ಅಶ್ವಿನ್ ಉತ್ತಮ ಬೌಲರ್, ಆದ್ರೆ ಆತ ಈ ತಪ್ಪನ್ನು ಸರಿ ಪಡಿಸಿಕೊಳ್ಳಬೇಕು ಎಂದ ಸಂಗಕ್ಕಾರ

ರಾಜಸ್ತಾನ್ ರಾಯಲ್ಸ್ ತಂಡದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಕುರಿತು ತಂಡದ ಹೆಡ್ ಕೋಚ್ ಕುಮಾರ್ ಸಂಗಕ್ಕಾರ ಅಮೂಲ್ಯ ಸಲಹೆ ನೀಡಿದ್ದಾರೆ. ರಾಜಸ್ತಾನ್ ತಂಡದ ಪರ ಬೌಲಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದ್ದ ಅಶ್ವಿನ್ ಅವರು ಹೆಚ್ಚು ಆಫ್ ಸ್ಪಿನ್ ಬೌಲಿಂಗ್ ಮಾಡುವಲ್ಲಿ ಕೆಲಸ ಮಾಡಬೇಕಿದೆ ಎಂದು ಸಂಗಕ್ಕಾರ ಹೇಳಿದ್ದಾರೆ.
ಮೇ 29 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022 ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ತಾನ್ ರಾಯಲ್ಸ್ ಏಳು ವಿಕೆಟ್‌ಗಳ ಸೋಲಿನ ನಂತರ ಶ್ರೀಲಂಕಾದ ಮಾಜಿ ನಾಯಕ ಈ ಹೇಳಿಕೆ ನೀಡಿದ್ದಾರೆ.

ಕೇರಂ ಬಾಲ್ ಹಾಕಿ ಕೈ ಸುಟ್ಟುಕೊಂಡ ಅಶ್ವಿನ್
ಗುಜರಾತ್ ಟೈಟನ್ಸ್‌ಗೆ 131ರನ್ ಗುರಿ ನೀಡಿದ್ದ ರಾಜಸ್ತಾನ್ ರಾಯಲ್ಸ್ ರನ್ ಡಿಫೆಂಡ್ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿತು. 12ನೇ ಓವರ್‌ನಲ್ಲಿ ಗುಜರಾತ್ ವಿರುದ್ಧ ಬೌಲಿಂಗ್ ಇಳಿದ ರವಿಚಂದ್ರನ್ ಅಶ್ವಿನ್ ಎದುರಾಳಿ ಬ್ಯಾಟರ್ ವಿರುದ್ಧ ಕೇರಂ ಬಾಲ್ ಹೆಚ್ಚಾಗಿ ಪ್ರಯೋಗಿಸಿದ್ರು. ಇದು ಆರ್. ಅಶ್ವಿನ್‌ಗೆ ಹಿನ್ನಡೆಯಾಗಿದ್ದು, ವಿಕೆಟ್ ಇಲ್ಲದೆ ಮೂರು ಓವರ್‌ಗೆ 32ರನ್ ನೀಡಿದರು.
IPL 2022: ಟೀಮ್ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ನಾಯಕ?; ಮಾಜಿ ಕ್ರಿಕೆಟಿಗ ಗವಾಸ್ಕರ್ ಹೇಳಿದ್ದಿಷ್ಟು

ಅಶ್ವಿನ್ ಆಫ್ ಸ್ಪಿನ್ ಹೆಚ್ಚಾಗಿ ಮಾಡಬೇಕಿದೆ: ಸಂಗಕ್ಕಾರ
"ಆ್ಯಶ್ (ಅಶ್ವಿನ್), ಅವರು ನಮಗಾಗಿ ಉತ್ತಮ ಕೆಲಸ ಮಾಡಿದ್ದಾರೆ. ಆಶ್ ಕೂಡ, ಅವರು ಕ್ರಿಕೆಟ್ ಪಿಚ್‌ನಲ್ಲಿ ಸಾಧಿಸಿದ ವಿಷಯದಲ್ಲಿ ದಂತಕಥೆಯಾಗಿರುವುದರಿಂದ, ಬಹಳಷ್ಟು ಚಿಂತನೆ ಮತ್ತು ಸುಧಾರಣೆಗಳನ್ನು ಮಾಡಬೇಕಾಗಿದೆ. ವಿಶೇಷವಾಗಿ ಅವರ ಆಫ್ ಸ್ಪಿನ್ ಮೂಲಕ ಹೆಚ್ಚಿನ ಬೌಲಿಂಗ್ ಮಾಡಬೇಕಿದೆ, "ಎಂದು ಸಂಗಕ್ಕಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
IPL 2022: ಟೂರ್ನಿಯಲ್ಲಿ 863 ರನ್ ಚಚ್ಚಿ ಅಬ್ಬರಿಸಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಒಟ್ಟು ಹಣವೆಷ್ಟು?

ರಾಜಸ್ತಾನ್ ರಾಯಲ್ಸ್ ಪರ ಅಶ್ವಿನ್ ಪರ್ಫಾಮೆನ್ಸ್
ಐಪಿಎಲ್ 2022ರ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆರ್. ಅಶ್ವಿನ್ ಸಾಧಾರಣ ಪ್ರದರ್ಶನ ನೀಡಿದ್ದಾರೆ. ತಮಿಳುನಾಡು ಕ್ರಿಕೆಟ್ 17 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನ ಸಂಪಾದಿಸಿದ್ದು, 41.92 ಸರಾಸರಿ ಮತ್ತು 7.51 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ.
ಸ್ಪರ್ಧೆ ವಿಚಾರಕ್ಕೆ ಬಂದ್ರೆ ರಾಜಸ್ತಾನ್ ರಾಯಲ್ಸ್ ಪರ ಜೋಸ್ ಬಟ್ಲರ್ 39 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಆರ್ಆರ್ ವಿಫಲಗೊಂಡಿತು. ಕಡಿಮೆ ಮೊತ್ತಕ್ಕೆ ಕುಸಿದ ಪರಿಣಾಮ ಎರಡನೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲಗೊಂಡಿತು. ಮತ್ತೊಂದೆಡೆ ಗುಜರಾತ್ ಟೈಟನ್ಸ್ ಚೊಚ್ಚಲ ಸೀಸನ್‌ನಲ್ಲೇ ಪ್ರಶಸ್ತಿ ಗೆದ್ದಿತು.

ರಾಯಲ್ಸ್ ಮುಡಿಗೆ ಆರೆಂಜ್ ಮತ್ತು ಪರ್ಪಲ್ ಕ್ಯಾಪ್
ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗದ ರಾಜಸ್ತಾನ್ ರಾಯಲ್ಸ್ ತಂಡದ ಪರ ಉಳಿದ ಪ್ರಮುಖ ಪ್ರಶಸ್ತಿಗಳೆಲ್ಲಾ ಒಲಿದು ಬಂದಿದೆ. ಸೀಸನ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಮತ್ತು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಿಗೆ ನೀಡುವ ಪರ್ಪಲ್ ಕ್ಯಾಪ್ ಎರಡನ್ನೂ ಗೆಲ್ಲುವಲ್ಲಿ ರಾಜಸ್ತಾನ್ ರಾಯಲ್ಸ್ ಆಟಗಾರರು ಯಶಸ್ವಿಯಾಗಿದ್ದಾರೆ.
ಆರ್‌ಆರ್ ಬ್ಯಾಟರ್ ಬಟ್ಲರ್ 17 ಪಂದ್ಯಗಳಿಂದ 863 ರನ್ ಕಲೆಹಾಕಿದ್ದು, ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. 4 ಶತಕಗಳು ಮತ್ತು 7 ಅರ್ಧಶತಕಗಳನ್ನು ಹೊಡೆದು, 152 ರ ಸ್ಟ್ರೈಕ್ ರೇಟ್‌ನಲ್ಲಿ 81 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಬಟ್ಲರ್ ಐಪಿಎಲ್ ಸೀಸನ್‌ವೊಂದರಲ್ಲಿ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಇನ್ನು ಟೂರ್ನಿಯ ಆರಂಭದಿಂದಲೂ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದ ಯುಜವೇಂದ್ರ ಚಹಾಲ್ ಪರ್ಪಲ್ ಕ್ಯಾಪ್‌ನೊಂದಿಗೆ ಟೂರ್ನಿಯಿಂದ ನಿರ್ಗಮಿಸಿದರು. ಐಪಿಎಲ್ ಇತಿಹಾಸದಲ್ಲಿ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಸ್ಪಿನ್ನರ್ ಎಂಬ ವಿಶೇಷ ದಾಖಲೆಯನ್ನ ತನ್ನ ಹೆಸರಿಗೆ ದಾಖಲಿಸಿಕೊಳ್ಳುವ ಜೊತೆಗೆ 27 ವಿಕೆಟ್‌ಗಳನ್ನ ಸಂಪಾದಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications