
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ ಡ್ವೇನ್ ಬ್ರಾವೋಗೆ, ಮುಂಬೈ ಇಂಡಿಯನ್ಸ್ ಮಾಜಿ ಬೌಲರ್ ಲಸಿತ್ ಮಾಲಿಂಗ ಚಾಂಪಿಯನ್ ಬೌಲರ್ ಎಂದು ಹೊಗಳಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ನಿನ್ನೆ ಲಕ್ನೋ ವರ್ಸಸ್ ಸಿಎಸ್‌ಕೆ ಪಂದ್ಯದವರೆಗೂ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಮಾಡಿದ್ದ ಲಸಿತ್ ಮಾಲಿಂಗ ದಾಖಲೆಯನ್ನ ಬ್ರಾವೋ ಮುರಿದಿದ್ದು, ಗರಿಷ್ಠ ವಿಕೆಟ್ ಟೇಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಲು ಡ್ವೇನ್ ಬ್ರಾವೋಗೆ ಕೇವಲ ಒಂದು ವಿಕೆಟ್ ಅವಶ್ಯಕತೆಯಿತ್ತು. ನಿನ್ನೆ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬ್ರಾವೋ ತನ್ನ ನಾಲ್ಕನೇ ಓವರ್ ಮತ್ತು ತಂಡದ 18ನೇ ಓವರ್‌ನ 2ನೇ ಎಸೆತದಲ್ಲಿ 13ರನ್‌ಗಳಿಸಿದ್ದ ದೀಪಕ್ ಹೂಡ ವಿಕೆಟ್ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿದರು.
'' ಬ್ರಾವೊ ಚಾಂಪಿಯನ್ ಬೌಲರ್. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಕ್ಕಾಗಿ ಡ್ವೇನ್ ಬ್ರಾವೋಗೆ ಶುಭಾಶಯಗಳು. ಮತ್ತಷ್ಟು ವಿಕೆಟ್ ಪಡೆಯಿರಿ''ಎಂದು ಲಸಿತ್ ಮಾಲಿಂಗ ಟ್ವೀಟ್ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಬೌಲರ್ ಲಸಿತ್ ಮಾಲಿಂಗ (170) ದಾಖಲೆ ಮುರಿದಿದ್ದಾರೆ. ಪ್ರಸ್ತುತ ಬ್ರಾವೋ 171 ವಿಕೆಟ್‌ಗಳೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಐಪಿಎಲ್ ಟಾಪ್ 6 ವಿಕೆಟ್ ಪಡೆದವರ ಪಟ್ಟಿಯಲ್ಲಿ ಬ್ರಾವೋ ಮತ್ತು ಮಾಲಿಂಗ ನಂತರ ಅಮಿತ್ ಮಿಶ್ರಾ (166), ಪಿಯೂಷ್ ಚಾವ್ಲಾ (157), ಹರ್ಭಜನ್ ಸಿಂಗ್ (150) ಮತ್ತು ರವಿಚಂದ್ರನ್ ಅಶ್ವಿನ್ (145) ಇದ್ದಾರೆ.