IPL 2022: ಮುಂಬೈ ಇಂಡಿಯನ್ಸ್ ಬಲ, ವೀಕ್ನೆಸ್ ಮತ್ತು ಬೆಸ್ಟ್ ಪ್ಲೇಯಿಂಗ್ 11

ಇಂಡಿಯನ್ ಪ್ರೀಮಿಯಲ್ ಲೀಗ್ (ಐಪಿಎಲ್) 15ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು ಇನ್ನೊಂದು ದಿನವಷ್ಟೇ ಬಾಕಿ ಉಳಿದಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹೊಸ ಹುರುಪಿನೊಂದಿಗೆ ಕೆಲವು ಆಟಗಾರರ ಬದಲಾವಣೆಯೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದೆ.
2021ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿದ್ದಲ್ಲದೆ ಪ್ಲೇ ಆಫ್ ಪ್ರವೇಶಿಸಲು ವಿಫಲಗೊಂಡಿತು. ಆದ್ರೀಗ ಮುಂಬೈ ಇಂಡಿಯನ್ಸ್ ಅಬ್ಬರದ ಆಟಕ್ಕೆ ಸಜ್ಜಾಗಿದ್ದು, ಟೂರ್ನಿಗೆ ಸಕಲ ರೀತಿಯಲ್ಲಿ ಸಿದ್ಧಗೊಂಡಿದೆ.
ಮುಂಬೈ ಇಡಿಯನ್ಸ್ ನಾಲ್ಕವರು ಆಟಗಾರರನ್ನ ರೀಟಯನ್ ಮಾಡಿಕೊಂಡಿದ್ದು, ಇಶಾನ್ ಕಿಶನ್‌ಗೆ ಭಾರೀ ಮೊತ್ತ ನೀಡಿ ಹರಾಜಿನಲ್ಲಿ ಖರೀದಿಸಿದೆ. ಆದ್ರೆ ಕಳೆದ ಹಲವು ಸೀಸನ್‌ಗಳಲ್ಲಿ ತಂಡದ ಪ್ರಮುಖ ಆಟಗಾರರಾಗಿ ಆಡಿದ್ದ ಕ್ವಿಂಟನ್ ಡಿಕಾಕ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಮತ್ತು ಟ್ರೆಂಟ್ ಬೋಲ್ಟ್‌ರನ್ನ ಕೈ ಬಿಟ್ಟಿದೆ.
ಐಪಿಎಲ್ 2022ರ ಸೀಸನ್‌ಗೆ ಮುಂಬೈ ಬಲಾಬಲ ಹೇಗಿದೆ, ತಂಡದ ವೀಕ್ನೆಸ್ ಏನು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರೆಲ್ಲಾ ಆಡಬಹುದು ಎಂಬುದರ ಕುರಿತಾದ ಮಾಹಿತಿ ಈ ಕೆಳಗಿದೆ. ಅದಕ್ಕೂ ಮೊದಲು ಮುಂಬೈ ಇಂಡಿಯನ್ಸ್‌ನ ಸಂಪೂರ್ಣ ಸ್ಕ್ವಾಡ್ ತಿಳಿದುಕೊಳ್ಳಿ

ಮುಂಬೈ ಇಂಡಿಯನ್ಸ್ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ಬೆಸಿಲ್ ಥಂಪಿ, ಮುರುಗನ್ ಅಶ್ವಿನ್, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಾಂಡೆ, ಎನ್ ತಿಲಕ್ ವರ್ಮಾ, ಸಂಜಯ್ ಯಾದವ್, ಜೋಫ್ರಾ ಆರ್ಚರ್, ಡೇನಿಯಲ್ ಸಾಮ್ಸ್, ತೈಮಲ್ ಮಿಲ್ಸ್ ಡೇವಿಡ್, ರಿಲೆ ಮೆರೆಡಿತ್, ಮೊಹಮ್ಮದ್ ಅರ್ಷದ್ ಖಾನ್, ಅನ್ಮೋಲ್ಪ್ರೀತ್ ಸಿಂಗ್, ರಮಣದೀಪ್ ಸಿಂಗ್, ರಾಹುಲ್ ಬುದ್ಧಿ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಲ್, ಫ್ಯಾಬಿಯನ್ ಅಲೆನ್.

ಮುಂಬೈ ಇಂಡಿಯನ್ಸ್ ಬೆಸ್ಟ್ ಪ್ಲೇಯಿಂಗ್ 11
1. ರೋಹಿತ್ ಶರ್ಮಾ (ನಾಯಕ), 2. ಅನ್ಮೋಲ್‌ಪ್ರೀತ್ ಸಿಂಗ್, 3. ಇಶಾನ್ ಕಿಶನ್ (ವಿಕೆಟ್ ಕೀಪರ್), 4. ಸೂರ್ಯಕುಮಾರ್ ಯಾದವ್, 5. ಕೀರಾನ್ ಪೊಲಾರ್ಡ್, 6. ಟಿಮ್ ಡೇವಿಡ್, 7. ತಿಲಕ್ ವರ್ಮಾ, 8. ಜಸ್ಪ್ರೀತ್ ಬುಮ್ರಾ, 9. ಟೈಮಲ್ ಮಿಲ್ಸ್ , 10. ಡೇನಿಯಲ್ ಸ್ಯಾಮ್ಸ್/ಫ್ಯಾಬಿಯನ್ ಅಲೆನ್, 11. ಎಂ. ಅಶ್ವಿನ್.
ಐಪಿಎಲ್ 2022: ಕಡೆಗೂ ವೀಸಾ ಪಡೆದುಕೊಂಡ ಮೊಯೀನ್ ಅಲಿ: ಟೂರ್ನಿಗೆ ಯಾವಾಗ ಲಭ್ಯ?

ಮುಂಬೈ ತಂಡದ ಬಲ
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಪ್ರಮುಖ ಕೀ ಪ್ಲೇಯರ್ ಆಗಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಆಟಗಾರರಾಗಿದ್ದಾರೆ.
ಅದ್ರಲ್ಲೂ ಪ್ರೈಮ್ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸುವ ಜೊತೆಗೆ ಆರೆಂಜ್ ಕ್ಯಾಪ್‌ಗಾಗಿ ಸ್ಪರ್ಧಿಸಲಿದ್ದಾರೆ. ಆದ್ರೆ ಬ್ಯಾಟಿಂಗ್ ಬಲದಲ್ಲಿ ಕ್ವಿಂಟನ್ ಡಿಕಾಕ್ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನವನ್ನ ಯಾರು ತುಂಬಲಿದ್ದಾರೆ ಎಂಬುದನ್ನ ಕಾದು ನೋಡಬೇಕು.
ಇನ್ನು ಬೌಲಿಂಗ್ ನೊಗವನ್ನ ಜಸ್ಪ್ರೀತ್ ಬುಮ್ರಾ ಹೊರಲಿದ್ದು, ಕಿರಾನ್ ಪೊಲಾರ್ಡ್, ಟಿಮ್ ಡೇವಿಡ್ ಕೂಡ ಫ್ರಂಟ್‌ಲೈನ್ ಬೌಲರ್ಸ್ ಆಗಿದ್ದಾರೆ. ಇಂಗ್ಲೆಂಡ್ ಬೌಲರ್ ಜೊಫ್ರಾ ಆರ್ಚರ್ ಅಲಭ್ಯತೆ ಎಷ್ಟು ಪಂದ್ಯಗಳಿಂದ ಸಿಗಲಿದೆ ಎಂಬುದರ ಮೇಲೆ ಮುಂಬೈ ಇಂಡಿಯನ್ಸ್ ಬೌಲಿಂಗ್ ಶಕ್ತಿ ಕೂಡ ಹೆಚ್ಚಲಿದೆ.
ಆತ ಹುಟ್ಟು ನಾಯಕ: ಯುವ ನಾಯಕನ ಬಗ್ಗೆ ಆಸಿಸ್ ಮಾಜಿ ಕ್ರಿಕೆಟಿಗನ ಪ್ರಶಂಸೆ

ಮುಂಬೈ ಇಂಡಿಯನ್ಸ್ ವೀಕ್ನೆಸ್
ಮುಂಬೈ ಇಂಡಿಯನ್ಸ್ ಪರ ಟಾಪ್ ಆರ್ಡರ್‌ನಲ್ಲಿ ಕ್ವಿಂಟನ್ ಡಿಕಾಕ್ ಮತ್ತು ಲೋವರ್ ಆರ್ಡರ್‌ನಲ್ಲಿ ಹಾರ್ದಿಕ್ ಪಾಂಡ್ಯ ತಂಡದ ಪ್ರಮುಖ ಶಕ್ತಿಯಾಗಿದ್ದರು. ಆದ್ರೆ ಈ ಇಬ್ಬರು ಆಟಗಾರರು ತಂಡದಲ್ಲಿ ಇಲ್ಲದೇ ಇರುವುದು ಪ್ರಮುಖ ಹಿನ್ನಡೆಯಾಗಿದೆ. ಇವರಿಬ್ಬರ ಬದಲು ಅನ್ಮೋತ್ ಪ್ರೀತ್ ಸಿಂಗ್, ಎನ್ ತಿಲಕ್ ವರ್ಮಾರಂತಹ ಆಟಗಾರರು ಮುಂಬೈ ತಂಡದ ಸೇರಿದ್ದಾರೆ. ಜೊತೆಗೆ ಸೂರ್ಯಕುಮಾರ್ ಯಾದವ್ ಇಂಜ್ಯುರಿ ಕೂಡ ತಂಡಕ್ಕೆ ಸಮಸ್ಯೆಯಾಗಿದೆ.
ಮುಂಬೈ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾರ ಮೇಲೆ ಹೆಚ್ಚಿನ ಡಿಪೆಂಡ್ ಆಗಿದ್ದು, ಕಳೆದ ಎರಡು ಸೀಸನ್‌ಗಳಲ್ಲಿ ಮಿಂಚಿದ್ದ ಟ್ರೆಂಟ್ ಬೌಲ್ಟ್ ಬದಲು ಜೊಫ್ರಾ ಆರ್ಚರ್‌ನ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಆದ್ರೆ ಆರ್ಚರ್ ಈ ಸೀಸನ್‌ನಲ್ಲಿ ಆಡ್ತಾರ ಇಲ್ವಾ ಅನ್ನೋದು ಖಚಿತಗೊಂಡಿಲ್ಲ. ಇದರ ಜೊತೆಗೆ ಮುಂಬೈಗೆ ಇರುವ ಏಕೈಕ ಭರವಸೆ ಮುರುಗನ್ ಅಶ್ವಿನ್. ಆದ್ರೆ ಕೃನಾಲ್ ಪಾಂಡ್ಯರಂತಹ ಸ್ಪಿನ್ ಆಲ್‌ರೌಂಡರ್ ತಂಡದಲ್ಲಿ ಇಲ್ಲದೇ ಇರುವುದು ಹಿನ್ನಡೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications