IPL 2022: ಲಕ್ನೋ ಸೂಪರ್ ಜೈಂಟ್ಸ್ ಸ್ಕ್ವಾಡ್ ಸೇರಿಕೊಂಡ ಕೆ.ಎಲ್ ರಾಹುಲ್: ಮೂರು ದಿನ ಕ್ವಾರಂಟೈನ್

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮಾರ್ಚ್ 26 ರಂದು ಮೆಗಾ ಟೂರ್ನಿಗೆ ಚಾಲನೆ ಸಿಗಲಿದೆ. ಆಟಗಾರರು ತಮ್ಮ ಸ್ಕ್ವಾಡ್ ಸೇರಿಕೊಳ್ಳುವ ಮೊದಲು ಮೂರು ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್ ರಾಹುಲ್ ತನ್ನ ತಂಡವನ್ನ ಸೇರಿಕೊಂಡಿದ್ದರ ಕುರಿತಾಗಿ ವೀಡಿಯೋ ಪೋಸ್ಟ್ ಮಾಡಿದ್ದಾರೆ.
ಕಳೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ಆಟಗಾರರಿಗೆ ಯಾವುದೇ ಕ್ವಾರಂಟೈನ್‌ಗೆ ಒಳಗಾಗುವ ಅವಶ್ಯಕತೆಯಿಲ್ಲ. ಬಯೋ ಬಬಲ್‌ನಲ್ಲಿರುವ ಆಟಗಾರರು ನೇರವಾಗಿ ತಮ್ಮ ತಂಡವನ್ನ ಸೇರಿಕೊಂಡಿದ್ದರು. ಆದ್ರೆ ಈ ಸರಣಿಯಲ್ಲಿ ಭಾಗಿಯಾಗದ ಆಟಗಾರರು ಮೂರು ದಿನಗಳ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತನ್ನ ಮೊದಲ ಪಂದ್ಯದಲ್ಲಿ ಐಪಿಎಲ್‌ನ ಮತ್ತೊಂದು ಹೊಸ ತಂಡ ಗುಜರಾತ್ ಟೈಟನ್ಸ್ ಜೊತೆಗೆ ಕಾದಾಟ ನಡೆಸಲಿದೆ.
ಕೆ.ಎಲ್ ರಾಹುಲ್ ಇಂಜ್ಯುರಿ ಆಗಿದ್ದ ಕಾರಣ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿದ್ದರು. ಹೀಗಾಗಿಯೇ ಬೆಂಗಳೂರಿನ ಎನ್‌ಸಿಎ ಶಿಬಿರದಲ್ಲಿ ತನ್ನ ಹ್ಯಾಮ್‌ಸ್ಟ್ರಿಂಗ್ ಇಂಜ್ಯುರಿಯಿಂದ ಗುಣಮುಖರಾಗಲು ಸಾಕಷ್ಟು ಪ್ರಯತ್ನಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರಾಹುಲ್ ತಂಡದಿಂದ ಹೊರಬಿದ್ದರು.
ಲಕ್ನೋ ಸೂಪರ್ ಜೈಂಟ್ಸ್ ಅಧಿಕೃತ ಟ್ಟಿಟ್ಟರ್ ಅಕೌಂಟ್‌ನಲ್ಲಿ ಕೆ.ಎಲ್ ರಾಹುಲ್ ವೀಡೀಯೋ ಪೋಸ್ಟ್ ಆಗಿದ್ದು, ಹೊಸ ಫ್ರಾಂಚೈಸಿಯೊಂದಿಗೆ ಐಪಿಎಲ್ 15ನೇ ಸೀಸನ್ ಆರಂಭಿಸಲು ಸಾಕಷ್ಟು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಮೂರು ದಿನಗಳ ಕ್ವಾರಂಟೈನ್ ಮುಗಿಸಿ ತಂಡವನ್ನ ಸೇರಿಕೊಳ್ಳುವುದಾಗಿ ತಿಳಿಸಿದ್ದಾರೆ.
ಕೆ.ಎಲ್ ರಾಹುಲ್‌ರನ್ನ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ಬರೋಬ್ಬರಿ 17 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಸೀಸನ್‌ನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಮಾರ್ಚ್ 22ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications