IPL 2022 Points Table ಗುಜರಾತ್ ಹ್ಯಾಟ್ರಿಕ್ ಜಯದ ಬಳಿಕ ಅಂಕಪಟ್ಟಿಯಲ್ಲಿ ಯಾರು ಟಾಪ್? ಆರೆಂಜ್ ಕ್ಯಾಪ್ ರೇಸ್‌ಗೆ ಇಬ್ಬರ ಎಂಟ್ರಿ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಪಂದ್ಯದಲ್ಲಿ ನೂತನ ತಂಡ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಿದ್ದು, ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇನ್ನು ಗುಜರಾತ್ ಟೈಟನ್ಸ್ ಈ ಗೆಲುವಿನ ಮೂಲಕ ಸತತ ಗೆಲುವು ಕಂಡು ಹ್ಯಾಟ್ರಿಕ್ ಜಯವನ್ನು ಸಾಧಿಸಿದೆ.
ಮುಂಬೈನ ಬ್ರಬೌರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡು ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಪರ ಮಯಾಂಕ್ ಅಗರ್ವಾಲ್ ಮತ್ತು ಜಾನಿ ಬೈರ್‌ಸ್ಟೋ ಅಲ್ಪ ಮೊತ್ತ ಕಲೆಹಾಕಿ ವಿಕೆಟ್ ಒಪ್ಪಿಸಿದರೂ ಸಹ ಲಿಯಾಮ್ ಲಿವಿಂಗ್‌ಸ್ಟನ್ ಅಬ್ಬರದ ಬ್ಯಾಟಿಂಗ್ ತಂಡದ ರನ್ ವೇಗವನ್ನು ಹೆಚ್ಚಿಸಿತು. 27 ಎಸೆತಗಳನ್ನು ಎದುರಿಸಿದ ಲಿಯಾಮ್ ಲಿವಿಂಗ್‌ಸ್ಟನ್ 64 ರನ್ ಚಚ್ಚಿ ಅಬ್ಬರಿಸಿದರು. ಇನ್ನುಳಿದಂತೆ ಶಿಖರ್ ಧವನ್ 35 ರನ್ ಕಲೆಹಾಕಿ ಜವಾಬ್ದಾರಿಯತ ಆಟವನ್ನಾಡಿದರು. ಹೀಗೆ ಲಿಯಾಮ್ ಲಿವಿಂಗ್‌ಸ್ಟನ್ ಅಬ್ಬರಿಸಿದ ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ತಂಡ 200ಕ್ಕೂ ಹೆಚ್ಚು ರನ್ ಗಳಿಸಲಿದೆ ಎಂದು ಊಹಿಸಲಾಗಿತ್ತು. ಆದರೆ, ಗುಜರಾತ್ ಟೈಟನ್ಸ್ ಬೌಲರ್‌ಗಳು ವಿಕೆಟ್ ಉರುಳಿಸಿದ ಪರಿಣಾಮ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲಷ್ಟೇ ಶಕ್ತವಾಯಿತು ಹಾಗೂ ಗುಜರಾತ್ ಟೈಟನ್ಸ್ ತಂಡಕ್ಕೆ 190 ರನ್‌ಗಳ ಗುರಿಯನ್ನು ನೀಡಿತು.
ಇತ್ತ ಪಂಜಾಬ್ ಕಿಂಗ್ಸ್ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಪರ ಆರಂಭದಲ್ಲಿ ಶುಬ್‌ಮನ್ ಗಿಲ್ 59 ಎಸೆತಗಳಿಗೆ 96 ರನ್ ಕಲೆಹಾಕಿ ಅಬ್ಬರಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ಇನ್ನೂ ಕೆಲವೊಂದಷ್ಟು ಎಸೆತ ಬಾಕಿ ಇರುವಾಗಲೇ ಜಯ ಸಾಧಿಸಲಿದೆ ಎಂದು ಊಹಿಸಲಾಗಿತ್ತು.
ಆದರೆ, ನಂತರ ಗುಜರಾತ್ ಟೈಟನ್ಸ್ ರನ್ ವೇಗ ಕಡಿಮೆಯಾಗಿ ಅಂತಿಮ ಓವರ್‌ಗೆ ಪಂದ್ಯ ತಲುಪಿತ್ತು. ಅಂತಿಮ 6 ಎಸೆತಗಳಲ್ಲಿ ಗೆಲ್ಲಲು 19 ರನ್ ಬಾರಿಸಬೇಕಾದ ಅಗತ್ಯವಿತ್ತು ಹಾಗೂ ನಾಯಕ ಒಡಿಯನ್ ಸ್ಮಿತ್ ಕೈಗೆ ಚೆಂಡನ್ನು ನೀಡಿದ್ದರು. ಇದೇ ಓವರ್‌ನಲ್ಲಿ ಭರವಸೆಯ ಆಟಗಾರ ಹಾರ್ದಿಕ್ ಪಾಂಡ್ಯ ರನ್ಔಟ್ ಆದ ಕಾರಣ ಪಂದ್ಯ ಪಂಜಾಬ್ ಕಿಂಗ್ಸ್ ಸೇರಿತು ಎಂದೇ ಎಲ್ಲರೂ ನಂಬಿದ್ದರು. ಆದರೆ, ಅಂತಿಮ ಓವರ್‌ನ ಮೂರನೇ ಎಸೆತದಲ್ಲಿ ಮಿಲ್ಲರ್ ಬೌಂಡರಿ ಮತ್ತು ನಾಲ್ಕನೇ ಎಸೆತದಲ್ಲಿ ಒಂದು ರನ್ ಕಲೆಹಾಕಿ ನೂತನ ಆಟಗಾರ ರಾಹುಲ್ ತೆವಾಟಿಯಾಗೆ ಸ್ಟ್ರೈಕ್ ನೀಡಿದರು. ಈ ಸಂದರ್ಭದಲ್ಲಿ ಗೆಲುವಿಗೆ 2 ಎಸೆತಗಳಲ್ಲಿ 12 ರನ್ ಬಾರಿಸಬೇಕಾದ ಅಗತ್ಯವಿತ್ತು. ಹಾಗೂ ಯಾರೂ ಊಹಿಸಿರದ ರೀತಿ ಅಬ್ಬರಿಸಿದ ರಾಹುಲ್ ತೆವಾಟಿಯಾ ಒಡಿಯನ್ ಸ್ಮಿತ್ ಎಸೆದ ಕೊನೆಯ ಎರಡೂ ಎಸೆತಗಳಿಗೂ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದಿತ್ತರು. ಹೀಗೆ ಲಾಸ್ಟ್ ಬಾಲ್ ಥ್ರಿಲ್ಲರ್ ಎನಿಸಿಕೊಂಡ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಈ ಪಂದ್ಯ ಮುಕ್ತಾಯವಾದ ನಂತರ ಅಂಕಪಟ್ಟಿಯಲ್ಲಿ ಟಾಪ್ 4 ಯಾರು, ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ..

ಅಂಕಪಟ್ಟಿ ಹೀಗಿದೆ
ಈ ಪಂದ್ಯಕ್ಕೂ ಮುನ್ನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಗುಜರಾತ್ ಟೈಟನ್ಸ್ ಈ ಗೆಲುವಿನ ಮೂಲಕ ಆಡಿರುವ ಎಲ್ಲಾ 3 ಪಂದ್ಯಗಳಲ್ಲಿಯೂ ಜಯ ಸಾಧಿಸಿ ದ್ವಿತೀಯ ಸ್ಥಾನಕ್ಕೆ ಏರಿಕೆ ಕಂಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಅಗ್ರಸ್ಥಾನದಲ್ಲಿಯೇ ಉಳಿದುಕೊಂಡಿದೆ. ಇನ್ನು ದ್ವಿತೀಯ ಸ್ಥಾನದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತೃತೀಯ ಸ್ಥಾನಕ್ಕೆ ಕುಸಿತ ಕಂಡಿದ್ದು, ಮೂರನೇ ಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ನಾಲ್ಕನೇ ಸ್ತಾನಕ್ಕೆ ಇಳಿದಿದೆ.

ಆರೆಂಜ್ ಕ್ಯಾಪ್ ರೇಸ್‌ಗೆ ಇಬ್ಬರ ಎಂಟ್ರಿ
ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಈ ಪಂದ್ಯ ಮುಕ್ತಾಯವಾದ ನಂತರ ಈ ಪಂದ್ಯದಲ್ಲಿ ಅಬ್ಬರಿಸಿದ ಇಬ್ಬರು ಆಟಗಾರರಾದ ಗುಜರಾತ್ ಟೈಟನ್ಸ್‌ನ ಶುಬ್‌ಮನ್ ಗಿಲ್ ಮತ್ತು ಪಂಜಾಬ್ ಕಿಂಗ್ಸ್‌ನ ಲಿಯಾಮ್ ಲಿವಿಂಗ್‌ಸ್ಟನ್ ಆರೆಂಜ್ ಕ್ಯಾಪ್ ಪಟ್ಟಿಯ ಟಾಪ್ 3ಗೆ ಲಗ್ಗೆ ಇಟ್ಟಿದ್ದಾರೆ. 3 ಪಂದ್ಯಗಳನ್ನಾಡಿ 205 ರನ್ ಗಳಿಸಿರುವ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. 3 ಪಂದ್ಯಗಳಲ್ಲಿ 173 ರನ್ ಗಳಿಸಿರುವ ಶುಬ್‌ಮನ್ ಗಿಲ್ ದ್ವಿತೀಯ ಸ್ಥಾನಕ್ಕೇರಿದ್ದರೆ, 3 ಪಂದ್ಯಗಳಲ್ಲಿ 162 ರನ್ ಕಲೆಹಾಕಿರುವ ಲಿಯಾಮ್ ಲಿವಿಂಗ್‌ಸ್ಟನ್ ತೃತೀಯ ಸ್ಥಾನಕ್ಕೇರಿದ್ದಾರೆ.


ಪರ್ಪಲ್ ಕ್ಯಾಪ್
ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆದ ಪಂಜಾಬ್ ಕಿಂಗ್ಸ್‌ನ ಬೌಲರ್ ರಾಹುಲ್ ಚಹರ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ತೃತೀಯ ಸ್ಥಾನಕ್ಕೇರಿದ್ದಾರೆ. ರಾಹುಲ್ ಚಹರ್ 4 ಪಂದ್ಯಗಳನ್ನಾಡಿ 7 ವಿಕೆಟ್ ಪಡೆದಿದ್ದಾರೆ. ಇನ್ನು 3 ಪಂದ್ಯಗಳನ್ನಾಡಿ 7 ವಿಕೆಟ್ ಪಡೆದಿರುವ ಯುಜುವೇಂದ್ರ ಚಹಲ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, 4 ಪಂದ್ಯಗಳನ್ನಾಡಿ 9 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಅಗ್ರಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications