ಹಾರ್ದಿಕ್ ಪಾಂಡ್ಯರನ್ನು ಎಂಎಸ್ ಧೋನಿಯ ಜೂನಿಯರ್ ಆವೃತ್ತಿ ಎಂದ ಟೈಟನ್ಸ್ ಬೌಲರ್

2022ರ 15ನೇ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡ ತಮ್ಮ ಮೊದಲ ಋತುವಿನಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಳ್ಳುವಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರು ಪ್ರಮುಖ ಪಾತ್ರ ವಹಿಸಿದರು.
ಹಾರ್ದಿಕ್ ಗುಜರಾತ್ ತಂಡವನ್ನು ಮುಂದೆ ನಿಂತು ಮುನ್ನಡೆಸಿದ ರೀತಿ ಅನನ್ಯವಾದದ್ದು. ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ 487 ರನ್ ಗಳಿಸುವುದರೊಂದಿಗೆ ತಂಡದ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಅದ್ಭುತ ಋತುವನ್ನು ಮುಗಿಸಿದರು.
ಅಲ್ಲದೇ 2022ರ ಐಪಿಎಲ್ ಪಂದ್ಯಾವಳಿಯಲ್ಲಿ ಒಟ್ಟು 8 ವಿಕೆಟ್‌ಗಳನ್ನು ಪಡೆದ ಬಾಲ್‌ನೊಂದಿಗೂ ಅದ್ಭುತವಾಗಿ ಆಟವಾಡಿದರು. ಐಪಿಎಲ್ 2022ರ ಫೈನಲ್‌ನಲ್ಲಿನ ಅದ್ಭುತ ಆಲ್‌ರೌಂಡರ್ ಪ್ರದರ್ಶನಕ್ಕಾಗಿ 'ಪಂದ್ಯ ಪುರುಷೋತ್ತಮ' ಪ್ರಶಸ್ತಿಯನ್ನು ಗೆದ್ದುಕೊಂಡರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ಕ್ಕಿಂತ ಮುಂಚಿತವಾಗಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುವ ಹಾರ್ದಿಕ್ ಪಾಂಡ್ಯ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದ್ದರೂ ಗುಜರಾತ್ ಟೈಟನ್ಸ್‌ನ ಚೊಚ್ಚಲ ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲುವ ಮೂಲಕ ಉತ್ತರಿಸಿದರು.

ಮಾಜಿ ಆಟಗಾರರು ಮತ್ತು ಸಹ ಆಟಗಾರರಿಂದ ಪ್ರಶಂಸೆ
28 ವರ್ಷ ವಯಸ್ಸಿನ ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವ ಮತ್ತು ಒತ್ತಡದ ಸಂದರ್ಭಗಳಲ್ಲಿ ಅವರ ಶಾಂತ ಸ್ವಭಾವದ ವರ್ತನೆಗಾಗಿ ಪಂದ್ಯಾವಳಿಯ ನಂತರ ಮಾಜಿ ಆಟಗಾರರು ಮತ್ತು ಸಹ ಆಟಗಾರರಿಂದ ಪ್ರಶಂಸೆ ಪಡೆದರು.
ಐಪಿಎಲ್ 2022ರ ಸೀಸನ್‌ಗೆ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಗುಜರಾತ್ ಟೈಟನ್ಸ್ ಎಡಗೈ ಸ್ಪಿನ್ನರ್ ಆರ್. ಸಾಯಿ ಕಿಶೋರ್, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವವನ್ನು ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಕೆ ಮಾಡಿದ್ದಾರೆ.

ಎಂಎಸ್ ಧೋನಿಯ ಜೂನಿಯರ್ ಆವೃತ್ತಿ ಹಾರ್ದಿಕ್ ಪಾಂಡ್ಯ
"ಇಬ್ಬರ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಎಂಎಸ್ ಧೋನಿಯಂತೆ ಹಾರ್ದಿಕ್ ಪಾಂಡ್ಯ ತಮ್ಮ ಆಟಗಾರರಿಂದ ಅತ್ಯುತ್ತಮವಾದುದನ್ನು ಪಡೆಯುವ ಜಾಣ್ಮೆಯನ್ನು ಹೊಂದಿದ್ದಾರೆ. ಇಬ್ಬರೂ ತಂಡವನ್ನು ಉತ್ತಮವಾಗಿ ಮುನ್ನಡೆಸಿದರು ಮತ್ತು ಇದಕ್ಕಿಂದ ಇನ್ನೇನು ನಾಯಕನಿಂದ ನೀವು ನಿರೀಕ್ಷಿಸುತ್ತೀರಿ," ಎಂದು ಸಾಯಿ ಕಿಶೋರ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
"ನಾನು ಹಾರ್ದಿಕ್ ಪಾಂಡ್ಯ ಅವರನ್ನು ಎಂಎಸ್ ಧೋನಿಯ ಜೂನಿಯರ್ ಆವೃತ್ತಿ ಎಂದು ಕರೆಯುತ್ತೇನೆ," ಎಂದು ಗುಜರಾತ್ ಟೈಟನ್ಸ್ ಸ್ಪಿನ್ ಬೌಲರ್ ಸಾಯಿಕಿಶೋರ್ ಹೇಳಿದರು.

ಎರಡು ಓವರ್‌ಗಳಲ್ಲಿ ಕೇವಲ ಏಳು ರನ್‌ಗಳಿಗೆ ಎರಡು ವಿಕೆಟ್
ಸಾಯಿ ಕಿಶೋರ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಅವಧಿಯಲ್ಲಿ ಯಾವುದೇ ಪಂದ್ಯವನ್ನು ಆಡಿರಲಿಲ್ಲ. ಆದರೆ ಈ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಟೈಟನ್ಸ್‌ಗಾಗಿ ಐಪಿಎಲ್ ಚೊಚ್ಚಲ ಪಂದ್ಯವನ್ನು ಆಡಿದರು ಮತ್ತು ಪಂದ್ಯದಲ್ಲಿ ತಮ್ಮ ಎರಡು ಓವರ್‌ಗಳಲ್ಲಿ ಕೇವಲ ಏಳು ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಬಳಿಸಿದರು. ನಂತರ ಅವರು ಪ್ರತಿ ಪಂದ್ಯದಲ್ಲೂ ಆಡಿದರು ಮತ್ತು ಐಪಿಎಲ್ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ವಿಕೆಟ್ ಪಡೆದರು.
"ಇದು ಉತ್ತಮ ಋತುವಾಗಿದೆ, ಆದರೆ ನಾನು ಇನ್ನೂ ಉತ್ತಮವಾಗಿ ಆಡಬಲ್ಲೆ ಎಂದು ನಾನು ಭಾವಿಸುತ್ತೇನೆ. ಮುಂಬರುವ ತಿಂಗಳುಗಳಲ್ಲಿ ನನ್ನ ಆಟವನ್ನು ಸುಧಾರಿಸಲು ನಾನು ಬಯಸುತ್ತೇನೆ," ಎಂದು ಸಾಯಿಕಿಶೋರ್ ತಮ್ಮ ಪ್ರದರ್ಶನಗಳನ್ನು ಪ್ರತಿಬಿಂಬಿಸಿದರು ಮತ್ತು ತಾವು ಸಿಎಸ್‌ಕೆ ಪರವಾಗಿ ಪಂದ್ಯವನ್ನು ಆಡದಿದ್ದರೂ ಎಂಎಸ್ ಧೋನಿ ಅವರು ಬಹಳಷ್ಟು ಕಲಿಕೆಗೆ ಮನ್ನಣೆ ನೀಡಿದ್ದರು ಎಂದು ಸ್ಮರಿಸಿದರು.

ನನ್ನ ಆಟ-ಓದುವ ಕೌಶಲ್ಯವು ಸುಧಾರಿಸಿದೆ
"ನೆಟ್ಸ್‌ನಲ್ಲಿ ಎಂಎಸ್ ಧೋನಿಗೆ ಬೌಲಿಂಗ್ ಮಾಡುವುದು ಮತ್ತು ಆಟದ ಬಗ್ಗೆ ಅವರೊಂದಿಗೆ ಮಾತನಾಡುವುದು ನನಗೆ ಒಳ್ಳೆಯದಾಗಿದೆ. ನನ್ನ ಆಟ-ಓದುವ ಕೌಶಲ್ಯವು ಸುಧಾರಿಸಿದೆ," ಎಂದು ಗುಜರಾತ್ ಟೈಟನ್ಸ್ ಬೌಲರ್ ಸಾಯಿಕಿಶೋರ್ ಹೇಳಿದ್ದಾರೆ.
25 ವರ್ಷ ವಯಸ್ಸಿನ ಆರ್. ಸಾಯಿಕಿಶೋರ್, ಐಪಿಎಲ್‌ನ ಐದು ಪಂದ್ಯಗಳಿಂದ ಆರು ವಿಕೆಟ್‌ಗಳೊಂದಿಗೆ ಋತುವನ್ನು 7.56ರ ಎಕಾನಮಿ ದರದೊಂದಿಗೆ ಉತ್ತಮವಾಗಿ ಮುಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications