KKR vs MI : ಪ್ಯಾಟ್ ಕಮಿನ್ಸ್ ಇಷ್ಟರ ಮಟ್ಟಿಗೆ ಬ್ಯಾಟಿಂಗ್ ಮಾಡ್ತಾರೆ ಅಂದುಕೊಂಡಿರ್ಲಿಲ್ಲ: ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್ 2022ರ ಆವೃತ್ತಿಯಲ್ಲಿ ಹ್ಯಾಟ್ರಿಕ್ ಪಂದ್ಯಗಳ ಸೋಲಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಾವಶ್ಯಕ ತಪ್ಪುಗಳಿಂದ ಸುಲಭವಾಗಿ ಗೆಲ್ಲುವ ಪಂದ್ಯಗಳನ್ನು ಸೋತಿರುವುದು ಬೇಸರ ತಂದಿದೆ ಎಂದಿದ್ದಾರೆ.
ನಾವು ಅಂದುಕೊಂಡಿದ್ದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅರಿವಾಗಿದೆ. ಸೋತ ನಾಯಕನಾಗಿ ಮತ್ತೆ ಈ ರೀತಿ ಮಾತನಾಡುವುದು ತುಂಬಾ ಕಷ್ಟ ಎಂದರು. ಮುಂಬೈ ಇಂಡಿಯನ್ಸ್ ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋತಿತ್ತು. ಇದು ಮುಂಬೈಗೆ ಲೀಗ್‌ನಲ್ಲಿ ಸತತ ಮೂರನೇ ಸೋಲು ಆಗಿದೆ. 15ನೇ ಓವರ್ ವರೆಗೂ ಮುಂಬೈ ಪಂದ್ಯದ ಮೇಲೆ ಪ್ರಾಬಲ್ಯ ಮೆರೆದಿತ್ತು. ಆದ್ರೆ ಯಾವಾಗ ಪ್ಯಾಟ್ ಕಮಿನ್ಸ್ ಕ್ರೀಸ್‌ಗೆ ಇಳಿದ್ರೋ, ಕೆಕೆಆರ್ ಸುಲಭವಾಗಿ ಪಂದ್ಯ ಗೆದ್ದಿತು.

ಪ್ಯಾಟ್ ಕಮಿನ್ಸ್ ಈ ಮಟ್ಟಿಗೆ ಬಂದು ಆಡ್ತಾರೆ ಎಂದು ಗೊತ್ತಿರ್ಲಿಲ್ಲ!
ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, ಪ್ಯಾಟ್ ಕಮಿನ್ಸ್ ಈ ರೀತಿ ಮುಗಿದು ಬೀಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. 'ಕಮ್ಮಿನ್ಸ್ ಅವರು ಈ ರೀತಿ ಆಡುತ್ತಾರೆ ಎಂದು ಭಾವಿಸಿರಲಿಲ್ಲ. ಈ ಯಶಸ್ಸಿನ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಪಂದ್ಯ ಮುಂದುವರಿದಂತೆ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಯಿತು. ಆದರೆ ಆರಂಭದಲ್ಲಿ ಅದು ನಕಾರಾತ್ಮಕವಾಗಿತ್ತು. ಒಟ್ಟಾರೆ ಉತ್ತಮ ವಿಕೆಟ್. ಬ್ಯಾಟಿಂಗ್‌ನಲ್ಲಿ ನಮಗೆ ಉತ್ತಮ ಆರಂಭ ಸಿಗಲಿಲ್ಲ. ಕೊನೆಯ 4-5 ಓವರ್‌ಗಳಲ್ಲಿ 70 ಪ್ಲಸ್ ರನ್ ಗಳಿಸಿದ್ದು ದೊಡ್ಡ ವಿಷಯ ಎಂದು ನಾನು ಹೇಳಲೇಬೇಕು'' ಎಂದು ರೋಹಿತ್ ಹೇಳಿದ್ದಾರೆ.

14 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಪ್ಯಾಟ್ ಕಮಿನ್ಸ್
162 ರನ್‌ಗಳ ಗುರಿ ಬೆನ್ನತ್ತಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ ಅಮೋಘ ಅರ್ಧಶತಕ ಜೊತೆಗೆ ಕೆಳಕ್ರಮಾಂಕದಲ್ಲಿ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಮುಂಬೈ ಸಾಕ್ಷಿಯಾಗಿದೆ. ಕೇವಲ 14 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಪ್ಯಾಟ್ ಕಮಿನ್ಸ್ ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಕೆಕೆಆರ್‌ಗೆ ಗೆಲುವು ತಂದುಕೊಟ್ಟಿದ್ದಾರೆ.
ಡೇನಿಯಲ್ ಸ್ಯಾಮ್ಸ್ 16ನೇ ಓವರ್‌ನಲ್ಲಿ ಬೌಲಿಂಗ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪ್ಯಾಟ್ ಕಮಿನ್ಸ್ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್, ಎರಡು ಬೌಂಡರಿ ಸಿಡಿಸಿದ್ರು( 6, 4, 6, 6, 2, 4, 6 ) ಇವರ ಅಬ್ಬರಕ್ಕೆ ಎದುರಾಳಿ ಮುಂಬೈ ನಲುಗಿ ಹೋಯಿತು.
ಜೊತೆಗೆ ಪ್ಯಾಟ್ ಕಮಿನ್ಸ್ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದ್ದಾರೆ. ಕೇವಲ 14 ಎಸೆತಗಳಲ್ಲಿ 50 ಗಡಿ ಮುಟ್ಟಿದ ಕಮಿನ್ಸ್ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದ್ದ ಕೆ.ಎಲ್ ರಾಹುಲ್ ದಾಖಲೆಯನ್ನ ಸರಿಗಟ್ಟಿದರು. ಅಂತಿಮವಾಗಿ 15 ಎಸೆತಗಳಲ್ಲಿ ಅಜೇಯ 56 ರನ್ ಕಲೆಹಾಕಿ ಅಬ್ಬರದ ಆಟವಾಡಿದ್ರು. ಕೆಕೆಆರ್ ಈ ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.
ಸಂಜು ಸ್ಯಾಮ್ಸನ್ಸ್ ಲಕ್ ಇಲ್ಲದ ಪ್ಲೇಯರ್: ಭಾರತ ಪರ ಆಡೋದು ಡೌಟ್ ಎಂದ ಶೋಯೆಬ್ ಅಖ್ತರ್

ಮೊದಲು ಬ್ಯಾಟ್ ಮಾಡಿ 161 ರನ್ ಕಲೆಹಾಕಿದ್ದ ಮುಂಬೈ ಇಂಡಿಯನ್ಸ್
ಮೊದಲು ಬ್ಯಾಟ್ ಮಾಡಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಸೂರ್ಯಕುಮಾರ್ (36 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 52ರನ್) ತಿಲಕ್ ವರ್ಮಾ (27 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಔಟಾಗದೆ 38) ಮತ್ತು ಪೊಲಾರ್ಡ್ (5 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 22) ಅಮೋಘ ಪ್ರದರ್ಶನ ನೀಡಿದರು. ಕಮಿನ್ಸ್ (2/49) ಎರಡು ವಿಕೆಟ್ ಪಡೆದರು.
ಕೋಲ್ಕತ್ತಾ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 16 ಓವರ್‌ಗಳಲ್ಲಿಯೇ ಗುರಿ ತಲುಪಿತು. ಕಮ್ಮಿನ್ಸ್ (15 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಔಟಾಗದೆ 56) ಬ್ಯಾಟಿಂಗ್ ಮಾಡಿದರು. ವೆಂಕಟೇಶ್ ಅಯ್ಯರ್ (41 ಎಸೆತಗಳಲ್ಲಿ 6 ಬೌಂಡರಿ, ಸಿಕ್ಸರ್ ಸಹಿತ ಔಟಾಗದೆ 50) ನಿರ್ಣಾಯಕ ಇನಿಂಗ್ಸ್ ಆಡಿದರು. ಮುರುಗನ್ ಅಶ್ವಿನ್ (2/25), ಮಿಲ್ಸ್ (2/38) ಬೌಲಿಂಗ್‌ನಲ್ಲಿ ಮಿಂಚಿದರು
LSG vs DC Preview: ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

ದುಬಾರಿ ಬೌಲಿಂಗ್ ಮಾಡಿದ ಡೇನಿಯಲ್ ಸ್ಯಾಮ್ಸ್
ಇನ್ನು 16ನೇ ಓವರ್‌ನಲ್ಲಿ ಬರೋಬ್ಬರಿ 35 ರನ್ ಬಿಟ್ಟುಕೊಟ್ಟ ಆಸ್ಟ್ರೇಲಿಯಾ ಮೂಲದ ಬೌಲರ್ ಡೇನಿಯಲ್ ಸ್ಯಾಮ್ಸ್ ತನ್ನದೇ ದೇಶದ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಐಪಿಎಲ್‌ನಲ್ಲಿ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್‌ಗಳ ಪಟ್ಟಿಗೆ ಸೇರಿದ್ದಾರೆ.
ಐಪಿಎಲ್‌ನಲ್ಲಿ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ಸ್
37 ಪಿ ಪರಮೇಶ್ವರನ್ vs ಆರ್‌ಸಿಬಿ, ಬೆಂಗಳೂರು 2011
37 ಹರ್ಷಲ್ ಪಟೇಲ್ vs ಸಿಎಸ್‌ಕೆ, ಮುಂಬೈ 2021
35 ಡೇನಿಯಲ್ ಸ್ಯಾಮ್ಸ್ vs ಕೆಕೆಆರ್, ಪುಣೆ 2022
33 ರವಿ ಬೋಪಾರ vs ಕೆಕೆಆರ್, ಕೋಲ್ಕತ್ತಾ 2010
33 ಪರ್ವಿಂದರ್ ಅವಾನಾ vs ಸಿಎಸ್‌ಕೆ, ಮುಂಬೈ 2014
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications