IPL 2022: ಲಕ್ನೋ ಸೂಪರ್ ಜೈಂಟ್ಸ್ ಜಯಭೇರಿ ಹಾಗೂ ಪಂಜಾಬ್ ಸೋಲಿನ ಬಳಿಕ ಪಾಯಿಂಟ್ಸ್ ಎಷ್ಟಿದೆ?

ಐಪಿಎಲ್ 2022ರ ಸೀಸನ್‌ನ 42ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಜಯಭೇರಿ ಬಾರಿಸಿದೆ. ಲಕ್ನೋ ನೀಡಿದ್ದ 154 ರನ್‌ಗಳ ಗುರಿ ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ ಎದುರಾಳಿ ಬೌಲಿಂಗ್ ದಾಳಿಗೆ ನೆಲಕಚ್ಚಿದ್ದು, 133 ರನ್‌ಗಳಿಸಲಷ್ಟೇ ಶಕ್ತವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು. ಕ್ವಿಂಟನ್ ಡಿಕಾಕ್ 46, ದೀಪಕ್ ಹೂಡಾ 34 ರನ್‌ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಹೀಗಾಗಿ ಕಡಿಮೆ ಮೊತ್ತಕ್ಕೆ ಲಕ್ನೋ ತೃಪ್ತಿಪಟ್ಟಿತು. ಪಂಜಾಬ್ ಪರ ರಬಾಡ 4 ವಿಕೆಟ್ ಪಡೆದು ಮಿಂಚಿದರು.
154 ರನ್ ಗುರಿ ಬೆನ್ನತ್ತಿದ ಪಂಜಾಬ್ ಸುಲಭ ಗುರಿ ತಲುಪಲು ಸಾಧ್ಯವಾಗದೇ ಪತನಗೊಂಡಿದೆ. ನಾಯಕ ಮಯಾಂಕ್ 25, ಜಾನಿ ಬೈಸ್ಟ್ರೋವ್ 32 ರನ್‌ಗಳಿಸಿದ್ದೇ ತಂಡದ ಪರ ಗರಿಷ್ಠ ರನ್‌ಗಳಾಗಿವೆ. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133ರನ್‌ಗಳಿಸುವಷ್ಟರಲ್ಲಿ ಸುಸ್ತಾಗಿದೆ. ಲಕ್ನೋ ಪರ ಮೊಹ್ಸಿನ್ ಖಾನ್ 3, ದುಷ್ಮಾಂತ್ ಚಮೀರ 2, ರವಿ ಬಿಷ್ನೋಯಿ 1, ಕೃನಾಲ್ ಪಾಂಡ್ಯ ಎರಡು ವಿಕೆಟ್ ಪಡೆದಿದ್ದಾರೆ.
ಈ ಗೆಲುವಿನ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ 12 ಪಾಯಿಂಟ್ಸ್‌ಗಳೊಂದಿಗೆ ಜಿಗಿತ ಕಂಡಿದೆ. ಪಂಜಾಬ್ 9 ಪಂದ್ಯಗಳಲ್ಲಿ ಕೇವಲ 4 ಗೆಲುವಿನೊಂದಿಗೆ ಏಳನೇ ಸ್ಥಾನದಲ್ಲಿ ಉಳಿದಿದೆ.
ಹಾಗಾದರೆ ಈ ಪಂದ್ಯದ ಬಳಿಕ ಎಲ್‌ಎಸ್‌ಜಿ ಮತ್ತು ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ. ಪರ್ಪಲ್ ಕ್ಯಾಪ್ ಪಟ್ಟಿ ಹಾಗೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆಗಿರುವ ಬದಲಾವಣೆಗಳು ಏನು? ಮುಂದೆ ಓದಿ..

ಪಾಯಿಂಟ್ಸ್ ಟೇಬಲ್
ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 20 ರನ್‌ಗಳಿಂದ ಗೆಲ್ಲುವ ಮೂಲಕ ಮೂರನೇ ಸ್ಥಾನಕ್ಕೆ ಏರಿಕೆಗೊಂಡಿದೆ. ಕೆ.ಎಲ್ ರಾಹುಲ್ ನಾಯಕತ್ವದಲ್ಲಿ 9 ಪಂದ್ಯಗಳಲ್ಲಿ 6 ಗೆಲುವು ಮತ್ತು 3 ಸೋಲನ್ನ ಕಂಡಿದ್ದು 12 ಪಾಯಿಂಟ್ಸ್ ಕಲೆಹಾಕಿದೆ. ಜೊತೆಗೆ ಉತ್ತಮ ರನ್‌ರೇಟ್ ಸಹ (+0.408) ಹೊಂದಿದೆ.
ಮೊದಲ ಎರಡು ಸ್ಥಾನದಲ್ಲಿ ಗುಜರಾತ್ ಟೈಟನ್ಸ್ (14) ನಂತರದಲ್ಲಿ ರಾಜಸ್ತಾನ್ ನಂತರದಲ್ಲಿ 12 ಪಾಯಿಂಟ್ಸ್ ಮೂಲಕ ಅಗ್ರಸ್ಥಾನ ಉಳಿಸಿಕೊಂಡಿವೆ.
PBKS vs LSG: ಪಂದ್ಯದ ಟಾಸ್ ವರದಿ ಮತ್ತು ಪ್ಲೇಯಿಂಗ್ ಇಲೆವೆನ್ ಮಾಹಿತಿ ಇಲ್ಲಿದೆ

ಆರೆಂಜ್ ಕ್ಯಾಪ್
ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 8 ಪಂದ್ಯಗಳಲ್ಲಿ ಬಟ್ಲರ್ 499 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಎರಡು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 374 ರನ್‌ಗಳಿಸಿದ್ದಾರೆ. ಶಿಖರ್ ಧವನ್ 305 ರನ್‌ಗಳ ಮೂಲಕ ಮೂರನೇ ಸ್ಥಾನ, ಹಾರ್ದಿಕ್ ಪಾಂಡ್ಯ 305 ರನ್‌ಗಳೊಂದಿಗೆ ನಾಲ್ಕನೇ ಸ್ಥಾನ ಹಾಗೂ 290 ರನ್‌ಗಳಿಸಿರುವ ಕೆಕೆಆರ್‌ನ ಶ್ರೇಯಸ್ ಅಯ್ಯರ್ 5ನೇ ಸ್ಥಾನ ಪಡೆದಿದ್ದಾರೆ.

ಪರ್ಪಲ್ ಕ್ಯಾಪ್
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಾಹಲ್ ಒಟ್ಟು 18 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ ಕೆಕೆಆರ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಎರಡನೇ ಸ್ಥಾನಕ್ಕೆ ಜಿಗಿದಿದ್ದು, 17 ವಿಕೆಟ್‌ಗಳೊಂದಿಗೆ, ಚಹಾಲ್‌ಗಿಂತ ಒಂದು ವಿಕೆಟ್ ಹಿಂದಿದ್ದಾರೆ. ಇನ್ನು ಗುಜರಾತ್ ವಿರುದ್ಧ ಐದು ವಿಕೆಟ್ ಸಂಪಾದಿಸಿದ ಉಮ್ರಾನ್ ಮಲ್ಲಿಕ್ ಮೂರನೇ ಸ್ಥಾನದಲ್ಲಿದ್ದು 15 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಸರಾಸರಿಯಲ್ಲಿ ಸ್ವಲ್ಪ ಹಿಂದಿರುವ ಟಿ. ನಟರಾಜನ್ 15 ವಿಕೆಟ್ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 14 ವಿಕೆಟ್‌ಗಳೊಂದಿಗೆ ಉಮೇಶ್ ಯಾದವ್ ಐದನೇ ಸ್ಥಾನ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications