For Quick Alerts
ALLOW NOTIFICATIONS  
For Daily Alerts
 

GT vs KKR: ಪಂದ್ಯದ ಟಾಸ್ ವರದಿ ಮತ್ತು ಪ್ಲೇಯಿಂಗ್ ಇಲೆವೆನ್ ಮಾಹಿತಿ

IPL 2022: Gujarat Titans vs Kolkata Knight Riders toss report and playing 11

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 35ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ಸೆಣಸಾಟ ನಡೆಸುತ್ತಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಡಾ ಡಿ ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ.

ಇನ್ನು ಗುಜರಾತ್ ಟೈಟನ್ಸ್ ತಂಡದ ಕೊನೆಯ ಪಂದ್ಯಕ್ಕೆ ತೊಡೆ ಗಾಯದ ಸಮಸ್ಯೆಯಿಂದಾಗಿ ಅಲಭ್ಯಾಗಿದ್ದ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಮರಳಿ ತಂಡ ಸೇರಿದ್ದು, ನಾಯಕನ ಜವಾಬ್ದಾರಿಯನ್ನು ಮುಂದುವರೆಸಿದ್ದಾರೆ. ಇನ್ನು ಟಾಸ್ ಮುಗಿದ ನಂತರ ತಂಡದಲ್ಲಾಗಿರುವ ಬದಲಾವಣೆ ಕುರಿತು ಮಾತನಾಡಿದ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಕೇವಲ ಒಂದೇ ಒಂದು ಬದಲಾವಣೆಯಾಗಿದ್ದು, ತಾನು ತಂಡ ಸೇರಿದ್ದು, ವಿಜಯ್ ಶಂಕರ್ ತಂಡದಿಂದ ಹೊರಬಿದ್ದಿದ್ದಾರೆ ಎಂದು ತಿಳಿಸಿದರು.

ಆಡುವ ಬಳಗಗಳು:

ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್ ಮತ್ತು ಮೊಹಮ್ಮದ್ ಶಮಿ

ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ

ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗದ ಕುರಿತು ಮಾತನಾಡಿದ ನಾಯಕ ಶ್ರೇಯಸ್ ಐಯ್ಯರ್ ತಂಡದಲ್ಲಾಗಿರುವ ಕೆಲ ಬದಲಾವಣೆಗಳನ್ನು ತಿಳಿಸಿದರು. ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗಕ್ಕೆ ಸ್ಯಾಮ್ ಬಿಲ್ಲಿಂಗ್ಸ್, ಟಿಮ್ ಸೌಥಿ ಮತ್ತು ರಿಂಕು ಸಿಂಗ್ ಸೇರಿಕೊಂಡಿದ್ದಾರೆ ಎಂದು ಶ್ರೇಯಸ್ ಐಯ್ಯರ್ ತಿಳಿಸಿದರು.

Story first published: Saturday, April 23, 2022, 16:44 [IST]
Other articles published on Apr 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+