PBKS VS CSK: ಚೆನ್ನೈ ಸೂಪರ್ ಕಿಂಗ್ಸ್‌ಗೆ 188 ರನ್ ಟಾರ್ಗೆಟ್ ನೀಡಿದ ಪಂಜಾಬ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿದ್ದು, ಹಾಲಿ ಚಾಂಪಿಯನ್ ಸಿಎಸ್‌ಕೆಗೆ 188 ರನ್ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಪರ ಓಪನರ್ ಶಿಖರ್ ಧವನ್ ಅಮೋಘ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ಸ್ಪರ್ಧಾತ್ಮಕ ಮೊತ್ತವನ್ನ ಕಲೆಹಾಕಿದೆ. ನಾಯಕ ಮಯಾಂಕ್ ಅಗರ್ವಾಲ್ ಕೇವಲ 18 ರನ್‌ಗಳಿಗೆ ಮಹೀಶ್ ತೀಕ್ಷಣಗೆ ವಿಕೆಟ್ ಒಪ್ಪಿಸುವ ಮೂಲಕ ಎಡವಿದ್ರು. ಆದ್ರೆ ನಂತರ ನಡೆದಿದ್ದು ಧವನ್ ಹಾಗೂ ರಾಜಪಕ್ಷೆ ಬೊಂಬಾಟ್ ಜೊತೆಯಾಟ.
ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಧವನ್ ಹಾಗೂ ರಾಜಪಕ್ಷೆ ಸಿಎಸ್‌ಕೆ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದ್ರು. ಶಿಖರ್ ಧವನ್ ತನ್ನ 200ನೇ ಐಪಿಎಲ್ ಪಂದ್ಯದಲ್ಲಿ ಸ್ಫೋಟಕ ಆಟವಾಡುವುದುರ ಜೊತೆಗೆ ತಂಡದ ಸ್ಕೋರನ್ನ ಹೆಚ್ಚಿಸಿದ್ರು.
59 ಎಸೆತಗಳಲ್ಲಿ ಅಜೇಯ 88 ರನ್ ಕಲೆಹಾಕಿದ ಶಿಖರ್ ಧವನ್ ಇನ್ನಿಂಗ್ಸ್‌ನಲ್ಲಿ 9 ಅಮೋಘ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳಿದ್ದವು. ಇನ್ನು ಧವನ್‌ಗೆ ಉತ್ತಮ ಸಾಥ್ ನೀಡಿದ ರಾಜಪಕ್ಷ 32 ಎಸೆತಗಳಲ್ಲಿ 42 ರನ್ ಕಲೆಹಾಕಿ ಉತ್ತಮ ಸಾಥ್ ನೀಡಿದ್ರು. ಈತನ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು.
ಕೊನೆಯಲ್ಲಿ ಜಾನಿ ಬೈಸ್ಟ್ರೋವ್ 3 ಎಸೆತಗಳಲ್ಲಿ 6 ರನ್ ಕಲೆಹಾಕಿ ರನೌಟ್ ಆದ್ರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ 187 ರನ್ ಕಲೆಹಾಕಿದೆ.
ಸಿಎಸ್‌ಕೆ ಪರ ದುಬಾರಿಯಾದ್ರೂ ಸಹ ಡ್ವೇನ್ ಬ್ರಾವೋ 2 ವಿಕೆಟ್ ಪಡೆದ್ರೆ, ಮಹೀಶ್ ತೀಕ್ಷಣ 1 ವಿಕೆಟ್ ಪಡೆಯುವಲ್ಲಿ ಸಫಲರಾದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications