IPL 2022: KKR vs SRH: ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟ ಇತ್ತಂಡಗಳ ಆಟಗಾರರು

ಈ ಬಾರಿಯ ಐಪಿಎಲ್‌ನ 61ನೇ ಪಂದ್ಯ ಇಂದು ಶನಿವಾರ ನಡೆಯಲಿದ್ದು ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಎರಡೂ ತಂಡಗಳು ಅಧಿಕೃತವಾಗಿ ಇನ್ನೂ ಪ್ಲೇಆಫ್ ರೇಸ್‌ನಲ್ಲಿ ಮುಂದುವರಿದಿದ್ದು ಎಸ್‌ಆರ್‌ಹೆಚ್‌ಗೆ ಹೆಚ್ಚಿನ ಅವಕಾಶವಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸತತ ಸೋಲು ತಂಡಕ್ಕೆ ಹಿನ್ನಡೆಯುಂಟು ಮಾಡಿದೆ. ಮತ್ತೊಂದೆಡೆ ಸಾಕಷ್ಟು ಭರವಸೆ ಮೂಡಿಸಿದ್ದ ಕೆಕೆಆರ್ ಸಾಕಷ್ಟು ಗೊಂದಲದಲ್ಲಿದ್ದು ತಂಡದ ಅಸ್ಥಿರ ಪ್ರದರ್ಶನ ಆಘಾತ ಮೂಡಿಸಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಮಡಗಳು ಈವರೆಗೆ ಒಟ್ಟು 22 ಬಾರಿ ಐಪಿಎಲ್‌ನಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೇಲುಗೈ ಸಾಧಿಸಿದ್ದು 14 ಗೆಲುವು ಸಾಧಿಸಿದೆ. ಎಸ್‌ಆರ್‌ಹೆಚ್ ತಂಡ 8 ಗೆಲುವಿಗೆ ತೃಪ್ತಿಪಟ್ಟಿದೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಹಂತದಲ್ಲಿ ಮುಖಾಮುಖಿಯಾಗಿದ್ದಾಗ ಹೈದರಾಬಾದ್ ತಂಡ ಗೆಲುವು ಸಾಧಿಸಿತ್ತು.
ಈ ಪಂದ್ಯದಲ್ಲಿ ಕೆಲ ಆಟಗಾರರು ಪ್ರಮುಖ ಮೈಲಿಗಲ್ಲು ದಾಖಲಿಸುವ ಅವಕಾಶವನ್ನು ಹೊಂದಿದ್ದು ಆ ಬಗ್ಗೆ ಮಾಹಿತಿ ಇಲ್ಲದೆ
*ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಆಂಡ್ರೆ ರಸೆಲ್ ಕೆಕೆಆರ್ ಫ್ರಾಂಚೈಸಿಗಾಗಿ 2000 ರನ್ ಪೂರ್ಣಗೊಳಿಸುವ ಅವಕಾಶ ಹೊಂದಿದ್ದಾರೆ. ಅದಕ್ಕಾಗಿ ಇನ್ನು ಕೇವಲ 2 ರನ್ ಅಗತ್ಯವಿದೆ. ಗೌತಮ್ ಗಂಭೀರ್, ರಾಬಿನ್ ಉತ್ತಪ್ಪ ಮತ್ತು ಯೂಸುಫ್ ಪಠಾಣ್ ನಂತರ ಈ ಮೈಲಿಗಲ್ಲು ಸಾಧಿಸಿದ 4 ನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ ರಸೆಲ್.

* ಕೆಕೆಆರ್ ಬ್ಯಾಟರ್ ಆಂಡ್ರೆ ರಸೆಲ್ ಐಪಿಎಲ್‌ನಲ್ಲಿ 2000 ರನ್ ಗಡಿ ತಲುಪಲು 19 ರನ್‌ಗಳನ್ನು ಗಳಿಸಬೇಕಿದೆ.
* ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ದಾಂಡಿಗ ನಿತೀಶ್ ರಾಣಾ ನೈಟ್ ರೈಡರ್ಸ್‌ಗಾಗಿ 150 ಬೌಂಡರಿಗಳನ್ನು ಪೂರ್ಣಗೊಳಿಸುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ಈ ಪಂದ್ಯದಲ್ಲಿ ಕೇವಲ ಒಂದು ಬೌಂಡರಿ ಬಾರಿಸಿದರೆ ಸಾಕು.
* ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಇನ್ನು 4 ಸಿಕ್ಸರ್‌ಗಳ ಅಗತ್ಯವಿದೆ.
* ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಐಯ್ಯರ್ ಐಪಿಎಲ್‌ನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಶನಿವಾರ ದಾಟಲಿದ್ದಾರೆ. ಸನ್‌ರೈಸರ್ಸ್ ಹೈದರಬಾದ್ ವಿರುದ್ಧ ಕಣಕ್ಕಿಳಿಯುವ ಮೂಲಕ ಅವರು ಐಪಿಎಲ್‌ನಲ್ಲಿ ತಮ್ಮ 100 ನೇ ಪಂದ್ಯದಲ್ಲಿ ಆಡಲಿದ್ದಾರೆ.
* ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಟಿಮ್ ಸೌಥಿ ಐಪಿಎಲ್‌ನಲ್ಲಿ 50 ವಿಕೆಟ್ ಪೂರೈಸಲು 7 ವಿಕೆಟ್‌ಗಳ ಅಗತ್ಯವಿದೆ.
* ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಆರ್ ಅಶ್ವಿನ್ ಅವರನ್ನು ಹಿಂದಿಕ್ಕಲು ಇನ್ನು 3 ವಿಕೆಟ್‌ಗಳ ಅಗತ್ಯವಿದೆ. ಅಶ್ವಿನ್ 154 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದರೆ ಭುವನೇಶ್ವರ್ 152 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications