
ಐಪಿಎಲ್‌ನ 15 ನೇ ಋತುವಿನಲ್ಲಿ, ಲೆಜೆಂಡ್ ಎಂ.ಎಸ್ ಧೋನಿ ಅವರು ನಾಯಕತ್ವದ ಹೊಣೆಗಾರಿಕೆ ಇಲ್ಲದೆ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಕೇವಲ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಗುರುವಾರ, ಅವರು ನಾಯಕತ್ವದಿಂದ ಕೆಳಗಿಳಿಯುವುದಾಗಿ ಸಿಎಸ್‌ಕೆ ಘೋಷಿಸಿತು. ಜೊತೆಗೆ ಧೋನಿ ಬದಲಿಗೆ ರವೀಂದ್ರ ಜಡೇಜಾ ಸ್ಥಾನ ನೀಡಿದರು.
ಶನಿವಾರ ನಡೆಯಲಿರುವ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ, ಸಿಎಸ್‌ಕೆಯನ್ನು ಹೊಸ ನಾಯಕ ಜಡೇಜಾ ಮುನ್ನಡೆಸುತ್ತಿರುವಂತೆ ಕೆಕೆಆರ್ ಅನ್ನು ಹೊಸ ನಾಯಕ ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಧೋನಿಗೆ ಕೆಲವು ಮೈಲಿಗಲ್ಲುಗಳು ಕಾದಿವೆ.
ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ 346 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇವುಗಳಲ್ಲಿ, ಅವರು 38.31 ರ ಸರಾಸರಿಯಲ್ಲಿ 134.37 ರ ಸ್ಟ್ರೈಕ್ ರೇಟ್‌ನೊಂದಿಗೆ 6935 ರನ್ ಗಳಿಸಿದರು. 7000 ರನ್‌ಗಳ ಮೈಲುಗಲ್ಲನ್ನು ಪೂರ್ಣಗೊಳಿಸಲು ಧೋನಿಗೆ ಇನ್ನೂ 65 ರನ್‌ಗಳ ಅಗತ್ಯವಿದೆ.
ಅವರು ಕೆಕೆಆರ್ ವಿರುದ್ಧ ಇಷ್ಟು ರನ್ ಗಳಿಸಿದರೆ, ಧೋನಿ 7000 ರನ್ ಕ್ಲಬ್‌ಗೆ ಸೇರಿದ ಆರನೇ ಭಾರತೀಯರಾಗುತ್ತಾರೆ. ವಿರಾಟ್ ಕೊಹ್ಲಿ (10,273), ರೋಹಿತ್ ಶರ್ಮಾ (9895), ಶಿಖರ್ ಧವನ್ (8775), ಸುರೇಶ್ ರೈನಾ (8654) ಮತ್ತು ರಾಬಿನ್ ಉತ್ತಪ್ಪ (7042) 7000 ರನ್ ಗಳಿಸಿದ ಇತರ ಭಾರತೀಯ ಬ್ಯಾಟ್ಸ್‌ಮನ್‌ಗಳು. ವಿಶ್ವ ಕ್ರಿಕೆಟ್ ವಿಚಾರಕ್ಕೆ ಬಂದರೆ 33 ಮಂದಿ ಈ ಸಾಧನೆ ಮಾಡಿದ್ದಾರೆ.
ಭಾರತ ಪರ ಧೋನಿ 2006 ರಿಂದ 2019 ರವರೆಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1617 ರನ್ ಗಳಿಸಿದ್ದಾರೆ. ಉಳಿದ 5,000 ರನ್‌ಗಳು ಐಪಿಎಲ್‌ನಿಂದ ಬಂದಿದೆ. ಅವರು 2008 ರಲ್ಲಿ ತಮ್ಮ ಮೊದಲ ಋತುವಿನಿಂದ ಆಡುತ್ತಿದ್ದಾರೆ ಮತ್ತು 4746 ರನ್ಗಳನ್ನು ಗಳಿಸಿದ್ದಾರೆ. ಈ ಪೈಕಿ 4172 ರನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಅನ್ನೋದು ವಿಶೇಷ.
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಜಾರ್ಖಂಡ್‌ಗಾಗಿ ಎರಡು ಋತುಗಳಲ್ಲಿ ಉಳಿದ ರನ್ ಗಳಿಸಿದ್ದಾರೆ. ಸಿಎಸ್‌ಕೆ ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ಅಮಾನತುಗೊಂಡಾಗ, ಧೋನಿ 2016 ಮತ್ತು 2017 ಋತುಗಳಲ್ಲಿ ಪುಣೆ ಪರ ಆಡಿದ್ದರು.
ಕೇವಲ ರನ್‌ಗಳಲ್ಲಿ ಮಾತ್ರವಲ್ಲದೆ ಕ್ಯಾಚ್‌ಗಳಲ್ಲಿಯೂ ಎಂಎಸ್ ಧೋನಿಗೆ ಉದ್ಘಾಟನಾ ಪಂದ್ಯದಲ್ಲಿ ದೊಡ್ಡ ಮೈಲಿಗಲ್ಲು ಕಾದಿದೆ. ಇದು ಟಿ20ಯಲ್ಲಿ 200 ಕ್ಯಾಚ್‌ಗಳ ದಾಖಲೆಯಾಗಿದೆ. ಇದಕ್ಕಾಗಿ ಅವರಿಗೆ ಬೇಕಾಗಿರುವುದು ಎರಡು ಕ್ಯಾಚ್‌ಗಳು. ಸದ್ಯ ಧೋನಿ 198 ಕ್ಯಾಚ್‌ಗಳನ್ನು ಪಡೆದಿದ್ದಾರೆ.