ಸಂಜು ಸ್ಯಾಮ್ಸನ್ಸ್ ಲಕ್ ಇಲ್ಲದ ಪ್ಲೇಯರ್: ಭಾರತ ಪರ ಆಡೋದು ಡೌಟ್ ಎಂದ ಶೋಯೆಬ್ ಅಖ್ತರ್

ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕುರಿತಾಗಿ ಪಾಕಿಸ್ತಾನ ಮಾಜಿ ವೇಗಿ ಅತ್ಯಂತ ಆಶ್ಚರ್ಯಕರವಾದ ಹೇಳಿಕೆಯೊಂದನ್ನ ನೀಡಿದ್ದು, ಸ್ಯಾಮ್ಸನ್ ಮತ್ತೆ ಭಾರತಕ್ಕೆ ಆಡೋದೆ ಅನುಮಾನ ಎಂದಿದ್ದಾರೆ.
ಸಂಜು ಸ್ಯಾಮ್ಸನ್ ನಿಜಕ್ಕೂ ಅನ್‌ಲಕ್ಕಿ ಪ್ಲೇಯರ್ ಆಗಿದ್ದು, ಭಾರತ ಪರ ಹೆಚ್ಚು ಪಂದ್ಯಗಳನ್ನ ಆಡದೇ ಇರುವುದು ನಿಜಕ್ಕೂ ದುರಾದೃಷ್ಟ ಎಂದು ಶೋಯೆಬ್ ಅಕ್ತರ್ ಹೇಳಿದ್ದಾರೆ. ಸ್ಯಾಮ್ಸನ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ಐಪಿಎಲ್ 2022ರ ಆವೃತ್ತಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಗೆಲುವನ್ನ ಕಂಡಿತು. ಆದ್ರೆ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲಿಗೆ ಶರಣಾಗಿದೆ.

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸ್ಯಾಮ್ಸನ್
ಸಂಜು ಸ್ಯಾಮ್ಸನ್ ಇದುವರೆಗೆ 124 ಐಪಿಎಲ್ ಪಂದ್ಯಗಳಲ್ಲಿ 3,161 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 16 ಅರ್ಧಶತಕಗಳು ಸೇರಿವೆ. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಕಂತಹ ಅವಕಾಶಗಳು ತುಂಬಾ ಕಡಿಮೆ. ಏಕೈಕ ಏಕದಿನ ಪಂದ್ಯದಲ್ಲಿ 46 ರನ್ ಗಳಿಸಿದ್ರೆ, 13 ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ 14.5 ಬ್ಯಾಟಿಂಗ್ ಸರಾಸರಿಯಲ್ಲಿ 174 ರನ್‌ಗಳನ್ನಷ್ಟೇ ಕಲೆಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಸಂದರ್ಶನವೊಂದರಲ್ಲಿ ಸಂಜು ಸ್ಯಾಮ್ಸನ್ ಭಾರತ ತಂಡದ ಪರ ಹೆಚ್ಚಿನ ಪಂದ್ಯಗಳನ್ನು ಆಡಬೇಕಿತ್ತು. ಆತ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂದು ಶೋಯೆಬ್ ಅಖ್ತರ್ ಹೊಗಳಿದ್ದಾರೆ.

ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆಯದೇ ಇರುವುದು ದುರಾದೃಷ್ಟ
ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಸಾಧ್ಯವಾಗದಿರುವುದು ಆತನ ದುರಾದೃಷ್ಟ ಎಂದು ಅಖ್ತರ್ ಹೇಳಿದ್ದಾರೆ. ಆತನಲ್ಲಿ ಸಾಕಷ್ಟು ಪ್ರತಿಭೆಯಿದೆ ಎಂದು ಇದೇ ವೇಳೆ ಪ್ರಶಂಸಿಸಿದರು. ಸಂಜು ಸ್ಯಾಮ್ಸನ್ ಇದುವರೆಗೆ ಭಾರತ ಪರ ಕೇವಲ ಒಂದು ಏಕದಿನ ಮತ್ತು 13 ಟಿ20 ಪಂದ್ಯಗಳನ್ನು ಆಡಿದ್ದಾರೆ.
IPL 2022: ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದ ಪ್ಯಾಟ್ ಕಮಿನ್ಸ್, KL ರಾಹುಲ್ ದಾಖಲೆ ಪುಡಿ

ಶ್ರೀಲಂಕಾ ವಿರುದ್ಧ ಕೊನೆಯ ಟಿ20 ಸರಣಿ
ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕೊನೆಯದಾಗಿ ಆಡಿದ್ದಾರೆ. ಅದರಲ್ಲಿ ಅವರು 39 ರನ್ ಮತ್ತು 18 ರನ್ ಗಳಿಸಿದರು. ಸಂಜು ಸ್ಯಾಮ್ಸನ್ ಅಪಾರ ಪ್ರತಿಭೆ ಹೊಂದಿದ್ದರೂ ಸಹ ಅವರಿಗೆ ಸಾಕಷ್ಟು ಅವಕಾಶ ಸಿಗಲಿಲ್ಲ. ಆಸ್ಟ್ರೇಲಿಯಾದಂತಹ ಮೈದಾನಗಳಿಗೆ ಸಂಜು ಸ್ಯಾಮ್ಸನ್ ಅವರಂತಹ ಆಟಗಾರರ ಅಗತ್ಯವಿದೆ ಎಂದಿದ್ದಾರೆ.
MI vs KKR: ದಾಖಲೆಯ ಅರ್ಧ ಶತಕ ಸಿಡಿಸಿದ ಪ್ಯಾಟ್ ಕಮ್ಮಿನ್ಸ್: ಕೆಕೆಆರ್‌ಗೆ ಅಮೋಘ ವಿಜಯ

ಭಾರತ ತಂಡದಲ್ಲಿ ಸ್ಥಾನ ನೀಡಲು ಪ್ರಯತ್ನ
ಸಂಜು ಸ್ಯಾಮ್ಸನ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡಲು ಪ್ರಯತ್ನಿಸುವುದಾಗಿ ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಹೇಳಿದ್ದರು. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಖ್ತರ್ ಸಂಜು ಸ್ಯಾಮ್ಸನ್ ಅವರನ್ನು ಹೊಗಳಿದ್ರೆ, ರವಿಶಾಸ್ತ್ರಿ ಮತ್ತು ಗವಾಸ್ಕರ್ ಅವರನ್ನು ನಿಂದಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications