For Quick Alerts
ALLOW NOTIFICATIONS  
For Daily Alerts
 

LSG vs DC: ಡೆಲ್ಲಿ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಲಕ್ನೋ

LSG VS DC

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ತಂಡ 6 ರನ್‌ಗಳಿಂದ ಪಂದ್ಯವನ್ನ ಗೆದ್ದು ಬೀಗಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಲಕ್ನೋ ನೀಡಿದ್ದ 196 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದ್ದಲ್ಲದೆ, ಮೊಹ್ಸಿನ್ ಖಾನ್ ದಾಳಿಗೆ ತರಗೆಲೆಯಂತೆ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡರು.

ಸಿಂಗಲ್ ಡಿಜಿಟ್‌ಗೆ ಔಟಾದ ಡೆಲ್ಲಿ ಓಪನರ್ಸ್

ಸಿಂಗಲ್ ಡಿಜಿಟ್‌ಗೆ ಔಟಾದ ಡೆಲ್ಲಿ ಓಪನರ್ಸ್

ಡೆಲ್ಲಿ ಕ್ಯಾಪಿಟಲ್ಸ್ ಪ್ರಮುಖ ಓಪನಿಂಗ್ ಜೋಡಿಯಾದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲಗೊಂಡರು. ಸಿಂಗಲ್ ಡಿಜಿಟ್‌ಗೆ ಔಟಾದ ಪೃಥ್ವಿ ಶಾ 5ರನ್‌ಗೆ ದುಶ್ಮಾಂತ್ ಚಮೀರಾಗೆ ವಿಕೆಟ್ ಒಪ್ಪಿಸಿದ್ರೆ, ಡೇವಿಡ್ ವಾರ್ನರ್ ಕೇವಲ 3ರನ್‌ಗೆ ಮೊಹ್ಸಿನ್‌ ಖಾನ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ಅಬ್ಬರಿಸಿದ ಮಿಚೆಲ್ ಹಾಗೂ ಪಂತ್

ಅಬ್ಬರಿಸಿದ ಮಿಚೆಲ್ ಹಾಗೂ ಪಂತ್

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಮಿಚೆಲ್ ಮಾರ್ಷ್ ಹಾಗೂ ನಾಯಕ ರಿಷಭ್ ಪಂತ್ ಕೌಂಟರ್ ಅಟ್ಯಾಕ್ ಮಾಡಲು ಪ್ರಯತ್ನಿಸಿದರು. ಮಿಚೆಲ್ ಮಾರ್ಷ್‌ 20 ಎಸೆತಗಳಲ್ಲಿ 37 ರನ್ ಸಿಡಿಸಿದ್ರೆ, ವಿಕೆಟ್ ಕೀಪರ್ ರಿಷಭ್ ಪಂತ್ 30 ಎಸೆತಗಳಲ್ಲಿ 44 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಈ ಎರಡು ವಿಕೆಟ್ ಪತನದ ಬಳಿಕ ಲಲಿತ್ ಯಾದವ್ ಬಹುಬೇಗನೆ 3ರನ್‌ಗೆ ಔಟಾದ್ರು.

ಗೆಲುವಿಗಾಗಿ ಅಕ್ಷರ್ ಪಟೇಲ್ ವಿಫಲ ಯತ್ನ

ಗೆಲುವಿಗಾಗಿ ಅಕ್ಷರ್ ಪಟೇಲ್ ವಿಫಲ ಯತ್ನ

ಕೊನೆಯಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ ತಂಡಕ್ಕೆ ಗೆಲುವು ತಂದುಕೊಡಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ರು. ರೋಮನ್ ಪೊವೆಲ್ 21 ಎಸೆತಗಳಲ್ಲಿ 35 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರೆ, ಅಕ್ಷರ್ ಪಟೇಲ್ ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ 21ರನ್‌ಗಳು ಬೇಕಿದ್ದಾಗ ತನ್ನೆಲ್ಲಾ ಶಕ್ತಿ ಮೀರಿ ಪ್ರಯತ್ನಿಸಿದ್ರು.

24 ಎಸೆತಗಳಲ್ಲಿ ಅಜೇಯ 42 ರನ್ ಕಲೆಹಾಕಿದ ಅಕ್ಷರ್ ಪಟೇಲ್ ಇನ್ನಿಂಗ್ಸ್‌ನಲ್ಲಿ ಮೂರು ಭರ್ಜರಿ ಸಿಕ್ಸರ್‌ಗಳಿದ್ದವು. ಕೊನೆಯ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಕಲೆಹಾಕಿದ್ದರೆ ತಂಡದ ಸ್ಕೋರ್ ಸಮನಾಗುತ್ತಿತ್ತು. ಆದ್ರೆ ಕೊನೆಯ ಎಸೆತದಲ್ಲಷೇ ಡೆಲ್ಲಿ ಆರು ರನ್ ಹರಿದು ಬಂದಿತು. ಪರಿಣಾಮ ಆರು ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಸೋಲನ್ನ ಒಪ್ಪಿಕೊಂಡಿದೆ.

ಲಕ್ನೋ ಸೂಪರ್ ಜೈಂಟ್ಸ್‌ ಸೂಪರ್ ಬೌಲಿಂಗ್ ಮಾಡಿದ ಮೊಹ್ಸಿನ್ ಖಾನ್ 4 ಓವರ್‌ಗಳಲ್ಲಿ ಕೇವಲ 16 ರನ್ ನೀಡಿ 4 ವಿಕೆಟ್ ಕಬಳಿಸಿ, ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

ಉತ್ತಮ ಆರಂಭ ಪಡೆದ ಲಕ್ನೋ ಸೂಪರ್‌ಜೈಂಟ್ಸ್‌

ಉತ್ತಮ ಆರಂಭ ಪಡೆದ ಲಕ್ನೋ ಸೂಪರ್‌ಜೈಂಟ್ಸ್‌

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆ.ಎಲ್ ರಾಹುಲ್ ಮತ್ತೊಂದು ಬೊಂಬಾಟ್ ಇನ್ನಿಂಗ್ಸ್ ಆಡುವ ಮೂಲಕ ತಂಡದ ಮೊತ್ತವನ್ನ ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು. ಮೊದಲ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದ ರಾಹುಲ್ ಟಾಪ್ ಆರ್ಡರ್‌ ಬ್ಯಾಟರ್‌ಗಳ ಜೊತೆಗೆ ಅಬ್ಬರಿಸಿದ್ರು.

ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಕ್ವಿಂಟನ್ ಡಿಕಾಕ್ 23ರನ್‌ಗಳಿಸಿದ್ದಾಗ ಲಲಿತ್ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಆದ್ರೆ ಎರಡನೇ ವಿಕೆಟ್ ಜೊತೆಯಾದ ರಾಹುಲ್ ಹಾಗೂ ದೀಪಕ್ ಹೂಡಾ ಉತ್ತಮ ಜೊತೆಯಾಟದ ಮೂಲಕ ಮಿಂಚಿದರು.

SRH ವಿರುದ್ಧ ಗೆದ್ದ ನಂತ್ರ ಜಡೇಜಾ ನಾಯಕತ್ವ ಬಿಟ್ಟಿದ್ದರ ಬಗ್ಗೆ ಧೋನಿ ಏನ್ ಹೇಳಿದ್ರು... | Oneindia Kannada
ಅಬ್ಬರಿಸಿದ ಹೂಡಾ, ಕೆ.ಎಲ್ ರಾಹುಲ್

ಅಬ್ಬರಿಸಿದ ಹೂಡಾ, ಕೆ.ಎಲ್ ರಾಹುಲ್

34 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್‌ಗಳ ನೆರವಿನಿಂದ ಹೂಡಾ 52ರನ್‌ಗಳಿಸಿದ್ರೆ, ಕೆ.ಎಲ್ ರಾಹುಲ್ 5 ಅಮೋಘ ಸಿಕ್ಸರ್ ಹಾಗೂ 4 ಬೌಂಡರಿ ಮೂಲಕ 51 ಎಸೆತಗಳಲ್ಲಿ 77 ರನ್‌ ಸಿಡಿಸಿದ್ರು. ಐಪಿಎಲ್‌ನಲ್ಲಿ 29ನೇ ಅರ್ಧಶತಕ ದಾಖಲಿಸಿದ ಕೆ.ಎಲ್ ರಾಹುಲ್‌ ಮೈದಾನದ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ್ರು.

ಎರಡನೇ ವಿಕೆಟ್‌ಗೆ ಜೊತೆಯಾಗಿದ್ದ ಈ ಜೋಡಿಯನ್ನ ಶಾರ್ದೂಲ್ ಠಾಕೂರ್ ಬೇರ್ಪಡಿಸದ್ರು. 52 ರನ್ ಕಲೆಹಾಕಿದ್ದ ಹೂಡಾ ಕಾಟನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಅದ್ಭುತ ಆಟವಾಡಿದ ರಾಹುಲ್ 19ನೇ ಓವರ್‌ನಲ್ಲಿ ಲಲಿತ್ ಯಾದವ್ ಬೌಂಡರಿ ಲೈನ್‌ನಲ್ಲಿ ಹಿಡಿದ ಉತ್ತಮ ಕ್ಯಾಚ್‌ನಿಂದಾಗಿ ಔಟಾಗಿ ಇನ್ನಿಂಗ್ಸ್ ಮುಗಿಸಿದ್ರು. ರಾಹುಲ್‌ ತಂಡದ ಪರ ಗರಿಷ್ಠ ಸ್ಕೋರರ್ ಆಗಿ 77ರನ್ ಕಲೆಹಾಕಿದರು.

ಕೆಳಕ್ರಮಾಂಕದಲ್ಲಿ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಸಿಕ್ಕ ಒಂದು ಜೀವದಾನದಿಂದಾಗಿ 16 ಎಸೆತಗಳಲ್ಲಿ 17ರನ್‌ಗಳಿಸಲಷ್ಟೇ ಶಕ್ತರಾದರು. ಕೃನಾಲ್ ಪಾಂಡ್ಯ 9 ರನ್‌ಗಳ ಕೊಡುಗೆ ನೀಡಿದರು. ಪರಿಣಾಮ ಲಕ್ನೋ ಮೂರು ವಿಕೆಟ್ ನಷ್ಟಕ್ಕೆ 195ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪರ ಶಾರ್ದೂಲ್ ಠಾಕೂರ್ ಏಕೈಕ ವಿಕೆಟ್ ಟೇಕರ್ ಆಗಿದ್ದು, 4 ಓವರ್‌ಗಳಲ್ಲಿ 40ರನ್ ನೀಡಿ 3 ವಿಕೆಟ್ ಪಡೆದರು.

Story first published: Monday, May 2, 2022, 11:13 [IST]
Other articles published on May 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+