡ್ಯ 49 ಎಸೆತಗಳಲ್ಲಿ 67 ರನ್ ಬಾರಿಸಿದರು. ಇನ್ನುಳಿದಂತೆ ಡೇವಿಡ್ ಮಿಲ್ಲರ್ 27, ರಾಹುಲ್ ತೆವಾಟಿಯಾ 17, ರಶೀದ್ ಖಾನ್ 0, ಅಭಿನವ್ ಮನೋಹರ್ 2, ಲಾಕಿ ಫೆರ್ಗ್ಯುಸನ್ 0, ಯಶ್ ದಯಾಳ್ 0 ಮತ್ತು ಅಲ್ಜಾರಿ ಜೋಸೆಫ್ ಅಜೇಯ 1 ರನ್ ಕಲೆ ಹಾಕಿದರು. ಈ ಮೂಲಕ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ ಕಲೆ ಹಾಕಿದ ಗುಜರಾತ್ ಟೈಟನ್ಸ್ ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 157 ರನ್‌ಗಳ ಗುರಿಯನ್ನು ನೀಡಿತು.

ಹೀಗೆ ಗುಜರಾತ್ ಟೈಟನ್ಸ್ ನೀಡಿದ ಸಾಮಾನ್ಯ ಮೊತ್ತವನ್ನು ಬೆನ್ನತ್ತಲು ಯತ್ನಿಸಿದ ಕೋಲ್ಕತ್ತ ನೈಟ್ ರೈಡರ್ಸ್ 6.1 ಓವರ್‌ಗಳಲ್ಲಿಯೇ ತನ್ನ ಮೊದಲ 4 ವಿಕೆಟ್‍ಗಳನ್ನು ಕೇವಲ 34 ರನ್‌ಗಳಿಗೆ ಕಳೆದುಕೊಂಡು ಕೆಟ್ಟ ಆರಂಭವನ್ನು ಪಡೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ ಮತ್ತು ಅಂತಿಮ ಹಂತದಲ್ಲಿ ಆ್ಯಂಡ್ರೆ ರಸೆಲ್ ಹೆಚ್ಚಿನ ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಯತ್ನ ಮಾಡಿದರಾದರೂ ಸಹ ಗೆಲುವನ್ನು ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಪರ ಸ್ಯಾಮ್ ಬಿಲ್ಲಿಂಗ್ಸ್ 4, ಸುನಿಲ್ ನರೈನ್ 5, ಶ್ರೇಯಸ್ ಅಯ್ಯರ್ 12, ನಿತೀಶ್ ರಾಣಾ 2, ರಿಂಕು ಸಿಂಗ್ 35, ವೆಂಕಟೇಶ್ ಅಯ್ಯರ್ 17, ಆ್ಯಂಡ್ರೆ ರಸೆಲ್ 48, ಶಿವಂ ಮಾವಿ 2, ಉಮೇಶ್ ಯಾದವ್ ಅಜೇಯ 15 ಮತ್ತು ಟಿಮ್ ಸೌಥಿ ಅಜೇಯ 1 ರನ್ ಕಲೆ ಹಾಕಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕುವಲ್ಲಿ ಮಾತ್ರ ಶಕ್ತವಾಯಿತು.

gt

ಕೋಲ್ಕತ್ತ ನೈಟ್ ರೈಡರ್ಸ್ ಪರ 25 ಎಸೆತಗಳಲ್ಲಿ 48 ರನ್ ಚಚ್ಚಿದ ಆ್ಯಂಡ್ರೆ ರಸೆಲ್ 6 ಸಿಕ್ಸರ್ ಬಾರಿಸಿ ಗೆಲುವಿನ ನಿರೀಕ್ಷೆಯನ್ನು ಹುಟ್ಟು ಹಾಕಿದ್ದರು. ಅಂತಿಮವಾಗಿ 6 ಎಸೆತಗಳಿಗೆ ಗೆಲ್ಲಲು 18 ರನ್ ಬೇಕಿದ್ದಾಗ ಕೊನೆಯ ಓವರ್‌ನ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ ರಸೆಲ್ ಎರಡನೇ ಎಸೆತದಲ್ಲಿ ಔಟ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ, ಯಶ್ ದಯಾಳ್ ಮತ್ತು ರಶೀದ್ ಖಾನ್ ತಲಾ 2 ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್ ಮತ್ತು ಲಾಕಿ ಫೆರ್ಗ್ಯುಸನ್ ತಲಾ ಒಂದೊಂದು ವಿಕೆಟ್ ಪಡೆದರು. ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಗುಜರಾತ್ ಟೈಟನ್ಸ್ ಪ್ಲೇ ಆಫ್ ಹಾದಿಯನ್ನು ಸರಳ ಮಾಡಿಕೊಳ್ಳುತ್ತಿದೆ.

Story first published: Saturday, April 23, 2022, 20:36 [IST]
Other articles published on Apr 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+