ಕೆಜಿಎಫ್ 2 ವೀಕ್ಷಿಸಿದ ಗುಜರಾತ್ ತಂಡದ ಆಟಗಾರರಿಂದ ಶಿಳ್ಳೆ, ಚಪ್ಪಾಳೆ; ಸಿನಿಮಾ ಬಗ್ಗೆ ಹಾರ್ದಿಕ್ ಹೇಳಿದ್ದಿಷ್ಟು

ಸದ್ಯ ಭಾರತದಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಎರಡು ವಿಷಯಗಳೆಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರ. ಹೌದು, ಕ್ರಿಕೆಟ್ ಜಗತ್ತಿನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿ ಅಬ್ಬರಿಸುತ್ತಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಚಿತ್ರವನ್ನು ವೀಕ್ಷಿಸಿದ್ದರು. ಇದೀಗ ಗುಜರಾತ್ ಟೈಟನ್ಸ್ ತಂಡದ ಆಟಗಾರರು ಸಹ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ವೀಕ್ಷಿಸಿದ್ದು, ಈ ವಿಷಯವನ್ನು ಸ್ವತಃ ಗುಜರಾತ್ ಟೈಟನ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಟ್ವೀಟ್ ಕಂಡ ಸಿನಿಮಾ ಪ್ರೇಮಿಗಳು ಅದರಲ್ಲಿಯೂ ಕನ್ನಡ ಸಿನಿ ರಸಿಕರು ಕನ್ನಡಿಗರು ತಯಾರಿಸಿದ ಚಿತ್ರವೊಂದನ್ನು ದೇಶದ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟಿಗರು ವೀಕ್ಷಿಸುತ್ತಿರುವುದನ್ನು ಕಂಡು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಗುಜರಾತ್ ಟೈಟನ್ಸ್ ಫ್ರಾಂಚೈಸಿ ತಮ್ಮ ಆಟಗಾರರು ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದು, ನಿನ್ನೆ ( ಏಪ್ರಿಲ್ 29 ) ಎಲ್ಲರೂ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಈ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ, ಶುಬ್‌ಮನ್ ಗಿಲ್, ರಾಹುಲ್ ತೆವಾಟಿಯಾ ಹಾಗೂ ರಶೀದ್ ಖಾನ್ ಸೇರಿದಂತೆ ಇನ್ನೂ ಹಲವು ಆಟಗಾರರು ಚಿತ್ರ ವೀಕ್ಷಿಸಿ ಖುಷಿಯಿಂದ ಮನರಂಜನೆ ಪಡೆದ ದೃಶ್ಯಗಳನ್ನು ಈ ಕೆಳಕಂಡ ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರ ವೀಕ್ಷಿಸಿದ ನಂತರ ಗುಜರಾತ್ ಟೈಟನ್ಸ್ ತಂಡದ ಆಟಗಾರರು ಯಾವ ರೀತಿಯ ಪ್ರತಿಕ್ರಿಯೆ ನೀಡಿದರು ಎಂಬ ಕಿರು ಮಾಹಿತಿ ಈ ಕೆಳಕಂಡಂತಿದೆ ಓದಿ..

ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಹಾರ್ದಿಕ್ ಪಾಂಡ್ಯ
ಇನ್ನು ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತುಂಬಾ ಕುತೂಹಲದಿಂದ ಪಂದ್ಯ ವೀಕ್ಷಿಸಿದ ಚಿತ್ರ ವೀಕ್ಷಿಸಿದ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಚಿತ್ರ ಮುಗಿದ ನಂತರ ಕೆಜಿಎಫ್ ಅಬ್ಬರಕ್ಕೆ ಮನಸೋತ ಹಾರ್ದಿಕ್ ಪಾಂಡ್ಯ ಚಪ್ಪಾಳೆ ತಟ್ಟಿದ್ದಾರೆ. ಇನ್ನು ತಂಡದ ಇತರೆ ಆಟಗಾರರಾದ ಶುಬ್‌ಮನ್ ಗಿಲ್ ಹಾಗೂ ರಶೀದ್ ಖಾನ್ ಕೂಡ ಸಿನಿಮಾವನ್ನು ಗಮನವಿಟ್ಟು ವೀಕ್ಷಿಸುತ್ತಿದ್ದನ್ನು ಕಾಣಬಹುದಾಗಿದೆ.

ಸಿನಿಮಾ ಬಗ್ಗೆ ಆಟಗಾರರು ಹೇಳಿದ್ದೇನು?
ಚಿತ್ರ ವೀಕ್ಷಣೆ ಮುಗಿದ ನಂತರ ಕ್ಯಾಮೆರಾ ಮುಂದೆ ಬಂದು ಪ್ರೇಕ್ಷಕರ ರೀತಿಯಲ್ಲೇ ಸಾಲಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ ಗುಜರಾತ್ ಟೈಟನ್ಸ್ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು. ಶುಬ್‌ಮನ್ ಗಿಲ್ 'ಲವ್ಡ್ ಇಟ್' ಎಂದರೆ, ತಂಡದ ನಾಯಕ ಹಾರ್ದಿಕ್ ಪಾಂಡ್ಯ 'ವೆರಿ ನೈಸ್' ಎಂದು ಉತ್ಸಾಹದಿಂದ ಹೇಳಿದರು. ಚಿತ್ರ ಮುಗಿದ ನಂತರ ಇಡೀ ಗುಜರಾತ್ ಟೈಟನ್ಸ್ ತಂಡ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿರುವ ಹಾಗೂ ಚಿತ್ರ ವೀಕ್ಷಣೆ ವೇಳೆ ಶಿಳ್ಳೆ ಹೊಡೆದಿರುವ ದೃಶ್ಯಗಳನ್ನೂ ಸಹ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಕೆಜಿಎಫ್ - ಗುಜರಾತ್ ಅಬ್ಬರ
ಕೆಜಿಎಫ್ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿ ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿದ್ದರೆ, ಗುಜರಾತ್ ಟೈಟನ್ಸ್ ಮೈದಾನದಲ್ಲಿ ಅಬ್ಬರಿಸುತ್ತಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಪ್ಲೇಆಫ್ ಪ್ರವೇಶಿಸುವ ಸನಿಹದಲ್ಲಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 8 ಪಂದ್ಯಗಳನ್ನಾಡಿರುವ ಗುಜರಾತ್ ಟೈಟನ್ಸ್ ಏಳು ಪಂದ್ಯಗಳಲ್ಲಿ ಗೆದ್ದು, ಕೇವಲ ಒಂದೇ ಒಂದು ಪಂದ್ಯದಲ್ಲಿ ಸೋತು 14 ಅಂಕಗಳನ್ನು ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications