ಸಿಎಸ್‌ಕೆ ತಂಡ ಸೇರಿದ ಮೇಲೆ ತಿಳಿಯಿತು, ಮೊಯಿನ್ ಅಲಿ ಅದ್ಭುತ ಆಟಗಾರ: ಮೈಕಲ್ ಹಸ್ಸಿ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಮೊಯಿನ್ ಅಲಿ ಅದ್ಭುತ ಬ್ಯಾಟಿಂಗ್ ಪ್ರತಿಭೆ ಎಂದು ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಹೇಳಿದ್ದಾರೆ. ಮೊಯಿನ್ ಅಲಿ ಸಿಎಸ್‌ಕೆ ತಂಡವನ್ನ ಸೇರುವ ತನಕ ಆತನ ಬ್ಯಾಟಿಂಗ್ ಕುರಿತಾಗಿ ಅಷ್ಟಾಗಿ ತಿಳಿದಿರಲಿಲ್ಲ, ಆದ್ರೆ ಕಳೆದ ಸೀಸನ್‌ನಲ್ಲಿ ಆತನ ಸಾಮರ್ಥ್ಯದ ಅರಿವಾಗಿದೆ ಎಂದು ಹಸ್ಸಿ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮೈಕಲ್ ಹಸ್ಸಿ, ಮೊಯಿನ್ ಅಲಿಯನ್ನ ಹೊಗಳಿದ್ದಾರೆ.
'' ಮೊಯಿನ್ ಅಲಿ, ಪ್ರಾಮಾಣಿಕವಾಗಿ, ನಂಬಲಾಗದ ಆಟಗಾರ. ಕಳೆದ ಸೀಸನ್‌ನಲ್ಲಿ ಅವರು ಸಿಎಸ್‌ಕೆ ತಂಡಕ್ಕೆ ಸೇರಿದಾಗ ಮಾತ್ರ ನಾನು ಅವರನ್ನು ಮೊದಲ ಬಾರಿಗೆ ಹತ್ತಿರದಿಂದ ನೋಡಿದೆ. ಆದ್ದರಿಂದ, ಅವನು ನಿಜವಾಗಿಯೂ ಅಷ್ಟೊಂದು ಉತ್ತಮ ಆಟಗಾರ ಎಂದು ನನಗೆ ತಿಳಿದಿರಲಿಲ್ಲ. ಅವರೊಬ್ಬ ಸುಂದರ ಬ್ಯಾಟ್ಸ್‌ಮನ್, ಆಕರ್ಷಕ ಆಟಗಾರ. ಅವರು ಕ್ರಿಕೆಟ್ ಚೆಂಡನ್ನು ಬಾರಿಸುವ ರೀತಿ ಅದ್ಭುತವಾಗಿದೆ'' ಎಂದು ಮೈಕಲ್ ಹಸ್ಸಿ ಹೇಳಿದ್ದಾರೆ.
ಮೊದಲ ಮೂರು ಪಂದ್ಯಗಳಲ್ಲಿ ಸೋಲನ್ನ ಅನುಭವಿಸಿದ್ರೂ ಸಹ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಏಕೆ ಗಾಬರಿಗೊಂಡಿಲ್ಲ ಎಂದು ಕೇಳಿದ ಪ್ರಶ್ನೆಗೆ ಹಸ್ಸಿ ಉತ್ತರಿಸಿದ್ದಾರೆ.

''ಇದು ಕಳೆದ ವರ್ಷಗಳಲ್ಲಿ ಸಿಎಸ್‌ಕೆಯಯ ಲಕ್ಷಣಗಳಲ್ಲಿ ಒಂದಾಗಿದೆ. ನಿಸ್ಸಂಶಯವಾಗಿ, ದೀರ್ಘಕಾಲದವರೆಗೆ ತಂಡದ ನಾಯಕರಾಗಿದ್ದ ಎಂಎಸ್ ಧೋನಿ ಮತ್ತು ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಅವರು ಶಾಂತ ರೀತಿಯ ಸ್ವಭಾವದವರು. ಮೊದಲೆರಡು ಪಂದ್ಯಗಳು ಯೋಜನೆಗಳ ಪ್ರಕಾರ ನಡೆಯಲಿಲ್ಲ. ಆದರೆ ಇದು ಆರಂಭಿಕ ಹಂತಗಳಾಗಿರುವುದರಿಂದ ನಾವು ಖಂಡಿತವಾಗಿಯೂ ಭಯಪಡುವುದಿಲ್ಲ'' ಎಂದು ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.
ಚೆನ್ನೈ ಸೂಪರ್ ಐಪಿಎಲ್ 2022ರ ಸೀಸನ್‌ನ ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲನ್ನ ಕಾಣುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ. ರವೀಂದ್ರ ಜಡೇಜಾ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಸಿಎಸ್‌ಕೆ ಪ್ರದರ್ಶನಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications