Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022ರ ಚಾಂಪಿಯನ್‌ ಗುಜರಾತ್ ಟೈಟನ್ಸ್‌ ತಂಡದಿಂದ ರೋಡ್ ಶೋ: ಅಭಿಮಾನಿಗಳ ಸಂಭ್ರಮ

Gujarat titans roadshow

ಐಪಿಎಲ್ 2022ರ ಟ್ರೋಫಿ ಗೆದ್ದ ಸಂಭ್ರಮದಲ್ಲಿರುವ ಗುಜರಾತ್ ಟೈಟನ್ಸ್ ತಂಡವು ಇಂದು ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಿಂದ ರೋಡ್‌ ಶೋ ಹಮ್ಮಿಕೊಂಡಿತ್ತು. ಸಂಜೆ 5 ಗಂಟೆ ನಂತರದಲ್ಲಿ ಶುರುವಾದ ರೋಡ್‌ ಶೋದಲ್ಲಿ ಗುಜರಾತ್‌ನ ಬಹುತೇಕ ಆಟಗಾರರು ಭಾಗಿಯಾಗಿದ್ದು, ಸಾವಿರಾರು ಅಭಿಮಾನಿಗಳು ರೋಡ್‌ ಶೋದಲ್ಲಿ ಭಾಗಿಯಾಗಿದ್ರು.

ನಾಯಕ ಹಾರ್ದಿಕ್ ಪಾಂಡ್ಯ ಬೊಂಬಾಟ್ ಬೌಲಿಂಗ್ ಜೊತೆಗೆ, ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಕೊಡುಗೆ ನೀಡುವ ಮೂಲಕ ರಾಜಸ್ತಾನ್ ರಾಯಲ್ಸ್ ವಿರುದ್ಧ ಗೆಲ್ಲಲು ನೆರವಾದ್ರು. ರಾಜಸ್ತಾನ್ ನೀಡಿದ್ದ 131ರನ್‌ಗಳ ಗುರಿಯನ್ನ ಸುಲಭವಾಗಿ ಬೆನ್ನತ್ತಿದ ಗುಜರಾತ್ ಟೈಟನ್ಸ್‌ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿತು. ಈ ಮೂಲಕ ಚೊಚ್ಚಲ ಸೀಸನ್‌ನಲ್ಲೇ ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿದೆ.

GT Road show

"ಈ ಟೈಟಲ್ ನಮಗೆ ವಿಶೇಷವಾದದ್ದು ಏಕೆಂದರೆ ನಾವು ಪರಂಪರೆಯನ್ನು ರಚಿಸಿದ್ದೇವೆ. ಮುಂದಿನ ಪೀಳಿಗೆಯವರು ಇದರ ಬಗ್ಗೆ ಮಾತನಾಡುತ್ತಾರೆ'' ಎಂದು ಪಂದ್ಯದ ನಂತರ ಹಾರ್ದಿಕ್ ಹೇಳಿದ್ದರು.

"ಈ ಪ್ರಯಾಣವನ್ನು ಪ್ರಾರಂಭಿಸಿದ ತಂಡವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಮತ್ತು ಮೊದಲ ವರ್ಷ ಚಾಂಪಿಯನ್‌ಶಿಪ್ ಗೆಲ್ಲುವುದು ತುಂಬಾ ವಿಶೇಷವಾಗಿದೆ." ಐಪಿಎಲ್‌-15 ಕ್ಕಿಂತ ಮುಂಚಿತವಾಗಿ , ಮೆಗಾ ಹರಾಜನ್ನು ಪೂರ್ಣಗೊಳಿಸಿದ ಬಳಿಕ ನಾನು ಮೊದಲ ಬಾರಿಗೆ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಹೋಗುತ್ತೇನೆಂದು ನನಗೆ ತಿಳಿದಿತ್ತು'' ಎಂದು ಗುಜರಾತ್ ಟೈಟಾನ್ಸ್‌ನ ನಾಯಕ ಹೇಳಿದರು.

ಇನ್ನು ಸೋಮವಾರ ನಡೆದ ರೋಡ್‌ಶೋ ಕುರಿತಾಗಿ ಗುಜರಾತ್ ಟೈಟನ್ಸ್‌ನ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಲ್ಲಿ ಫೋಟಗಳನ್ನ ಶೇರ್ ಮಾಡಿದ್ದು, ನೀವು ಇಲ್ಲದೆ ಮೊದಲ ಸೀಸನ್‌ನಲ್ಲೇ ಟ್ರೋಫಿ ಗೆಲ್ಲಲಾಗುತ್ತಿರಲಿಲ್ಲ ಎಂಬ ಶೀರ್ಷಿಕೆ ನೀಡಲಾಗಿದೆ.


ಇನ್ನು ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಟ್ವಿಟ್ಟರ್‌ನಲ್ಲಿ ವೀಡಿಯೋವನ್ನು ಹರಿಬಿಟ್ಟಿದ್ದು, ರೋಡ್‌ ಶೋದಲ್ಲಿ ನೆರದಿದ್ದ ಅಭಿಮಾನಿಗಳನ್ನ ಹುರಿದುಂಬಿಸಿದ್ದಾರೆ.

ಫೈನಲ್‌ನಲ್ಲಿ ಸ್ವತಃ ನಾಯಕ ಹಾರ್ದಿಕ್ 17 ರನ್‌ ನೀಡಿ ಮೂರು ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ತಾನ್ ರಾಯಲ್ಸ್ ಒಂಬತ್ತು ವಿಕೆಟ್‌ಗೆ 130 ರನ್‌ಗಳಿಸಿ ಸೀಮಿತಗೊಂಡಿತು.

ಗೆದ್ದ ಖುಷಿಯಲ್ಲಿ ರೋಡ್ ಶೋ ಮೂಲಕ ಗುಜರಾತ್ ನಲ್ಲಿ ಪಾಂಡ್ಯಾ ಹವಾ ಫುಲ್ ವೈರಲ್ | Oneindia Kannada

Story first published: Tuesday, May 31, 2022, 9:54 [IST]
Other articles published on May 31, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+