IPL 2022: 10 ತಂಡಗಳು, ಎರಡು ಗುಂಪು, 4 ಸ್ಟೇಡಿಯಂನಲ್ಲಿ ನಡೆಯಲಿದೆ ಪಂದ್ಯಗಳು

ಇಂಡಿಯನ್ ಪ್ರೀಮಿಯರ್ ಲೀಗ್ ನ 15ನೇ ಸೀಸನ್ ಮಾರ್ಚ್ 26ರಂದು ಆರಂಭವಾಗಲಿದೆ. ಈ ಬಾರಿಯ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಗುಂಪು ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಅಪೂರ್ವವಾಗಿ ಈ ಬಾರಿ ಎರಡು ಗುಂಪುಗಳಲ್ಲಿ ಟೂರ್ನಿ ಆಯೋಜಿಸಲಾಗಿದೆ. ಪ್ರತಿ ತಂಡವು 14 ಪಂದ್ಯಗಳನ್ನು ಸ್ವೀಕರಿಸುತ್ತದೆ. ಏಳು ಸ್ಥಳೀಯ ಪಂದ್ಯಗಳು ಮತ್ತು 7 ಇತರೆ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ಪುಣೆ ಮತ್ತು ಮುಂಬೈ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ. 55 ಪಂದ್ಯಗಳು ಮುಂಬೈನ ವಾಂಖೆಡೆ, ಬ್ರಬೋರ್ನ್ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉಳಿದ 15 ಪಂದ್ಯಗಳು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ಲೇ-ಆಫ್ ಪಂದ್ಯಗಳ ಸ್ಥಳವನ್ನು ನಂತರ ನಿರ್ಧರಿಸಲಾಗುತ್ತದೆ. ಈ ಕುರಿತಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಪ್ರತಿ ಗುಂಪಿನಲ್ಲಿರಲಿವೆ ಐದು ತಂಡಗಳು
ಪ್ರತಿ ಗುಂಪಿನಲ್ಲಿ ಐದು ತಂಡಗಳು ಇರುತ್ತವೆ. ಪ್ರತಿ ತಂಡಗಳು ತಲಾ ಎರಡು ಬಾರಿ ಮುಖಾಮುಖಿಯಾಗಲಿವೆ. ಮೇ 29 ರಂದು ಫೈನಲ್ ನಡೆಯಲಿದೆ. ಅಹಮದಾಬಾದ್ ಫೈನಲ್ ಆತಿಥ್ಯದ ಅವಕಾಶ ಸಿಕ್ಕಿದ್ದು, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಕಣಕ್ಕಿಳಿಯಲಿವೆ.
ಎ ಮತ್ತು ಬಿ ಗುಂಪುಗಳು ಪರಸ್ಪರ ಪ್ರಬಲವಾಗಿವೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರಿಕೊಂಡಿದೆ. ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೇರಿಕೊಂಡಿದೆ.

ಧೋನಿ ಮತ್ತು ಕೊಹ್ಲಿ ಒಂದೇ ಗುಂಪಿನಲ್ಲಿ ಸೇರ್ಪಡೆ
ಧೋನಿ ಮತ್ತು ವಿರಾಟ್ ಕೊಹ್ಲಿ ಒಂದೇ ಗುಂಪಿನಲ್ಲಿ ಬಂದಿರುವುದು ಗಮನಾರ್ಹ. A ಗುಂಪು B ಗಿಂತ ಪ್ರಬಲವಾಗಿದೆ. ಮುಂಬೈ, ಕೆಕೆಆರ್, ಡೆಲ್ಲಿ ಜೊತೆಗೆ ರಾಜಸ್ಥಾನ, ಲಖನೌ ಇರುವುದರಿಂದ ಸ್ಪರ್ಧೆ ಕಠಿಣಗೊಳ್ಳಲಿದೆ. ಈ ಬಾರಿ ಗ್ರೂಪ್ ಗೆ ತೆರಳುವ ಮೂಲಕ ಹಳೇ ಸಂಭ್ರಮ ಕಳೆದು ಹೋಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಚೆನ್ನೈ -ಮುಂಬೈ ಎರಡು ಬೇರೆ ಬೇರೆ ಗುಂಪುಗಳಲ್ಲಿದ್ದಾರೆ. ಇದರ ಜೊತೆಗೆ ಮುಂಬೈನಲ್ಲಿ ಹೆಚ್ಚಿನ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದಾಗ ಇತರೆ ತಂಡಗಳು ಅಸಮಾಧಾನ ವ್ಯಕ್ತಪಡಿಸಿದ್ದವು.
ವಿರಾಟ್ ಕೊಹ್ಲಿ ಕರೆ ಮಾಡಿ, ನನ್ನ ಬಳಿ ಸಹಾಯ ಕೇಳಿದ್ದ ಎಂದ ಸಚಿನ್ ತೆಂಡೂಲ್ಕರ್

ಮುಂಬೈನಲ್ಲಿ ಹೆಚ್ಚಿನ ಪಂದ್ಯ ನಡೆದರೂ ಮುಂಬೈ ಇಂಡಿಯನ್ಸ್‌ಗೆ ಅವಕಾಶವಿಲ್ಲ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯುವುದರಿಂದ ಮುಂಬೈಗೆ ಹೆಚ್ಚಿನ ಪಂದ್ಯಗಳು ಸಿಗುವುದಿಲ್ಲ. ಎಲ್ಲರಿಗೂ ಸಮಾನ ಪರಿಗಣನೆ ಸಿಗುತ್ತದೆ. ಕಳೆದ ಋತುವಿನಲ್ಲಿ ಪ್ಲೇ-ಆಫ್ ಅನ್ನು ಸಹ ಕಳೆದುಕೊಂಡಿದ್ದ ಮುಂಬೈ ಈ ಬಾರಿ ಪ್ರಬಲ ಪುನರಾಗಮನಕ್ಕೆ ಸಜ್ಜಾಗಿದೆ. ಐಪಿಎಲ್ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು 15.25 ಕೋಟಿ ರೂ.ಗೆ ಮುಂಬೈ ಖರೀದಿಸಿತ್ತು. ಮುಂಬೈ ತಂಡಕ್ಕೆ ಜೋಫ್ರಾ ಆರ್ಚರ್ ಕೂಡ ಸೇರ್ಪಡೆಗೊಂಡಿದ್ದರು, ಸೀಸನ್‌ನಲ್ಲಿ ಭಾಗಿ ಕುರಿತು ಅನುಮಾನ ಮೂಡಿಸಿದೆ.
ಪ್ರೊ ಕಬಡ್ಡಿ ಸೀಸನ್ 8 ಫೈನಲ್: ದಬಾಂಗ್ ಡೆಲ್ಲಿ vs ಪಾಟ್ನಾ ಪೈರೇಟ್ಸ್ ನಡುವೆ ಟ್ರೋಫಿಗಾಗಿ ಕಾದಾಟ

ಹಳೆಯ ಆಟಗಾರರಿಗೆ ಸಿಎಸ್‌ಕೆ ಬೆಂಬಲ
ಕಳೆದ ಋತುವಿನಲ್ಲಿ ತಂಡದಲ್ಲಿದ್ದ ಪ್ರಮುಖ ಆಟಗಾರರನ್ನು ಸಿಎಸ್‌ಕೆ ಒಟ್ಟುಗೂಡಿಸಿದೆ. ಎಂಎಸ್ ಧೋನಿ ನಾಯಕನಾಗಿದ್ದರೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ರವೀಂದ್ರ ಜಡೇಜಾ, ರಾಬಿನ್ ಉತ್ತಪ್ಪ, ಡ್ವೇನ್ ಬ್ರಾವೋ ಮತ್ತು ದೀಪಕ್ ಚಾಹರ್ ಸಿಎಸ್‌ಕೆ ಜೊತೆಗಿದ್ದಾರೆ. ಆದ್ರೆ ಈ ಬಾರಿ ಶಾರ್ದೂಲ್ ಠಾಕೂರ್ ಮತ್ತು ಫಾಫ್ ಡುಪ್ಲೆಸಿಸ್ ಅವರನ್ನು ಕಳೆದುಕೊಂಡಿತು. ಪ್ರತಿ ತಂಡದಲ್ಲೂ ಬಲಿಷ್ಠ ಆಟಗಾರರು ಇರುವುದರಿಂದ ಈ ಬಾರಿಯ ಹೋರಾಟ ಕಠಿಣವಾಗುವುದು ಖಚಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications