For Quick Alerts
ALLOW NOTIFICATIONS  
For Daily Alerts
 

CSK vs LSG: ಐಪಿಎಲ್‌ನ ದೊಡ್ಡ ದಾಖಲೆ ತನ್ನ ಹೆಸರಿಗೆ ಬರೆಯಲು ಸಜ್ಜಾದ ಡ್ವೇಯ್ನ್ ಬ್ರಾವೋ!

IPL 2022, match 7, CSK vs LSG: Players records and approaching milestones

ಐಪಿಎಲ್ ಅಂಗಳದಲ್ಲಿ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿದೆ. ಎರಡೂ ತಂಡಗಳು ಕೂಡ ಈ ಬಾರಿಯ ಆವೃತ್ತಿಯ ತಮ್ಮ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದು ಈ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಖಾತೆ ತೆರೆಯಲು ಉತ್ಸುಕವಾಗಿದೆ. ಒಂದೆಡೆ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿದ್ದರೆ ಮತ್ತೊಂದೆಡೆ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ರವೀಂದ್ರ ಜಡೇಜಾ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಟೂರ್ನಿಯ ಆರಂಭೀಕ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಹಿನ್ನಡೆ ಅನುಭವಿಸಿತು. ಈ ಕಾರಣದಿಂದಾಗಿ 6 ವಿಕೆಟ್‌ಗಳ ಅಂತರದಿಂದ ಸೋಲು ಕಂಡಿತ್ತು ಜಡೇಜಾ ಬಳಗ. ಆದರೆ ಈ ಪಂದ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಭರ್ಜರಿ ಅರ್ಧ ಶತಕ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಮತ್ತೊಂದೆಡೆ ಕೆಎಲ್ ರಾಹುಲ್ ನೇತೃತ್ವದ ಎಲ್‌ಎಸ್‌ಜಿ ತಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ವಿರುದ್ಧ ಉತ್ತಮ ಹೋರಾಟ ನಡೆಸಿಯೂ ರೋಚಕ ಪಂದ್ಯದಲ್ಲಿ ಸೋಲು ಕಂಡಿತ್ತು.

IPL 2022, match 7, CSK vs LSG: Players records and approaching milestones

ಇದೀಗ ಈ ಎರಡೂ ತಂಡಗಳು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲು ವೇದಿಕೆ ಸಜ್ಜಾಗಿದೆ. ಇನ್ನು ಈ ಪಂದ್ಯದಲ್ಲಿ ಎರಡೂ ತಂಡಗಳ ಕೆಲ ಆಟಗಾರರು ಪ್ರಮುಖ ದಾಖಲೆ ಹಾಗೂ ಮೈಲಿಗಲ್ಲಿ ನೆಡಲು ಸಜ್ಜಾಗಿದ್ದಾರೆ. ಇಂದಿನ ಈ ಪಂದ್ಯದಲ್ಲಿ ದಾಖಲಾಗಬಹುದಾಗ ಕೆಲ ಪ್ರಮುಖ ದಾಖಲೆ ಹಾಗೂ ಮೈಲಿಗಲ್ಲುಗಳತ್ತ ಗಮನಹರಿಸೋಣ.

*ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದ ಲಸಿತ್ ಮಲಿಂಗಾ ಸಾಧನೆಯನ್ನು ಕಳೆದ ಪಂದ್ಯದಲ್ಲಿ ಡ್ವೇಯ್ನ್ ಬ್ರಾವೋ ಸರಿಗಟ್ಟಿದ್ದರು. ಇಂದಿನ ಪಂದ್ಯದಲ್ಲಿ ಬ್ರಾವೋ ಒಂದು ವಿಕೆಟ್ ಪಡೆದರೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದಂತಾಗುತ್ತದೆ. ಪ್ರಸ್ತಿತ ಮಲಿಂಗಾ ಹಾಗೂ ಬ್ರಾವೋ ಐಪಿಎಲ್‌ನಲ್ಲಿ 170 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

* ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಅಂಬಾಟಿ ರಾಯುಡು ಮೊದಲ ಪಂದ್ಯದಲ್ಲಿ ವಿಫಲವಾಗಿದ್ದರು. ಎರಡನೇ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 69 ರನ್ ಗಳಿಸಿದರೆ ಐಪಿಎಲ್‌ನಲ್ಲಿ 4000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.

*ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಈ ಪಂದ್ಯದಲ್ಲಿ 2 ಬೌಂಡರಿ ಗಳಿಸಿದರೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 500 ಬೌಂಡರಿ ಬಾರಿಸಿದಂತಾಗುತ್ತದೆ.

*ಇನ್ನು ಕೆಎಲ್ ರಾಹುಲ್ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸುವ ಅವಕಾಶವನ್ನು ಹೊಂದಿದ್ದಾರೆ. ಇಂದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದರೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ರಾಹುಲ್ 50ನೇ ಅರ್ಧ ಶತಕ ಬಾರಿಸಿದಂತಾಗುತ್ತದೆ.

*ಕಳೆದ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಮಿಂಚಿದ್ದ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ಇಂದಿನ ಪಂದ್ಯದಲ್ಲಿ 15 ರನ್ ಗಳಿಸಿದರೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 7000 ರನ್‌ಗಳಿಸಿದಂತಾಗುತ್ತದೆ.

*ಇನ್ನು ಸಿಎಸ್‌ಕೆ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ಮತ್ತೆರಡು ಮೈಲಿಗಲ್ಲು ಸಾಧಿಸುವ ಅವಕಾಶವೂ ಈ ಪಂದ್ಯದಲ್ಲಿದೆ. ಈ ಪಂದ್ಯದಲ್ಲಿ ಬ್ರಾವೋ 4 ಬೌಂಡರಿ ಗಳಿಸಿದರೆ ಸಿಎಸ್‌ಕೆ ಪರವಾಗಿ 100 ಬೌಂಡರಿ ಸಿಡಿಸಿದಂತಾಗುತ್ತದೆ. 3 ಸಿಕ್ಸರ್ ಸಿಡಿಸಿದರೆ ಚೆನ್ನೈ ತಂಡದ ಪರವಾಗಿ 50 ಸಿಕ್ಸರ್ ಬಾರಿಸಿ ಸಾಧನೆ ಮಾಡಿದಂತಾಗುತ್ತದೆ.

Story first published: Thursday, March 31, 2022, 11:42 [IST]
Other articles published on Mar 31, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+