ಕಳೆದ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓಪನರ್ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾಗುವ ಮೂಲಕ ಐಪಿಎಲ್ 2022 ಸೀಸನ್‌ನಲ್ಲಿ ಕೆಟ್ಟ ಆರಂಭ ಪಡೆದಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ ಓಪನರ್ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ನಾಲ್ಕು ಎಸೆತಗಳನ್ನ ಎದುರಿಸಿದ ರುತುರಾಜ್ ಗಾಯಕ್ವಾಡ್ ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ನಿತಿಶ್ ರಾಣಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಬಾರಿ ನಾಲ್ಕನೇ ಬಾರಿಗೆ ಟ್ರೋಫಿ ಗೆಲ್ಲಲು ರುತುರಾಜ್ ಗಾಯಕ್ವಾಡ್ ಪ್ರದರ್ಶನವು ಪ್ರಮುಖವಾಗಿತ್ತು. ಮಹಾರಾಷ್ಟ್ರ ಓಪನರ್ ಕಳೆದ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದು, 16 ಪಂದ್ಯಗಳಿಂದ 635 ರನ್ ಸಿಡಿಸಿದ್ದರು. ಆದ್ರೆ ಈ ಬಾರಿ ಉತ್ತಮ ಆರಂಭ ಪಡೆಯಲು ವಿಫಲಗೊಂಡಿದ್ದಾರೆ.

ಕೆಕೆಆರ್ ಟಾಸ್ ಗೆದ್ದು ಮುಂಬೈನಲ್ಲಿ ಬೌಲಿಂಗ್ ಆಯ್ಕೆ ಮಾಡಿದ ನಂತರ ಉಮೇಶ್ ಯಾದವ್ ಹೊಸ ಚೆಂಡಿನೊಂದಿಗೆ ವೇಗ ಮತ್ತು ಸ್ವಿಂಗ್ ಮೂಲಕ ರುತುರಾಜ್ ಅನ್ನು ಪೆವಿಲಿಯನ್ ಅಟ್ಟುವಲ್ಲಿ ಯಶಸ್ವಿಯಾದ್ರು. ಒಂದೆರಡು ಎಸೆತಗಳನ್ನು ಬಿಟ್ಟ ನಂತರ, ಭಾರತದ ಹಿರಿಯ ವೇಗದ ಉಮೇಶ್ ಬೌಲಿಂಗ್‌ನ ವೈಡ್ ಎಸೆತದಲ್ಲಿ ರುತುರಾಜ್ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications