CSK ಗೆ ಆಲ್‌ರೌಂಡರ್ ಬಲ: ಅಂತೂ ತಂಡ ಸೇರಿಕೊಂಡ ಮೊಯಿನ್ ಅಲಿ

ಆರಂಭಿಕ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಗ್ಗರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆನೆಬಲ ಸಿಕ್ಕಂತಾಗಿದೆ. ತಂಡದ ಕೀ ಪ್ಲೇಯರ್ ಆಲ್‌ರೌಂಡರ್ ಮೊಯಿನ್ ಅಲಿ ಕೊನೆಗೂ ಸಿಎಸ್‌ಕೆ ತಂಡ ಸೇರಿಕೊಂಡಿದ್ದಾರೆ.
ವೀಸಾ ಸಮಸ್ಯೆಯಿಂದಾಗಿ ಸ್ಕ್ವಾಡ್ ಸೇರಿಕೊಳ್ಳಲು ತಡವಾಗಿದ್ದ ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿ, ಇತ್ತೀಚೆಗೆ ಭಾರತದ ವೀಸಾ ಪಡೆದು ಮುಂಬೈಗೆ ಆಗಮಿಸಿದ್ದರು. ಕೋವಿಡ್-19 ಬಯೋ ಬಬಲ್ ಪ್ರಕಾರ ಮೊಯಿನ್ ಅಲಿ ಮೂರು ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದರು. ಇದೀಗ ಬಯೋ ಬಬಲ್ ಬ್ರೇಕ್ ಮೂಲಕ ತಂಡವನ್ನ ಸೇರಿಕೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ, ಮೂರು ದಿನಗಳ ಕ್ವಾರಂಟೈನ್ ಮುಗಿಸಿದ ಬಳಿಕ ತಂಡದ ಆಟಗಾರರನ್ನ ಭೇಟಿ ಮಾಡಿ ಮಾತನಾಡಿಸಿದ್ರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಮೊಯಿನ್ ಅಲಿ ಆಡುವುದು ಬಹುತೇಕ ಖಚಿತವಾಗಿದೆ.

ಸಿಎಸ್‌ಕೆ ಪರ ಮೊಯಿನ್ ಅಲಿ ಉತ್ತಮ ಪ್ರದರ್ಶನ
ಮೊಯಿನ್ ಅಲಿ ಚೆನ್ನೈ ಸೂಪ್ ಕಿಂಗ್ಸ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಹಳದಿ ಬಣ್ಣದ ಜೆರ್ಸಿ ತೊಟ್ಟ ಬಳಿಕ ಮೊಯಿನ್ 15 ಪಂದ್ಯಗಳನ್ನ ಆಡಿದ್ದು, 357 ರನ್‌ಗಳ ಜೊತೆಗೆ 6 ವಿಕೆಟ್ ಕಬಳಿಸಿದ್ದಾರೆ. 137.30ರ ಸ್ಟ್ರೈಕ್‌ರೇಟ್‌ನಲ್ಲಿ 19 ಸಿಕ್ಸರ್ ಮತ್ತು 31 ಬೌಂಡರಿಗಳನ್ನು ಗಳಿಸಿದ್ದಾರೆ.

ದೀಪಕ್ ಚಹಾರ್ ಅಲಭ್ಯತೆ, ಸಿಎಸ್‌ಕೆಗೆ ಹಿನ್ನಡೆ
ಅಮೋಘ ಬೌಲಿಂಗ್ ಮಾಡುತ್ತಿದ್ದ ದೀಪಕ್ ಚಹಾರ್ ಸಿಎಸ್‌ಕೆ ತಂಡಕ್ಕೆ ಕಳೆದ ಸೀಸನ್‌ನಲ್ಲಿ ಆರಂಭಿಕ ವಿಕೆಟ್ ಕಬಳಿಸುವುದರಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿಯೇ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ಎರಡನೇ ಅತಿ ಹೆಚ್ಚು ಮೊತ್ತವಾದ 14 ಕೋಟಿ ರೂ.ಗೆ ಆಟಗಾರನನ್ನು ಮರಳಿ ತಂಡಕ್ಕೆ ಕರೆತಂದಿತು.
ಆದ್ರೆ ಕಳೆದ ವೆಸ್ಟ್ ಇಂಡೀಸ್ ಭಾರತ ಪ್ರವಾಸದ ಮೂರನೇ ಟಿ20 ಪಂದ್ಯದಲ್ಲಿ ದೀಪಕ್ ಚಹರ್ ಗಾಯಗೊಂಡಿದ್ದರು. ಮೊದಲೆರಡು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದ್ದ, ದೀಪಕ್ ಚಹಾರ್ ಬೌಲಿಂಗ್ ರನ್ನಿಂಗ್ ಸಮಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದರು. ಇದಾದ ಬಳಿಕ ಫಿಸಿಯೋ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದರು. ಚಾಹರ್ ಎನ್‌ಸಿಎದಲ್ಲಿ ಪುನರ್ವಸತಿ ಶಿಬಿರದಲ್ಲಿ ಭಾಗಿದ್ದರು ಸಹ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ
IPL 2022: ಆರ್‌ಸಿಬಿ ಅಲ್ಲ ಈ 4 ತಂಡಗಳು ಪ್ಲೇಆಫ್ ಪ್ರವೇಶಿಸಲಿವೆ ಎಂದ ಮಾಜಿ ಕ್ರಿಕೆಟಿಗ!

ಕೆಕೆಆರ್ ವಿರುದ್ಧ ಮೊದಲ ಪಂದ್ಯದಲ್ಲಿ ಚೆನ್ನೈಗೆ ಸೋಲು
ಐಪಿಎಲ್ 2022ರ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಎದುರು 131ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪರ ಮಾಜಿ ನಾಯಕ ಮಹೇಂದ್ರ ಧೋನಿ ಏಕಾಂಗಿ ಅಜೇಯ ಅರ್ಧಶತಕದ ಹೋರಾಟ ಜೊತೆಗೆ ಜಡ್ಡು ಕೊಡುಗೆ ನೀಡಿದ್ರು. 132ರನ್‌ಗಳ ಸುಲಭ ಗುರಿಯನ್ನ ಬೆನ್ನತ್ತಿದ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ 9 ಎಸೆತಗಳು ಬಾಕಿ ಇರುವಂತೆ 6 ವಿಕೆಟ್‌ಗಳ ಗೆಲುವು ಸಾಧಿಸಿತು.
IPL 2022: ಪಂಜಾಬ್ ವಿರುದ್ಧ ಆರ್‌ಸಿಬಿ ಸೋತರೂ ಎದುರಾಳಿಗಳಲ್ಲಿ ಈ ಕಾರಣಕ್ಕೆ ಶುರುವಾಗಿದೆ ನಡುಕ!

ಕೆಕೆಆರ್ ವಿರುದ್ಧ ಆಡಿದ ಸಿಎಸ್‌ಕೆ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಆಡಮ್ ಮಿಲ್ನೆ, ತುಷಾರ್ ದೇಶಪಾಂಡೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications