IPL 2022: SRH ವಿರುದ್ಧ ಗೆದ್ದು ಐದನೇ ಸ್ಥಾನಕ್ಕೆ ಜಿಗಿದ ಡೆಲ್ಲಿ, ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್

ಐಪಿಎಲ್ 2022ರ ಸೀಸನ್‌ನ 50ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಜಿಗಿತ ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 208 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಎಸ್‌ಆರ್‌ಎಚ್ 8 ವಿಕೆಟ್ ಕಳೆದುಕೊಂಡು 186 ರನ್‌ಗಳಿಸುವಷ್ಟರಲ್ಲಿ ಶಕ್ತವಾಯಿತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ 21ರನ್‌ಗಳ ಗೆಲುವಿನೊಂದಿಗೆ ನಗೆ ಬೀರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯದಿದ್ದರೂ, ಡೇವಿಡ್ ವಾರ್ನರ್ ಆರ್ಭಟ, ರೋವ್ಮನ್ ಪೊವೆಲ್ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿ 200ರ ಗಡಿ ದಾಟಿತು. ಡೇವಿಡ್ ವಾರ್ನರ್ ಅಜೇಯ 58 ಎಸೆತಗಳಲ್ಲಿ ಅಜೇಯ 92 ರನ್ ಕಲೆಹಾಕಿದ್ರೆ, ಪೊವೆಲ್ ಅಜೇಯ 35 ಎಸೆತಗಳಲ್ಲಿ 67 ರನ್ ಸಿಡಿಸಿದ್ರು. ಈ ಮೂಲಕ ಡೆಲ್ಲಿ ಮೂರು ವಿಕೆಟ್ ನಷ್ಟಕ್ಕೆ 207ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಎಸ್‌ಆರ್ಎಚ್ ಉತ್ತಮ ಆರಂಭ ಪಡೆಯಲು ವಿಫಲಗೊಂಡಿತು. ಏಡನ್ ಮಕ್ರಾಮ್ 42, ನಿಕೋಲಸ್ ಪೂರನ್ 62 ರನ್‌ಗಳಿಸಿದ್ದು ಬಿಟ್ಟರೆ, ಬೇರೆ ಯಾವೊಬ್ಬ ಬ್ಯಾಟ್ಸ್‌ಮನ್ ಅಷ್ಟು ಮಿಂಚಲಿಲ್ಲ. ಇದ್ರಿಂದಾಗಿ 21ರನ್‌ಗಳಿಂದ ಪಂದ್ಯ ಸೋತಿದೆ.
ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ನತ್ತ ಹೆಜ್ಜೆಯಿಟ್ಟಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಏರಿಕೆಗೊಂಡಿದೆ. ಹಾಗಾದರೆ ಈ ಪಂದ್ಯದ ಬಳಿಕ ಡೆಲ್ಲಿ ಮತ್ತು ಹೈದ್ರಾಬಾದ್ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ. ಪರ್ಪಲ್ ಕ್ಯಾಪ್ ಪಟ್ಟಿ ಹಾಗೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆಗಿರುವ ಬದಲಾವಣೆಗಳು ಏನು? ಮುಂದೆ ಓದಿ..

ಪಾಯಿಂಟ್ಸ್ ಟೇಬಲ್
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 21ರನ್‌ಗಳಿಂದ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ. ರಿಷಭ್ ಪಂತ್ ನಾಯಕತ್ವದಲ್ಲಿ ಡೆಲ್ಲಿ 10 ಪಂದ್ಯಗಳಲ್ಲಿ ತಲಾ ಐದು ಗೆಲುವು ಮತ್ತು ಸೋಲುಗಳನ್ನ ಕಾಣುವ ಮೂಲಕ 10 ಪಾಯಿಂಟ್ಸ್ ದಾಖಲಿಸಿದೆ. ನೆಟ್ ರನ್‌ರೇಟ್‌ನಲ್ಲಿ ಮುಂದಿರುವ ಕಾರಣ ಎಸ್‌ಆರ್‌ಎಚ್‌ಗಿಂತ ಮುಂದಿದೆ.
ಮೊದಲ ಮೂರು ಸ್ಥಾನದಲ್ಲಿ ಗುಜರಾತ್ ಟೈಟನ್ಸ್ (16) ನಂತರದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ 14, ಮೂರನೇ ಸ್ಥಾನದಲ್ಲಿ ರಾಜಸ್ತಾನ್ ರಾಯಲ್ಸ್ 12 ಪಾಯಿಂಟ್ಸ್‌ನೊಂದಿಗಿದ್ದು, ಆರ್‌ಸಿಬಿ ನಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ರನ್‌ರೇಟ್ ಮೂಲಕ ಐದನೇ ಸ್ಥಾನ ಅಲಂಕರಿಸಿದೆ.

ಆರೆಂಜ್ ಕ್ಯಾಪ್
ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 10 ಪಂದ್ಯಗಳಲ್ಲಿ ಬಟ್ಲರ್ 588 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಮೂರು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 451 ರನ್‌ಗಳಿಸಿದ್ದಾರೆ. ಡೇವಿಡ್ ವಾರ್ನರ್ 379ರನ್‌ಗಳ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ. ನಂತರದಲ್ಲಿ ಶಿಖರ್ ಧವನ್ 369 ರನ್ , ಶ್ರೇಯಸ್ ಅಯ್ಯರ್ 324 ರನ್‌ಗಳ ಮೂಲಕ 4ನೇ ಸ್ಥಾನ ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಾಹಲ್ ಒಟ್ಟು 19 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ ಕೆಕೆಆರ್ ಸ್ಪಿನ್ನರ್ ಕುಲ್‌ದೀಪ್ ಯಾದವ್, ಎರಡನೇ ಸ್ಥಾನದಲ್ಲಿದ್ದು 18 ವಿಕೆಟ್‌ಗಳೊಂದಿಗೆ, ಚಹಾಲ್‌ಗಿಂತ ಒಂದು ವಿಕೆಟ್ ಹಿಂದಿದ್ದಾರೆ. 17 ವಿಕೆಟ್‌ಗಳ ಮೂಲಕ ಪಂಜಾಬ್ ಕಿಂಗ್ಸ್‌ನ ಕಗಿಸೊ ರಬಾಡ ಮತ್ತು ಎಸ್‌ಆರ್‌ಎಚ್‌ನ ಟಿ. ನಟರಾಜನ್ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. 15 ವಿಕೆಟ್‌ಗಳೊಂದಿಗೆ ಉಮೇಶ್ ಯಾದವ್ ಐದನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications