ಮುಂದಿನ ವರ್ಷವಾದ್ರೂ ನಮ್ಮ ತಂಡಕ್ಕೆ ಆ ಆಟಗಾರನನ್ನ ಸೇರಿಸಿಕೊಳ್ಳಬೇಕೆಂಬ ಆಸೆ: ಹಾರ್ದಿಕ್ ಪಾಂಡ್ಯ

ಐಪಿಎಲ್ 2022ರ ಸೀಸನ್‌ನಲ್ಲಿ ಬಹು ಯಶಸ್ವಿ ತಂಡವಾಗಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್, ಶುಕ್ರವಾರ (ಮೇ.06) ಮುಂಬೈ ಟೈಟನ್ಸ್ ವಿರುದ್ಧ ಕಾದಾಟ ನಡೆಸಲಿದ್ದು, ಈ ಒಬ್ಬ ಆಟಗಾರ ನಮ್ಮ ಬಳಿ ಇರಬೇಕಿತ್ತು ಎಂದು ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಆಸೆ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಟೈಟನ್ಸ್ ಆಡಿರುವ 10 ಪಂದ್ಯಗಳಲ್ಲಿ ಬರೋಬ್ಬರಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಹಾರ್ದಿಕ್ ಪಾಂಡ್ಯ ಉತ್ತಮ ನಾಯಕತ್ವದ ಜೊತೆಗೆ ಗುಜರಾತ್ ಟೈಟನ್ಸ್ ತಂಡದ ಆಟಗಾರರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬ ಮ್ಯಾಚ್ ವಿನ್ನರ್‌ಗಳನ್ನ ಗುಜರಾತ್ ಟೈಟನ್ಸ್ ತಂಡದಲ್ಲಿ ಕಾಣಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಗುಜರಾತ್ ಟೈಟನ್ಸ್ ಶೇರ್ ಮಾಡಿರುವ ವೀಡೀಯೋದಲ್ಲಿ ಮಾತನಾಡಿರುವ ನಾಯಕ ಹಾರ್ದಿಕ್ ಪಾಂಡ್ಯ ಈ ಒಬ್ಬ ಮುಂಬೈ ಇಂಡಿಯನ್ಸ್ ಆಟಗಾರ ನಮ್ಮ ತಂಡದಲ್ಲಿರಬೇಕಿತ್ತು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷವಾದ್ರೂ ಆತನನ್ನ ತಂಡಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ, ಆದ್ರೆ ಬಹುತೇಕ ಅದು ಸಾಧ್ಯವಿಲ್ಲ ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ತನ್ನ ತಂಡದಲ್ಲಿರಬೇಕಿತ್ತು ಎಂದು ಬಯಸಿದ್ದಾರೆ. ಆದ್ರೆ ನಂತರದಲ್ಲಿ ಅದು ಸಾಧ್ಯವಿಲ್ಲ ಎಂದು ತಿಳಿದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಪೋಲಿ (ಪೊಲಾರ್ಡ್) ಅವರಿಗೆ ಉತ್ತಮ ದಿನವನ್ನು ಹೊಂದಲಿ ಎಂದು ನಾನು ಬಯಸುತ್ತೇನೆ, ಆದರೆ ನಾವು ಗೆಲ್ಲುತ್ತೇವೆ. ನಾನು ಕೆಲವು ದಿನಗಳ ಹಿಂದೆ ಅವರಿಗೆ ಸಂದೇಶ ಕಳುಹಿಸಿದ್ದೇನೆ ಮತ್ತು ನೀವು ಚೆನ್ನಾಗಿದ್ದೀರೆಂದು ಭಾವಿಸುತ್ತೇನೆ ಮತ್ತು ನೀವು ಚೆನ್ನಾಗಿ ಆಟವಾಡುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದೆ. ತಮಾಷೆಯ ರೀತಿಯಲ್ಲಿ ನಾನು ಹೇಳಿದೆ 'ನಿಮಗೆ ಗೊತ್ತಿಲ್ಲ, ನೀವು ಮುಂದಿನ ವರ್ಷ ನಮ್ಮ ಬಳಿಗೆ ಬರಬಹುದು!' ಇದು ನನ್ನ ಆಸೆ ಆದರೆ ಅದು ಎಂದಿಗೂ ಆಗುವುದಿಲ್ಲ ಎಂದು ನನಗೆ ತಿಳಿದಿದೆ, "ಎಂದು ಹಾರ್ದಿಕ್ ಹೇಳಿದರು.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ಶುಕ್ರವಾರ (ಮೇ. 06) ಮುಖಾಮುಖಿಯಾಗಲಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಗುಜರಾತ್ ಟೈಟನ್ಸ್ ಅಗ್ರಸ್ಥಾನದಲ್ಲಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಕೊನೆಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications