IPL 2022 Points Table : ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಹಾರ್ದಿಕ್!

ಐಪಿಎಲ್ 15ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಆರ್‌ಆರ್ ವಿರುದ್ಧ ಜಿಟಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ಪಡೆ ಮತ್ತೆ ಗೆಲುವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಕೆಳಕ್ಕಿಳಿದಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 37 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಆರಂಭಿಕ ಆಟಗಾರರು ವಿಫಲವಾದ ಬಳಿಕ ಅಭಿನಮ್ ಮನೋಹರ್, ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ಮಿಲ್ಲರ್ ಅವರ ಅಮೋಘ ಆಟದ ಕಾರಣದಿಂದಾಗಿ ದೊಡ್ಡ ಮೊತ್ತವನ್ನು ಗಳಿಸಲು ಶಕ್ತವಾಯಿತು. ಹಾರ್ದಿಕ್ ಪಾಂಡ್ಯ 52 ಎಸೆತಗಹಾರ್ಳಲ್ಲಿ 87 ರನ್ ಬಾರಿಸಿದ್ದರು. ಮಿಲ್ಲರ್ 14 ಎಸೆತಗಳಲ್ಲಿ 31 ರನ್ ಸಿಡಿಸುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 192/4 ರನ್‌ಗಳಿಸಲು ಜಿಟಿ ತಂಡಕ್ಕೆ ಸಾಧ್ಯವಾಯಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್‌ಆರ್ ಪಡೆ ಕೇವಲ 155/9 ರನ್‌ಗಳಿಸಿ ಸೋಲಿಗೆ ಶರಣಾಗಿದೆ.
ಹಾಗಾದರೆ ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಾದ ಬದಲಾವನೆಗಳು ಯಾವುದು? ಆರೆಂಜ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಯಾರಿದ್ದಾರೆ? ಮುಂದೆ ಓದಿ..

ಕುಸಿದ ರಾಜಸ್ಥಾನ್ ರಾಯಲ್ಸ್
ಈ ಪಂದ್ಯಕ್ಕೂ ಮುನ್ನ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಐದನೇ ಸ್ಥಾನದಲ್ಲಿದ್ದ ಗುಜರಾತ್ ಟೈಟನ್ಸ್ ತಂಡ ಈ ಭರ್ಜರಿ ಗೆಲುವಿನೊಂದಿಗೆ ನೇರವಾಗಿ ಅಗ್ರಸ್ಥಾನಕ್ಕೇರಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡನೇ ಸ್ಥಾನದಲ್ಲಿದ್ದಾರೆ ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡ 6ನೇ ಸ್ಥಾನದಲ್ಲಿ ಮುಂದುವರಿದಿದೆ.

ಆರೆಂಜ್ ಕ್ಯಾಪ್
ಅತಿ ಹೆಚ್ಚು ರನ್‌ಗಳಿಸಿದ ಆಟಗಾರರು ಪಡೆಯುವ ಆರೆಂಜ್ ಕ್ಯಾಪ್ ಜೋಸ್ ಬಟ್ಲರ್ ಅವರಲ್ಲಿಯೇ ಮುಂದುವರಿದಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿಯೂ ಅರ್ಧ ಶತಕ ಗಳಿಸಿ ಮಿಂಚಿರುವ ಬಟ್ಲರ್ 272 ರನ್‌ಗಳಿಸಿ ಈ ಪಟ್ಟಿಯಲ್ಲಿ ಮುಂದಿದ್ದಾರೆ. ಬಟ್ಲರ್ ನಂತರ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಇದ್ದು 228 ರನ್‌ಗಳಿಸಿದ್ದಾರೆ. ಬಳಿಕ ಸಿಎಸ್‌ಕೆ ತಂಡದ ಶಿವಂ ದುಬೆ 207 ರನ್‌ಗಳಿಸಿದರೆ ಶುಬ್ಮನ್ ಗಿಲ್ 200 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಶಿಮ್ರಾಮ್ ಹೇಟ್ಮೇರ್ 5ನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್
ಇನ್ನು ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಯುಜುವೇಂದ್ರ ಚಾಹಲ್ ಮುಂದಿದ್ದು ಟೂರ್ನಿಯಲ್ಲಿ ಈವರೆಗೆ ಚಾಹಲ್ 12 ವಿಕೆಟ್ ಸಂಪಾದಿಸಿದ್ದಾರೆ. 2 ಹಾಗೂ 3ನೇ ಸ್ಥಾನದಲ್ಲಿ 10 ವಿಕೆಟ್ ಪಡೆದಿರುವ ಕುಲ್‌ದೀಪ್ ಯಾದವ್ ಹಾಗೂ ಉಮೇಶ್ ಯಾದವ್ ಇದ್ದಾರೆ. 10 ವಿಕೆಟ್ ಪಡೆದಿರುವ ವನಿಂದು ಹಸರಂಗ 4ನೇ ಸ್ಥಾನದಲ್ಲಿದ್ದರೆ 8 ವಿಕೆಟ್ ಸಂಪಾದಿಸಿರುವ ಲೂಕಿ ಫರ್ಗ್ಯೂಸನ್ 5ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications