CSK vs MI: ಪಂದ್ಯದ ಟಾಸ್ ವರದಿ ಮತ್ತು ಆಡುವ 11ರ ಬಳಗ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿಯಲ್ಲಿನ 59ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು ಬ್ಯಾಟಿಂಗ್ ನಡೆಸಲಿದೆ.
ಮುಂಬೈ ಇಂಡಿಯನ್ಸ್ ತಂಡ ಈ ಪಂದ್ಯದಲ್ಲಿ ಎರಡು ಆಟಗಾರರ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಕಿರನ್ ಪೋಲಾರ್ಡ್ ಮತ್ತು ಎಂ. ಅಶ್ವಿನ್ ಬದಲಿಗೆ ಕ್ರಮವಾಗಿ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಹೃತಿಕ್ ಶೋಕಿನ್ ಆಡುತ್ತಿದ್ದಾರೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಂದು ಯಾವುದೇ ಬದಲಾವಣೆ ಮಾಡದೇ ಹಿಂದಿನ ಪಂದ್ಯದ ಗೆಲುವಿನ ತಂಡವೇ ಕಣಕ್ಕಿಳಿಯಲಿದೆ.
ಇನ್ನು ಈ ಪೈಕಿ ಮುಂಬೈ ಇಂಡಿಯನ್ಸ್ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಈಗಾಗಲೇ ಕಳೆದುಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಪ್ರವೇಶಿಸಬೇಕಾದರೆ ಪವಾಡವೇ ನಡೆಯಬೇಕಿದೆ. ಬೇರೆ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಆದರೂ ಅವಕಾಶಗಳನ್ನು ಕೊಂಚ ಮಟ್ಟದಲ್ಲಿ ಹೊಂದಿದೆ. ಹೀಗಾಗಿ ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೆಚ್ಚು ಮುಖ್ಯವಾಗಿದೆ.
ಇನ್ನು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ದಾಖಲಿಸಿದರೆ ತನ್ನ ಪ್ಲೇಆಫ್ ಪ್ರವೇಶಿಸುವ ಅವಕಾಶಗಳನ್ನು ಜೀವಂತವಾಗಿರಿಸಿಕೊಳ್ಳಲಿದ್ದು, ಒಂದುವೇಳೆ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಪ್ರವೇಶದ ಹಾದಿಯ ಕನಸು ನುಚ್ಚು ನೂರಾಗಲಿದೆ.

ಹೀಗಾಗಿ ಇಂದಿನ ಪಂದ್ಯ ಕುತೂಹಲವನ್ನು ಕೊಂಚ ಮಟ್ಟದಲ್ಲಿ ಕೆರಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಆಡುವ ಬಳಗಗಳು:
ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ:
1. ರುತುರಾಜ್ ಗಾಯಕ್ವಾಡ್ 2. ಡೆವೊನ್ ಕಾನ್ವೇ 3. ರಾಬಿನ್ ಉತ್ತಪ್ಪ 4. ಅಂಬಟಿ ರಾಯುಡು 5. ಶಿವಂ ದುಬೆ 6. ಮೊಯಿನ್ ಅಲಿ 7. ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್) 8. ಡ್ವೈನ್ ಬ್ರಾವೋ 9. ಮಹೇಶ್ ತೀಕ್ಷಣ 10. ಸಮರ್ಜಿತ್ ಸಿಂಗ್ 11. ಮುಖೇಶ್ ಚೌಧರಿ
ಮುಂಬೈ ಇಂಡಿಯನ್ಸ್ ಆಡುವ ಬಳಗ:
1. ರೋಹಿತ್ ಶರ್ಮಾ (ನಾಯಕ) 2. ಇಶಾನ್ ಕಿಶನ್ 3. ತಿಲಕ್ ವರ್ಮ 4. ರಮಣದೀಪ್ ಸಿಂಗ್ 5. ಟ್ರಿಸ್ಟಾನ್ ಸ್ಟಬ್ಸ್, 6. ಟಿಮ್ ಡೇವಿಡ್ 7. ಡೇನಿಯಲ್ ಸ್ಯಾಮ್ಸ್ 8. ಕುಮಾರ್ ಕಾರ್ತಿಕೇಯ 9. ಹೃತಿಕ್ ಶೋಕಿನ್ 10. ಜಸ್ಪ್ರೀತ್ ಬುಮ್ರಾ 11. ರಿಲೆ ಮೆರೆಡಿತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications