Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ ಅಬ್ಬರಿಸಿದ ರಶೀದ್ ಖಾನ್; ಹೈದರಾಬಾದ್ ವಿರುದ್ಧ ಗುಜರಾತ್‌ಗೆ ರೋಚಕ ಜಯ

IPL 2022: Gujarat Titans beat Sunrisers Hyderabad by 5 wickets

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 40ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಟ ನಡೆಸಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗುಜರಾತ್ ಟೈಟನ್ಸ್ 5 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿದೆ.

ಟೂರ್ನಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಅಭಿಷೇಕ್ ಶರ್ಮಾ ಮತ್ತು ಏಡನ್ ಮರ್ಕ್ರಮ್ ಆಕರ್ಷಕ ಅರ್ಧಶತಕಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಎದುರಾಳಿ ಗುಜರಾತ್ ಟೈಟನ್ಸ್ ತಂಡಕ್ಕೆ 196 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿ 5 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತು.

ಗುಜರಾತ್ ಟೈಟನ್ಸ್ ಪರ 11 ಎಸೆತಗಳನ್ನು ಎದುರಿಸಿ ಅಜೇಯ 31 ರನ್ ಚಚ್ಚಿದ ರಶೀದ್ ಖಾನ್ ಅಂತಿಮ ಓವರ್ ನ ಕೊನೆಯ 4 ಎಸೆತಗಳಿಗೆ 15 ರನ್ ಅಗತ್ಯವಿದ್ದಾಗ ಮಾರ್ಕೋ ಜಾನ್ಸೆನ್ ಎಸೆದ 3ನೇ ಎಸೆತಕ್ಕೆ ಸಿಕ್ಸರ್ ಸಿಡಿಸಿದರು ಹಾಗೂ ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಗಳಿಸಲಾಗಲಿಲ್ಲ. ಹೀಗಾಗಿ 2 ಎಸೆತಗಳಿಗೆ 9 ರನ್ ಬಾರಿಸಬೇಕಾದ ಅಗತ್ಯವಿತ್ತು. ಈ ಸಂದರ್ಭದಲ್ಲಿ ಕೊನೆಯ ಎರಡೂ ಎಸೆತಗಳಿಗೆ ಸಿಕ್ಸರ್ ಚಚ್ಚಿದ ರಶೀದ್ ಖಾನ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್:

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆರಂಭಿಕ ಆಟಗಾರರಾಗಿ ಅಭಿಷೇಕ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ಕಣಕ್ಕಿಳಿದರು. ಈ ಪೈಕಿ ನಾಯಕ ಕೇನ್ ವಿಲಿಯಮ್ಸನ್ 5 ರನ್ ಗಳಿಸಿ ಔಟ್ ಆದರೆ, ಅಭಿಷೇಕ್ ಶರ್ಮಾ 42 ಎಸೆತಗಳಲ್ಲಿ 65 ರನ್ ಗಳಿಸಿ ಅಬ್ಬರಿಸಿದರು. ಇನ್ನುಳಿದಂತೆ ರಾಹುಲ್‌ ತ್ರಿಪಾಠಿ 16 ರನ್, ಏಡನ್ ಮಾರ್ಕ್ರಮ್ 56 ರನ್, ನಿಕೋಲಸ್ ಪೂರನ್ 3 ರನ್, ವಾಷಿಂಗ್ಟನ್ ಸುಂದರ್ 3 ರನ್ ಗಳಿಸಿದರೆ, ಮಾರ್ಕೊ ಜನ್ಸೆನ್ ಅಜೇಯ 8 ರನ್ ಮತ್ತು ಶಶಾಂಕ್ ಸಿಂಗ್ ಅಜೇಯ 25 ರನ್ ಗಳಿಸಿದರು.

ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಅಲ್ಜಾರಿ ಜೋಸೆಫ್ ತಲಾ ಒಂದೊಂದು ವಿಕೆಟ್ ಪಡೆದರು.

ಗುಜರಾತ್ ಟೈಟನ್ಸ್ ಇನ್ನಿಂಗ್ಸ್:

ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ 38 ಎಸೆತಗಳಲ್ಲಿ 68 ರನ್ ಬಾರಿಸಿ ಅಬ್ಬರಿಸಿದರೆ, ಶುಬ್ ಮನ್ ಗಿಲ್ 22, ಹಾರ್ದಿಕ್ ಪಾಂಡ್ಯ 10, ಡೇವಿಡ್ ಮಿಲ್ಲರ್ 17, ಅಭಿನವ್ ಮನೋಹರ್ ಡಕ್ ಔಟ್, ರಾಹುಲ್ ತೆವಾಟಿಯ ಅಜೇಯ 40 ರನ್ ಮತ್ತು ರಶೀದ್ ಖಾನ್ ಅಜೇಯ 31 ರನ್ ಚಚ್ಚಿದರು. ರಾಹುಲ್ ತೆವಾಟಿಯಾ 21 ಎಸೆತಗಳಲ್ಲಿ ಅಜೇಯ 40 ರನ್ ಕಲೆಹಾಕಿದರೆ, ರಶೀದ್ ಖಾನ್ 11 ಎಸೆತಗಳಲ್ಲಿ ಅಜೇಯ 31 ರನ್ ಚಚ್ಚಿ ಅಬ್ಬರಿಸಿದರು.

Umran Malik ವೇಗದ ಬೌಲಿಂಗ್ ಗೆ Hardik Pandya ಸುಸ್ತು | Oneindia Kannada

ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ 4 ಓವರ್ ಬೌಲಿಂಗ್ ಮಾಡಿ 25 ರನ್ ನೀಡಿ 5 ವಿಕೆಟ್ ಪಡೆದ ಉಮ್ರಾನ್ ಮಲಿಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ಅಗ್ರಸ್ಥಾನಕ್ಕೇರಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ತೃತೀಯ ಸ್ಥಾನಕ್ಕೆ ಕುಸಿತ ಕಂಡಿದೆ. ಹಾಗೂ ಟೂರ್ನಿಯಲ್ಲಿ ಇತ್ತಂಡಗಳ ನಡುವೆ ಮೊದಲು ನಡೆದಿದ್ದ ಪಂದ್ಯದಲ್ಲಿ ಸೋತಿದ್ದ ಸೇಡನ್ನು ಗುಜರಾತ್ ಟೈಟನ್ಸ್ ಈ ಪಂದ್ಯದ ಮೂಲಕ ತೀರಿಸಿಕೊಂಡಿದೆ.

Story first published: Thursday, April 28, 2022, 16:34 [IST]
Other articles published on Apr 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+