For Quick Alerts
ALLOW NOTIFICATIONS  
For Daily Alerts
 

ಟಿ20 ಮಾದರಿಯಲ್ಲಿ ಧೋನಿ ವಿಶೇಷ ದ್ವಿಶತಕ: ಚುಟುಕು ಕ್ರಿಕೆಟ್‌ನಲ್ಲಿ ಸಾಧನೆಗೈದ ಏಕೈಕ ವಿಕೆಟ್ ಕೀಪರ್

IPL 2022: MS Dhoni becomes the first wicket-keeper to achieve a special double ton in T20 cricket

ಐಪಿಎಲ್ 15ನೇ ಆವೃತ್ತಿಯ ಆರಂಭ ಭರ್ಜರಿಯಾಗಿ ಸಾಗುತ್ತಿದ್ದು ಮೊದಲ ವಾರದಲ್ಲಿಯೇ ಅಭಿಮಾನಿಗಳಿಗೆ ಭರಪೂರ ಮನರಂಜನೆ ದೊರೆತಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸುತ್ತಿಲ್ಲ. ಟೂರ್ನಿಯ ಆರಂಭಕ್ಕೂ ಮುನ್ನವೇ ನಾಯಕತ್ವವನ್ನು ಧೋನಿ ಹಸ್ತಾಂತರಿಸಿದ್ದು ಜಡೇಜಾ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿರುವ ಧೋನಿ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿದ್ದು ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ಭಾರತ ತಂಡದ ಮಾಜಿ ನಾಯಕನೂ ಆಗಿರುವ ಎಂಎಸ್ ಧೋನಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿಶೇಷ ದ್ವಿಶತಕವೊಂದನ್ನು ದಾಖಲಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ 200 ಕ್ಯಾಚ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ ಎಂಎಸ್ ಧೋನಿ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಈ ಸಾಧನೆ ಮಾಡಲು ಎಂಎಸ್ ಧೋನಿಗೆ ಕೇವಲ ಒಂದು ಕ್ಯಾಚ್‌ನ ಅಗತ್ಯವಿತ್ತು. ಡ್ವ್ಯೇಯ್ನ್ ಪ್ರೆಟೋರಿಯಸ್ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ನೀಡಿದ ಕ್ಯಾಚ್‌ಅನ್ನು ಯಶಸ್ವಿಯಾಗಿ ಪಡೆಯುವ ಮೂಲಕ ಈ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ ಧೋನಿ. ಟಿ20 ಕ್ರಿಕೆಟ್ ಮಾದರಿಯಲ್ಲಿ 200 ಕ್ಯಾಚ್ ಸಂಪೂರ್ಣಗೊಳಿಸಿದ ಕೇವಲ 4ನೇ ಕ್ರಿಕೆಟರ್ ಎನಿಸಿದ್ದಾರೆ ಎಂಎಸ್ ಧೋನಿ. ಟಿ20 ಕ್ರಿಕೆಟ್‌ನಲ್ಲಿ 200 ಕ್ಯಾಚ್ ಪಡೆದ ಏಕೈಕ ಕ್ರಿಕೆಟರ್ ಆಗಿದ್ದಾರೆ ಎಂಎಸ್ ಧೋನಿ. 195 ಕ್ಯಾಚ್‌ಗಳನ್ನು ಧೋನಿ ವಿಕೆಟ್ ಕೀಪರ್ ಆಗಿ ಪಡೆದಿದ್ದರೆ ಐದು ಕ್ಯಾಚ್‌ಗಳನ್ನು ಫಿಲ್ಡರ್ ಆಗಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಇತರ ಕ್ರಿಕೆಟಿಗರೆಂದರೆ ಕಿರಾನ್ ಪೊಲಾರ್ಡ್, ಡ್ವೇಯ್ನ್ ಬ್ರಾವೋ ಹಾಗೂ ಡೇವಿಡ್ ಮಿಲ್ಲರ್.

ಭಾರತದ ಅನುಭವಿ ಕ್ರಿಕೆಟಿಗನಾಗಿರುವ ಎಂಎಸ್ ಧೋನಿ ಈ ಬಾರಿಯ ಟೂರ್ನಿಯ ಆರಂಭಿಕ ಪಂದ್ಯದಲ್ಲಿಯೇ ಅರ್ಧ ಶತಕ ಸಿಡಿಸಿ ಮಿಂಚುವ ಮೂಲಕ ಅದ್ಭುತ ಫಾರ್ಮ್‌ನಲ್ಲಿರುವುದನ್ನು ಸಾರಿದ್ದರು. ಎರಡನೇ ಪಂದ್ಯದಲ್ಲಿಯೂ ಧೋನಿ ಸ್ಪೋಟಕ ಪ್ರದರ್ಶಮ ನೀಡಿ ಮಿಂಚು ಹರಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 6 ಎಸೆತಗಳಲ್ಲಿ 16 ರನ್ ಸಿಡಿಸಿ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ.

IPL 2022: MS Dhoni becomes the first wicket-keeper to achieve a special double ton in T20 cricket

ಇನ್ನು ಹಾಲಿ ಚಾಂಪಿಯನ್ ತಂಡವಾಗಿ ಟೂರ್ನಿ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಕಳಪೆ ಆರಂಭವನ್ನು ಪಡೆದಿದೆ. ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಳಪೆ ಪ್ರದರ್ಶನ ನೀಡಿ ಸೋಲು ಅನುಭವಿಸಿದ್ದರೆ ಎಲ್‌ಎಸ್‌ಜಿ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಪೇರಿಸಿದ ಹೊರತಾಗಿಯೂ ಸಿಎಸ್‌ಕೆ ಸೋಲು ಕಾಣುವಂತಾಗಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಸಿಎಸ್‌ಕೆ ಸದ್ಯ ಕೊನೆಯ ಸ್ಥಾನದಲ್ಲಿದೆ.

ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಭಾನುವಾರ ಆಡಲಿದ್ದು ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ ಸಿಎಸ್‌ಕೆ.

Story first published: Friday, April 1, 2022, 12:46 [IST]
Other articles published on Apr 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+