ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್: ವೀಡಿಯೋ ವೈರಲ್

ಭಾರತದ ದಿಗ್ಗಜ ಕ್ರಿಕೆಟಿಗರ ಅಭಿಮಾನಿಗಳು, ತಮ್ಮ ನೆಚ್ಚಿನ ಕ್ರಿಕೆಟಿಗರನ್ನ ದೇವರಂತೆ ಪೂಜಿಸುವ ಅನೇಕ ಉದಾಹರಣೆಗಳನ್ನ ನೋಡಿದ್ದೇವೆ. ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಹೀಗೆ ಭಾರತದ ಪ್ರಮುಖ ಕ್ರಿಕೆಟಿಗರ ಹುಚ್ಚು ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ನಮಸ್ಕರಿಸಿದ್ದ ಅನೇಕ ಘಟನೆಗೆ ಕ್ರಿಕೆಟ್ ಲೋಕ ಸಾಕ್ಷಿಯಾಗಿದೆ.
ಅದ್ರಲ್ಲೂ ಸಚಿನ್ ಮತ್ತು ಧೋನಿಗಂತೂ ಅನೇಕ ಅಂತರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳಲ್ಲಿ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ನಮಸ್ಕಾರ ಮಾಡಿ ಹೋಗಿರುವ ಘಟನೆ ನಡೆದಿವೆ. ಆದ್ರೆ ಇತ್ತೀಚೆಗಷ್ಟೇ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಜಾಂಟಿ ರೋಡ್ಸ್ ಸಚಿನ್ ಕಾಲಿಗೆ ನಮಸ್ಕರಿಸಿದ ಘಟನೆಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಸಾಕ್ಷಿಯಾಯಿತು.

ಸಚಿನ್ ಕಾಲಿಗೆ ಬಿದ್ದ ಜಾಂಟಿ ರೋಡ್ಸ್
ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯ ಸಚಿನ್ ತೆಂಡೂಲ್ಕರ್, ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಹಲವು ವರ್ಷಗಳು ಕಳೆದರೂ ಸಹ ಅವರನ್ನ ಆರಾಧಿಸುವವರೇನು ಕಮ್ಮಿ ಆಗಿಲ್ಲ. ಭಾರತೀಯರು ಸಾಮಾನ್ಯವಾಗಿ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಮತ್ತು ಗೌರವವನ್ನು ಪಡೆಯುವುದು ವಾಡಿಕೆ. ಆದರೆ ಕ್ರಮೇಣ ನಮ್ಮ ನೆಚ್ಚಿನ ಹೀರೋ, ಕ್ರಿಕೆಟಿಗನ ಕಾಲಿಗೆ ಮತ್ತೊಬ್ಬ ಮಾಜಿ ಕ್ರಿಕೆಟಿಗನು ಬೀಳುವಂತೆ ಪ್ರೀತಿ ವ್ಯಕ್ತಪಡಿಸುವ ಮಾರ್ಗವಾಗಿ ಮಾರ್ಪಟ್ಟಿದೆ.

ಧೋನಿ ಕಾಲಿಗೂ ಬಿದ್ದಿದ್ದಾರೆ ಅಭಿಮಾನಿಗಳು
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ, ಹಾಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಕಾಲಿಗೆ ಅಭಿಮಾನಿಗಳು ಬೀಳುವುದನ್ನು ನೀವು ನೋಡಿದ್ದೀರಿ. ಆದ್ರೆ ವಿದೇಶಿ ಕ್ರಿಕೆಟಿಗನೊಬ್ಬ ಸಹ ಆಟಗಾರನ ಕಾಲಿಗೆ ಬಿದ್ದಿದ್ದಾನೆ.
ಸಚಿನ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಜಾಂಟಿ
ನಿನ್ನೆ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಂಜಾಬ್ ವಿರುದ್ಧ ಸೋತಿತ್ತು. ಹೀಗಾಗಿ ಮುಂಬೈ ಅಭಿಮಾನಿಗಳು ಎದೆಗುಂದಿದ್ದರು. ಪಂದ್ಯ ಮುಗಿದಾಗ ಎದುರಾಳಿ ಆಟಗಾರರು ಗೆದ್ದ ತಂಡಕ್ಕೆ ಸಾಲಾಗಿ ನಿಂತು ಕೈಕುಲುಕಿದರು. ಈ ಸಾಲಿನಲ್ಲಿ ಮುಂಬೈ ತಂಡದ ಮೆಂಟರ್ ಆಗಿರುವ ಸಚಿನ್ ಅವರಿಂದ ಪಂಜಾಬ್ ಆಟಗಾರರನ್ನು ಶ್ಲಾಘಿಸಿದರು.
ಆಗ ಇದ್ದಕ್ಕಿದ್ದಂತೆ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಮಾಜಿ ಕ್ರಿಕೆಟಿಗ ಜಾಂಟಿ ರೂಟ್ಸ್ ಸಚಿನ್ ಕಾಲಿಗೆ ಬಿದ್ದಿದ್ದಾರೆ. ಇದನ್ನು ಸ್ವಲ್ಪವೂ ನಿರೀಕ್ಷಿಸದ ತೆಂಡೂಲ್ಕರ್ ಕಾಲಿಗೆ ಬೀಳದಂತೆ ಶತಪ್ರಯತ್ನ ಮಾಡಿದರು. ಆದರೆ ಜಾಂಟಿ ರೋಡ್ಸ್, ಸಚಿನ್ ಅವರ ಕಾಲನ್ನು ಮುಟ್ಟಿದರು ಮತ್ತು ನಂತರ ಇಬ್ಬರು ತಬ್ಬಿಕೊಂಡರು. ಇದು ಅಭಿಮಾನಿಗಳಿಗೆ ಹುಬ್ಬೇರಿಸುವಂತೆ ಮಾಡಿದ್ದು, ಸಚಿನ್ ಖ್ಯಾತಿ ಸ್ವಲ್ಪವೂ ಕಡಿಮೆ ಆಗಿಲ್ಲ ಎಂಬುದನ್ನ ತೋರಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications