Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಧೋನಿ ಎದುರೇ ಹೆಲಿಕಾಪ್ಟರ್ ಶಾಟ್ ಹೊಡೆದ ಮೊಹಮ್ಮದ್ ಸಿರಾಜ್

Mohammed Siraj

ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಐಪಿಎಲ್ ಅಭಿಮಾನಿಗಳಿಗೆ ರಸದೌತಣ ನೀಡಿದ್ದಂತು ಸುಳ್ಳಲ್ಲ. ಅದ್ರಲ್ಲೂ ಬೌಲರ್‌ಗಳನ್ನ ದಂಡಿಸುವ ಮೂಲಕ ಬ್ಯಾಟ್ಸ್‌ಮನ್‌ಗಳ ಅಬ್ಬರವಂತೂ ಅಭಿಮಾನಿಗಳಿಗೆ ಸಾಕಷ್ಟು ಮನರಂಜನೆ ನೀಡಿತು. ಸಿಎಸ್‌ಕೆ ಬ್ಯಾಟಿಂಗ್ ಅಬ್ಬರದ ಜೊತೆಗೆ, ಆರ್‌ಸಿಬಿ ಕೆಳಕ್ರಮಾಂಕದ ಬ್ಯಾಟ್ಸ್‌ಮನ್ ಗಳ ಆಟ ರೋಮಾಂಚನಕಾರಿಯಾಗಿತ್ತು.

ಸಿಎಸ್‌ಕೆ ಓಪನರ್‌ ರಾಬಿನ್ ಉತ್ತಪ್ಪ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ಆಲ್‌ರೌಂಡರ್ ಶಿವಂ ದುಬೆ ಮಿಂಚಿನಂತಹ ಆಟಕ್ಕೆ ಆರ್‌ಸಿಬಿ ಬೌಲರ್‌ಗಳು ಪತರುಗುಟ್ಟಿದರು. ಕೀ ಬೌಲರ್ ಹರ್ಷಲ್ ಪಟೇಲ್ ಅಲಭ್ಯತೆ ನಡುವೆ ಎದುರಾಳಿ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ವಿಫಲಗೊಂಡ ಆರ್‌ಸಿಬಿ 215ರನ್ ಚಚ್ಚಿಸಿಕೊಂಡಿತು.

ಸಿಎಸ್‌ಕೆ ನೀಡಿದ 216 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ಮತ್ತದೇ ಟಾಪ್ ಆರ್ಡರ್ ವೈಫಲ್ಯದೊಂದಿಗೆ ಸತತ ಮೂರು ಗೆಲುವಿನ ಜಯದ ಖುಷಿಯನ್ನ ಒಂದೇ ಪಂದ್ಯದಲ್ಲಿ ಕಳೆದುಕೊಂಡಿತು.

ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್, ಅನುಜ್ ರಾವತ್, ಕೊಹ್ಲಿ, ಮ್ಯಾಕ್ಸ್‌ವೆಲ್ ಹೀಗೆ ಸಾಲು ಸಾಲು ಆಟಗಾರರು ಫೇಲ್ಯೂರ್‌ ಕೆಳಕ್ರಮಾಂಕದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿತು. ಆದ್ರೂ ಸಹ ಶಬಾಜ್ ಅಹ್ಮದ್, ಯುವ ಬ್ಯಾಟರ್ ಸುಯಾಶ್ ಪ್ರಭುದೇಸಾಯಿ ಮತ್ತು ಆರ್‌ಸಿಬಿಯ ಫಿನಿಷರ್ ದಿನೇಶ್ ಕಾರ್ತಿಕ್ ತನ್ನ ಕೈಲಾದ ಪ್ರಯತ್ನ ನಡೆಸಿ ತಂಡದ ಮೊತ್ತವನ್ನ 200ರ ಗಡಿ ಸಮೀಪಕ್ಕೆ ತಂದರು.

9 ವಿಕೆಟ್ ನಷ್ಟಕ್ಕೆ 193ರನ್ ಕಲೆಹಾಕಿದ ಆರ್‌ಸಿಬಿ 23ರನ್‌ಗಳಿಂದ ಸೋಲನ್ನ ಕಂಡಿತು. ಆದ್ರೆ ಕೊನೆಯಲ್ಲಿ ಅಜೇಯ 14ರನ್ ಕಲೆಹಾಕಿದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ನೋಡುಗರ ಗಮನಸೆಳೆದಿದ್ದು ಸುಳ್ಳಲ್ಲ. ಮೂರು ಬೌಂಡರಿ ಸಿಡಿಸಿದ ಸಿರಾಜ್ ಕೊನೆಯಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಚೆಂಡನ್ನ ಬೌಂಡರಿ ಗೆರೆ ದಾಟಿಸಿದ್ದು ಆಕರ್ಷಕವಾಗಿತ್ತು.

ಅದ್ರಲ್ಲೂ ಹೆಲಿಕಾಪ್ಟನ್ ಜನಕ ಮಹೇಂದ್ರ ಸಿಂಗ್ ಧೋನಿಯ ಮುಂದೆಯೇ ಸಿರಾಜ್ ಈ ಶಾಟ್ ಹೊಡೆದಿದ್ದು, ನೋಡುಗರನ್ನ ವ್ಹಾ ಸಿರಾಜ್ , ವಾಟ್ ಎ ಶಾಟ್‌ ಎಂದು ಅಭಿಮಾನಿಗಳು ಚಪ್ಪಾಳೆ ತಟ್ಟಿದರು.

ಹೆಲಿಕಾಪ್ಟರ್ ಶಾಟ್ ಹೊಡೆದು ಧೋನಿಯತ್ತ ನೋಡಿದ ಸಿರಾಜ್

ಪಂದ್ಯದ ಕೊನೆಯ ಎಸೆತದಲ್ಲಿ ಡಿಜೆ ಬ್ರಾವೊ ಬೌಲಿಂಗ್‌ನಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ದಾಖಲಿಸಿದ ವೇಗಿ ಸಿರಾಜ್‌ ಬೌಂಡರಿ ಸಿಡಿಸಿದ್ದೇ ತಡ ಮಹೇಂದ್ರ ಸಿಂಗ್ ಧೋನಿಯತ್ತ ತಿರುಗಿ ಅಭಿನಂದಿಸಿದರು. ಕಾಮೆಂಟೇಟರ್ಸ್ ಕೂಡ ಮೊಹಮ್ಮದ್ ಸಿರಾಜ್‌ ಧೋನಿಯ ಸಾಂಪ್ರದಾಯಿಕ ಹೆಲಿಕಾಪ್ಟರ್ ಶಾಟ್ ಮೂಲಕ ಇನ್ನಿಂಗ್ಸ್ ಮುಗಿಸಿದ್ರು ಎಂದು ಹೇಳಿದ್ರು. ಆದ್ರೆ ಅದಾಗಲೇ ಮುಂದಿದ್ದ ಸಿಎಸ್‌ಕೆ 23ರನ್‌ಗಳಿಂದ ಪಂದ್ಯ ಜಯಿಸಿದ್ದಷ್ಟೇ ಅಲ್ಲದೆ 2022ರ ಐಪಿಎಲ್ ಸೀಸನ್‌ನಲ್ಲಿ ಮೊದಲ ಗೆಲುವು ದಾಖಲಿಸಿತು.

Story first published: Wednesday, April 13, 2022, 16:55 [IST]
Other articles published on Apr 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+