ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಸೀಸನ್ 8 ಫೈನಲ್: ದಬಾಂಗ್ ಡೆಲ್ಲಿ vs ಪಾಟ್ನಾ ಪೈರೇಟ್ಸ್‌ ನಡುವೆ ಟ್ರೋಫಿಗಾಗಿ ಕಾದಾಟ

Patna vs delhi final

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರಾಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ 2021ರ ಸೀಸನ್‌ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮೂರು ಬಾರಿಯ ಪ್ರೊ ಕಬಡ್ಡಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಮತ್ತು ಚೊಚ್ಚಲ ಕಪ್‌ ಗೆಲ್ಲುವ ಕನಸು ಹೊತ್ತು ಬಂದಿರುವ ದಬಾಂಗ್ ಡೆಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ಬುಲ್ಸ್‌ ತಂಡವನ್ನ 35-40 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ ದಬಾಂಗ್ ಡೆಲ್ಲಿ ಲೀಗ್ ಹಂತದಲ್ಲಿ ಹೆಚ್ಚು ಕಾಲ ಟೇಬಲ್ ಟಾಪರ್ ಆಗಿ ಕಾಣಿಸಿಕೊಂಡಿತ್ತು. ಸೀಸನ್ 7 ರ ರನ್ನರ್ ಅಪ್ ದಬಾಂಗ್ ಡೆಲ್ಲಿ ಈ ಬಾರಿ ಟ್ರೋಫಿ ಗೆಲ್ಲಲೇಬೇಕೆಂದು ಪಣತೊಟ್ಟಿದೆ.

ಮತ್ತೊಂದೆಡೆ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ತಂಡವು ಯುಪಿ ಯೋಧಾ ವಿರುದ್ಧ 38-27 ಪಾಯಿಂಟ್ಸ್‌ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಸತತ ಮೂರು ಬಾರಿ ಚಾಂಪಿಯನ್ ಆಗಿದ್ದ ಪಾಟ್ನಾ ಪೈರೇಟ್ಸ್‌ ಈ ಬಾರಿ ಸಖತ್ ತಯಾರಿಯೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ.

ಟೇಬಲ್ ಟಾಪರ್ ಆಗಿದ್ದ ಪಾಟ್ನಾ ಪೈರೇಟ್ಸ್‌

ಟೇಬಲ್ ಟಾಪರ್ ಆಗಿದ್ದ ಪಾಟ್ನಾ ಪೈರೇಟ್ಸ್‌

ಲೀಗ್ ಹಂತದಲ್ಲಿ ಪಾಟ್ನಾ ಪೈರೇಟ್ಸ್‌ ಟೇಬಲ್ ಟಾಪರ್ ಆಗಿ ಕ್ವಾಲಿಫೈ ಆದ ಮೊದಲ ತಂಡವಾಗಿತ್ತು. ಆಡಿದ 22 ಪಂದ್ಯಗಳಲ್ಲಿ 16 ಗೆಲುವು ಮತ್ತು 5 ಸೋಲು ಮತ್ತು 1 ಪಂದ್ಯ ಟೈನೊಂದಿಗೆ ಒಟ್ಟು 86 ಪಾಯಿಂಟ್ಸ್‌ಗಳೊಂದಿಗೆ ನಾಕೌಟ್ ಪ್ರವೇಶಿಸಿತು.

ಇನ್ನು ಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಲ್ಲದೆ ಕ್ವಾಲಿಫೈ ಆದ ಎರಡನೇ ತಂಡವಾಗಿದೆ. 22 ಪಂದ್ಯಗಳಲ್ಲಿ 12 ಗೆಲುವು ಮತ್ತು 6 ಸೋಲು ಮತ್ತು
4 ಪಂದ್ಯ ಟೈನೊಂದಿಗೆ ಒಟ್ಟು 75 ಪಾಯಿಂಟ್ಸ್‌ಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿತು.

ಲೀಗ್‌ ಹಂತದಲ್ಲಿ ಡೆಲ್ಲಿ ವಿರುದ್ಧ ಎಡವಿದ ಪಾಟ್ನಾ ಪೈರೇಟ್ಸ್

ಲೀಗ್‌ ಹಂತದಲ್ಲಿ ಡೆಲ್ಲಿ ವಿರುದ್ಧ ಎಡವಿದ ಪಾಟ್ನಾ ಪೈರೇಟ್ಸ್

ಕುತೂಹಲಕಾರಿ ಅಂಶವೆಂದರೆ, ಲೀಗ್ ಹಂತದಲ್ಲಿ ಡೆಲ್ಲಿ ವಿರುದ್ಧದ ಎರಡೂ ಪಂದ್ಯಗಳಲ್ಲಿ ಪಾಟ್ನಾ ಗೆಲ್ಲಲು ಹೆಣಗಾಡಿದೆ. ಆಲ್ ರೌಂಡರ್ ಸಂದೀಪ್ ನರ್ವಾಲ್ ಅವರ ಅದ್ಭುತ ಪ್ರದರ್ಶನದಿಂದಾಗಿ ಅವರು ಮೊದಲ ಪಂದ್ಯದಲ್ಲಿ ಸೋತರು. ಎರಡನೇ ಪಂದ್ಯವು ಮಂಜೀತ್ ಛಿಲ್ಲರ್ ಅವರ ಹೈ 5 ಗೆ ನಿಂದಾಗಿ ಡೆಲ್ಲಿ ಗೆದ್ದಿತು. ಈ ಅನುಭವಿ ತಾರೆಗಳು ಮತ್ತೊಮ್ಮೆ ಡೆಲ್ಲಿಗೆ ಫೈನಲ್‌ನಲ್ಲಿ ಪ್ರಮುಖರಾಗುತ್ತಾರೆ.

ವಿರಾಟ್ ಕೊಹ್ಲಿ ಕರೆ ಮಾಡಿ, ನನ್ನ ಬಳಿ ಸಹಾಯ ಕೇಳಿದ್ದ ಎಂದ ಸಚಿನ್ ತೆಂಡೂಲ್ಕರ್

ಪಾಟ್ನಾ ಪೈರೇಟ್ಸ್‌ ಬಲ

ಪಾಟ್ನಾ ಪೈರೇಟ್ಸ್‌ ಬಲ

ಪಾಟ್ನಾ ಪೈರೇಟ್ಸ್‌ ರೇಡಿಂಗ್ ಮತ್ತು ಟ್ಯಾಕಲ್ ಎರಡಲ್ಲೂ ಉತ್ತಮ ಆಟಗಾರರನ್ನ ಹೊಂದಿದೆ. ಎಡಬದಿಯ ಕಾರ್ನರ್‌ನಲ್ಲಿ ಇರಾನ್‌ನ ಮೊಹಮ್ಮದ್ ರೇಜಾ ಶೆಡ್ಲೂ ಈ ಆವೃತ್ತಿಯಲ್ಲಿ ಅತಿ ಹೆಚ್ಚು ಟ್ಯಾಕ್ಲಿಂ್ ಪಾಯಿಂಟ್ಸ್‌ಗಳನ್ನ ಪಡೆದಿದ್ದಾರೆ. ಕವರ್‌ ಡಿಫೆಂಡರ್‌ಗಳಾದ ನೀರಜ್ ಕುಮಾರ್ ಮತ್ತು ಸಾಜಿನ್ ಸಮರ್ಥ ರೇಡರ್‌ಗಳನ್ನ ಖೆಡ್ಡಾಕ್ಕೆ ಕೆಡವಬಲ್ಲರು.

ಇನ್ನು ರೇಡಿಂಗ್‌ನಲ್ಲಿ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಅವರಿಗೆ ಸಚಿನ್ ಗುಮಾನ್ ಸಿಂಗ್ ಮತ್ತು ಮೋನು ಗೋಯತ್ ಅವರ ಬಲ ಇದೆ.

ಸತತ 10 ಟಿ20 ಪಂದ್ಯ ಗೆದ್ದ ಭಾರತ: ರೋಹಿತ್ ಶರ್ಮಾ ನಾಯಕತ್ವದಲ್ಲಿ ದಾಖಲೆ

ದಬಾಂಗ್ ಡೆಲ್ಲಿ ತಾಕತ್ತು

ದಬಾಂಗ್ ಡೆಲ್ಲಿ ತಾಕತ್ತು

ಎಕ್ಸ್‌ಪ್ರೆಸ್ ಖ್ಯಾತಿ ನವೀನ್ ಕುಮಾರಬ್ ದಬಾಂಗ್ ಡೆಲ್ಲಿ ತಂಡದ ರೇಡಿಂಗ್ ಸೂಪರ್‌ಸ್ಟಾರ್ ಆಗಿದ್ದಾರೆ. ಟ್ಯಾಕಲ್ ವಿಭಾಗದಲ್ಲಿ ಜೀವ ಕುಮಾರ್ ಬಲ ಇದ್ದು, ರೇಡಿಂಗ್‌ನಲ್ಲಿ ಸಂದೀಪ್ ನರ್ವಾಲ್, ಮಂಜಿತ್ ಚಿಲ್ಲರ್, ನೀರಜ್ ನರ್ವಾಲ್, ಸುಶಾಂತ್ ಸೈಲ್ ಹಾಗೂ ನಿತಿನ್ ಪವಾರ್ ಸಾಥ್ ನೀಡಲಿದ್ದಾರೆ.

ಇನ್ನು ಡೆಲ್ಲಿ ರಕ್ಷಣಾ ವಿಭಾಗವು ಬಲಿಷ್ಠವಾಗಿದ್ದು, ಜೋಗಿಂದರ್ ನರ್ವಾಲ್, ಮೋಹಿತ್ ಬೇನ್ಸ್‌ವಾಲ್, ಸುಮಿತ್ ಬೇನ್ಸ್‌ವಾಲ್ ಅವರಿಗೆ ಸಂದೀಪ್ ನರ್ವಾಲ್ ಮತ್ತು ಮಂಜಿತ್ ಚಿಲ್ಲರ್ ಅನುಭವವಿದೆ. ಈಗಾಗಲೇ ಒಂದು ಬಾರಿ ಫೈನಲ್‌ನಲ್ಲಿ ಎಡವಿರುವ ಡೆಲ್ಲಿ ಚಾಂಪಿಯನ್ ಪಾಟ್ನಾ ವಿರುದ್ಧ ಗೆಲ್ಲುವುದೇ ಕಾದು ನೋಡಬೇಕಿದೆ. ಏಕೆಂದರೆ ಪಾಟ್ನಾ ಪೈರೇಟ್ಸ್ ಫೈನಲ್‌ನಲ್ಲಿ ಒಂದು ಬಾರಿಯೂ ಸೋಲನ್ನ ಕಂಡಿಲ್ಲ.

ಪಂದ್ಯದ ನೇರಪ್ರಸಾರದ ಮಾಹಿತಿ

ಪಂದ್ಯದ ನೇರಪ್ರಸಾರದ ಮಾಹಿತಿ

ಪ್ರೊ ಕಬಡ್ಡಿ ಲೀಗ್ 8ನೇ ಸೀಸನ್‌ ಫೈನಲ್ ಪಂದ್ಯವು ಇಂದು (ಫೆ. 25) ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರಾಂಡ್ ಹೋಟೆಲ್‌ ನಡೆಯಲಿದೆ. ಪಂದ್ಯ ರಾತ್ರಿ 8.30ಕ್ಕೆ ಆರಂಭಗೊಳ್ಳಲಿದ್ದು, ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಬರಲಿದೆ. ಇನ್ನು ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲೂ ಲೈವ್ ವೀಕ್ಷಿಸಬಹುದು.

Story first published: Friday, February 25, 2022, 17:04 [IST]
Other articles published on Feb 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X