IPLನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಿಂದ ತುಂಬಾ ಪ್ರಭಾವಿತನಾಗಿದ್ದೇನೆ: ವಾಸಿಂ ಜಾಫರ್

ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವಾಸಿಂ ಜಾಫರ್ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಐಪಿಎಲ್ 2022 ರ ಭಾಗವಾಗಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ನಾಯಕತ್ವವು ಆಕರ್ಷಕವಾಗಿತ್ತು ಎಂದು ಜಾಫರ್ ಹೇಳಿದ್ದಾರೆ. ಡೆಲ್ಲಿ ನಿರಾಯಾಸವಾಗಿ ಪಂದ್ಯ ಗೆಲ್ಲಬೇಕಿತ್ತು, ಆದ್ರೆ ತನ್ನ ಅದ್ಭುತ ನಾಯಕತ್ವದಿಂದ ಹಾರ್ದಿಕ್ ಗುಜರಾತ್ ವಿರುದ್ಧ ಗೆದ್ದಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 14 ರನ್ ಗಳ ಜಯ ಸಾಧಿಸಿತ್ತು.
ಇದರೊಂದಿಗೆ ಪ್ರಸಕ್ತ ಋತುವಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದೆ. ಈ ಹಿನ್ನೆಲೆಯಲ್ಲಿ ಪಂದ್ಯದ ನಂತರ ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ವಾಸಿಂ ಜಾಫರ್, ಗುಜರಾತ್ ಯಶಸ್ಸಿಗೆ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ. ದೆಹಲಿ ಗೆಲ್ಲುತ್ತದೆ ಎಂದು ಭಾವಿಸಿದ್ದರೂ ಹಾರ್ದಿಕ್ ನಾಯಕತ್ವ ಮತ್ತು ಫರ್ಗುಸನ್ ಅವರ ಬೌಲಿಂಗ್‌ನಿಂದ ಪ್ರಭಾವಿತನಾಗಿದ್ದೆ ಎಂದು ಹೇಳಿದರು.
'ಇದು ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲೇಬೇಕಾದ ಪಂದ್ಯ. ಗುಜರಾತ್ ನೀಡಿದ್ದ 172 ರನ್ ಗಳ ಗುರಿಯನ್ನು ರಿಷಬ್ ಪಂತ್ ತಂಡ ಭೇದಿಸಬೇಕಿತ್ತು. ಆ ಪಿಚ್‌ನಲ್ಲಿ ಇದು ದೊಡ್ಡ ಗುರಿಯಲ್ಲ. ಅಲ್ಲದೆ ಪಂತ್ ಮತ್ತು ಲಲಿತ್ ಯಾದವ್ ಇರುವವರೆಗೂ ಡೆಲ್ಲಿ ತಂಡ ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಲಲಿತ್ ಏಕಾಏಕಿ ರನೌಟ್ ಆಗಿದ್ದರಿಂದ ಪಂದ್ಯದ ಗತಿಯೇ ಬದಲಾಯಿತು. ಫರ್ಗುಸನ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿದರು. ನಿರ್ಣಾಯಕ ಕ್ಷಣದಲ್ಲಿ ಪಂತ್, ಅಕ್ಷರ್ ಪಟೇಲ್ ಅವರಂತಹ ಪ್ರಮುಖ ವಿಕೆಟ್‌ಗಳನ್ನು ಪಡೆದರು'' ಎಂದು ಜಾಫರ್ ಹೇಳಿದ್ದಾರೆ.

ಇದನ್ನು ಗಮನಿಸಿದರೆ, ಬಲಿಷ್ಠ ಬೌಲಿಂಗ್ ಘಟಕವನ್ನು ಹೊಂದುವುದು ಎಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ. ರಶೀದ್, ಶಮಿ ಮತ್ತು ಫರ್ಗುಸನ್ ಗುಜರಾತ್‌ನ ಮೂವರು ಅತ್ಯುತ್ತಮ ಬೌಲರ್‌ಗಳು. ಡೆಲ್ಲಿ ಇನ್ನಿಂಗ್ಸ್‌ನಲ್ಲಿ 15 ಓವರ್‌ಗಳನ್ನು ಪೂರ್ಣಗೊಳಿಸಿದ ನಂತರ ಪಾಂಡ್ಯ ನಾಲ್ಕು ಸ್ಪೆಷಲಿಸ್ಟ್ ಬೌಲರ್‌ಗಳನ್ನು ಹೊಂದಿದ್ದರು. ಇಲ್ಲಿ ಒಂದನ್ನು ಸಮನ್ವಯಗೊಳಿಸಬೇಕಾದರೂ ಪಾಂಡ್ಯ ತಮ್ಮ ಬೌಲರ್‌ಗಳ ಮೇಲೆ ನಂಬಿಕೆ ಹೊಂದಿದ್ದಾರೆ. ಅವರ ನಾಯಕತ್ವ ಆಕರ್ಷಕವಾಗಿದೆ ಎಂದು ಜಾಫರ್ ಹೊಗಳಿದ್ದಾರೆ.

ಮತ್ತೊಂದೆಡೆ ಹಲವು ಗುಜರಾತ್ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವ ವಹಿಸುತ್ತಿರುವುದು ಇದೇ ಮೊದಲು. ದೇಶೀಯ ಕ್ರಿಕೆಟ್‌ನಲ್ಲೂ ಅವರು ಹೆಚ್ಚು ನಾಯಕರಾಗಿರಲಿಲ್ಲ. ಅವರು ಕಳೆದ ಋತುವಿನವರೆಗೂ ಮುಂಬೈ ಪರ ಆಡಿದ್ದರು ಮತ್ತು ಈ ಋತುವಿನ ಮೆಗಾ ಹರಾಜಿನ ಮೊದಲು ಗುಜರಾತ್ ಟೈಟಾನ್ಸ್‌ಗೆ ತೆರಳಿದರು. ಫಿಟ್ನೆಸ್ ಸಮಸ್ಯೆಯಿಂದಾಗಿ ಭಾರತ ತಂಡದಿಂದ ದೂರ ಉಳಿದಿರುವ ಅವರು ಪ್ರಸ್ತುತ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಮಿಂಚುವ ಜೊತೆಗೆ ನಾಯಕರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications