IPL 2022: ಆಟಗಾರರ ಹರಾಜಿಗೂ ಮುನ್ನ ಕೆಕೆಆರ್ ಸಂಭಾವ್ಯ ಸ್ಕ್ವಾಡ್ ತಿಳಿದುಕೊಳ್ಳಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2022ರ ಮೆಗಾ ಹರಾಜು ಸಮೀಪಿಸುತ್ತಿದ್ದಂತೆ, ಫ್ರಾಂಚೈಸಿಗಳು ತಮ್ಮ ನೆಚ್ಚಿನ ಆಟಗಾರರ ಮೇಲೆ ಬಿಡ್ ಮಾಡಲು ತಯಾರಿ ನಡೆಸುತ್ತಿವೆ. ರೀಟೈನ್ ಆಟಗಾರರನ್ನ ಹೊರತುಪಡಿಸಿ ಮೂರು ವಿಭಾಗದಲ್ಲಿ ತಂಡವನ್ನ ಬಲಿಷ್ಠಗೊಳಿಸಲು ತಂತ್ರಗಳನ್ನ ಹೆಣೆದು, ಸಂಪೂರ್ಣ ಬ್ಯಾಲೆನ್ಸ್ ತಂಡವನ್ನ ಕಣಕ್ಕಿಳಿಸಲು ಯೋಜನೆ ರೂಪಿಸುತ್ತವೆ.
ಹರಾಜಿನ ಸಮಯ ಹತ್ತಿರವಾದಂತೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂತ್ರಗಳನ್ನು ವೇಗಗೊಳಿಸುತ್ತಿವೆ. ಯಾವ ಆಟಗಾರನ ಮೇಲೆ ಎಷ್ಟು ಮೊತ್ತದವರೆಗೂ ಬಿಡ್ ಮಾಡಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳುತ್ತಿವೆ. ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಕೂಡ ಐಪಿಎಲ್ 15ನೇ ಸೀಸನ್‌ಗೆ ತಯಾರಿ ನಡೆಸಿದೆ. ಬಲಿಷ್ಠ ತಂಡವನ್ನ ಕಟ್ಟುವಲ್ಲಿ ಕೆಕೆಆರ್ ಪಣತೊಟ್ಟಿದ್ದು, ಯಾವೆಲ್ಲ ಆಟಗಾರರ ಮೇಲೆ ಹೆಚ್ಚು ಬಿಡ್ ಮಾಡಿ ಪಡೆಯಬಹುದು ಎಂಬುದನ್ನ ಈ ಕೆಳಗೆ ತಿಳಿಯಿರಿ.

ನಾಲ್ವರು ಆಟಗಾರರನ್ನ ರೀಟೈನ್ ಮಾಡಿಕೊಂಡಿರುವ ಕೆಕೆಆರ್
ವೆಸ್ಟ್ ಇಂಡೀಸ್‌ನ ಸ್ಫೋಟಕ ಆಲ್‌ರೌಂಡರ್ ಆ್ಯಂಡ್ರೆ ರಸ್ಸೆಲ್ (12 ಕೋಟಿ), ಕರ್ನಾಟಕ ಮೂಲದ ತಮಿಳುನಾಡು ಸ್ಪಿನ್ನರ್ ವರುಣ್ ಚಕ್ರವರ್ತಿ (8 ಕೋಟಿ ರೂ.), ತಮಿಳುನಾಡು ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ (8 ಕೋಟಿ) ಮತ್ತು ವಿಂಡೀಸ್ ಮಿಸ್ಟರಿ ಸ್ಪಿನ್ನರ್ ಸುನೀಲ್ ನರೈನ್ (6 ಕೋಟಿ) ರೂಪಾಯಿಗೆ ಕೆಕೆಆರ್ ಪರ ರೀಟೈನ್ ಆಗಿದ್ದಾರೆ.
ಕೋಲ್ಕತ್ತಾ ಕೇವಲ 34 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಇನ್ನೂ 56 ಕೋಟಿ ರೂಪಾಯಿ ಪರ್ಸ್ ಬ್ಯಾಲೆನ್ಸ್ ಹೊಂದಿದೆ. ಹೀಗಾಗಿ ಉತ್ತಮ ಆಟಗಾರರ ಮೇಲೆ ಹೆಚ್ಚಿನ ಹಣ ಬಿಡ್ ಮಾಡಬಹುದು. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಡೇವಿಡ್ ವಾರ್ನರ್ ಮತ್ತು ಕ್ವಿಂಟನ್ ಡಿಕಾಕ್ ಅವರಂತಹ ಆಟಗಾರರ ಮೇಲೆ ಗುರಿಯಿಟ್ಟಿದೆ.

ಶಿಖರ್ ಧವನ್, ಡೇವಿಡ್ ವಾರ್ನರ್ ಮೇಲೆ ಕಣ್ಣಿಟ್ಟಿದೆ
ಕೆಕೆಆರ್ ಕಳೆದ ಋತುವಿನ ದ್ವಿತೀಯಾರ್ಧದಲ್ಲಿ ಓಪನರ್ ಆಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಜೊತೆಗೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್, ಆಸ್ಟ್ರೇಲಿಯಾದ ಕ್ರಿಸ್ ಲಿನ್, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಅವರನ್ನು ಆರಂಭಿಕ ಸ್ಥಾನಕ್ಕಾಗಿ ಎದುರು ನೋಡುತ್ತಿದೆ. ಇವರಲ್ಲಿ ಯಾರನ್ನಾದ್ರೂ ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆ ಹೊಂದಿದೆ.
ಆದಾಗ್ಯೂ ವೆಂಕಟೇಶ್ ಅಯ್ಯರ್ ಅವರಿಗೆ ಫಿನಿಶರ್ ಜವಾಬ್ದಾರಿ ನೀಡಿದ್ರೆ, ಇಬ್ಬರು ಓಪನರ್‌ಗಳನ್ನ ಆಯ್ಕೆ ಮಾಡಬೇಕಾಗುತ್ತದೆ. ಕೆಕೆಆರ್ ಈ ನಾಲ್ಕು ಆಟಗಾರರಲ್ಲಿ ಇಬ್ಬರಲ್ಲದಿದ್ದರೆ ದೇಶೀಯ ಆರಂಭಿಕ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಕ್ರಿಸ್ ಲಿನ್ ಈ ಹಿಂದೆ ಕೆಕೆಆರ್ ಅನ್ನು ಪ್ರತಿನಿಧಿಸಿದ್ದರು. ಡಿಕಾಕ್, ಧವನ್ ಮತ್ತು ವಾರ್ನರ್‌ಗೆ ಸಾಕಷ್ಟು ಪೈಪೋಟಿ ಇದೆ. ಡಿಕಾಕ್ ಹರಾಜಿನಲ್ಲಿ ಸಿಕ್ಕರೆ ವಿಕೆಟ್ ಕೀಪರ್ ಸಮಸ್ಯೆಯೂ ಈಡೇರಲಿದೆ. ಜೇಸನ್ ರಾಯ್ ಅವರ ಮೇಲೂ ಕೆಕೆಆರ್ ಬಿಡ್ ಮಾಡುವ ಆಸಕ್ತಿ ಹೊಂದಿದೆ.
IPL ಹರಾಜು 2022: ಸಿಎಸ್‌ಕೆ ಸಂಭಾವ್ಯ ಸ್ಕ್ವಾಡ್ ಹೀಗಿದೆ

ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್
ಮಧ್ಯಮ ಕ್ರಮಾಂಕದಲ್ಲಿ ಆಡುವುದರ ಜೊತೆಗೆ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ಗುರಿಯಾಗಿಸಿದೆ. ಅದರಲ್ಲೂ ಶ್ರೇಯಸ್ ಅಯ್ಯರ್‌ಗೆ ಯಾವುದೇ ಬೆಲೆ ತೆರಲು ಸಿದ್ಧವಾಗಿದೆ.
ಅಯ್ಯರ್ ಅವರ ಮೇಲೆ ಬಿಡ್ ಮಾಡಿದ್ರೆ, ಇಶಾನ್ ಕಿಶನ್ ಬೇರೆ ತಂಡಗಳಿಗೆ ಹೋಗುವ ಅವಕಾಶವಿದೆ. ಕೆಕೆಆರ್ ರಾಹುಲ್ ತ್ರಿಪಾಠಿ ಮತ್ತು ಶಾರುಖ್ ಖಾನ್ ಅವರ ಮೇಲೂ ಬಿಡ್ ಮಾಡುವ ಆಶಯ ಹೊಂದಿದೆ.
ಒಬ್ಬನ ಮೇಲೆ ಕೋಟಿ ಸುರಿದ ಆರ್‌ಸಿಬಿ ಕಪ್ ಗೆಲ್ಲುತ್ತಿಲ್ಲ; ಈತನಿಗೆ ನಾಯಕತ್ವ ನೀಡಿ ಎಂದ ಮಾಜಿ ಕ್ರಿಕೆಟಿಗ

ರವಿಚಂದ್ರನ್ ಅಶ್ವಿನ್, ಪಿಯೂಶ್ ಚಾವ್ಲಾ ಮೇಲೂ ಕಣ್ಣಿದೆ
ಆಲ್‌ರೌಂಡರ್‌ಗಳಾದ ಸುನಿಲ್ ನರೈನ್ ಮತ್ತು ಆ್ಯಂಡ್ರೆ ರಸೆಲ್ ಆಲ್‌ರೌಂಡರ್ ಸ್ಥಾನ ತುಂಬುವ ಹಿನ್ನಲೆ ಕೆಕೆಆರ್ ತಂಡ ಬ್ಯಾಲೆನ್ಸ್ ಆಗಲಿದೆ. ಬೆನ್ ಕಟಿಂಗ್ ಅವರಂತಹ ಕಡಿಮೆ ಕಾಸ್ಟ್ ಆಟಗಾರರ ಜೊತೆಗೆ ದೇಶೀಯ ಆಲ್ ರೌಂಡರ್‌ಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಸ್ಪಿನ್ನರ್‌ಗಳಿಗೂ ಕೆಕೆಆರ್‌ಗೆ ದೊಡ್ಡ ಮೊತ್ತವನ್ನು ಖರ್ಚು ಮಾಡಲು ಅವಕಾಶವಿಲ್ಲ. ಏಕೆಂದರೆ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಂಡಕ್ಕೆ ಅಗತ್ಯವಿರುವ ಇಬ್ಬರು ಗುಣಮಟ್ಟದ ಸ್ಪಿನ್ನರ್‌ಗಳು. ಇವರ ಜೊತೆಗೆ ಬೇಕಾದಲ್ಲಿ ಅಶ್ವಿನ್ ಮತ್ತು ಚಾವ್ಲಾ ಅವರನ್ನು ತಮ್ಮ ಬ್ಯಾಕಪ್ ಆಗಿ ತೆಗೆದುಕೊಳ್ಳಲು ಪ್ರಯತ್ನಿಸಬಹುದು. ಕಡಿಮೆ ಬೆಲೆಗೆ ಸಿಕ್ಕರೆ ಮಾತ್ರ ಈ ಆಟಗಾರರ ಮೇಲೆ ಬಿಡ್ ಮಾಡುವ ಅವಕಾಶವಿದೆ.

ರಬಾಡ, ಶಮಿ, ಟ್ರೆಂಟ್ ಬೌಲ್ಟ್, ಲ್ಯೂಕ್ ಫರ್ಗುಸನ್
ಕೆಕೆಆರ್ ವೇಗಿಗಳಾಗಿ ಕಗಿಸೊ ರಬಾಡ, ಮೊಹಮ್ಮದ್ ಶಮಿ, ಟ್ರೆಂಟ್ ಬೌಲ್ಟ್ ಮತ್ತು ಲ್ಯೂಕ್ ಫರ್ಗುಸನ್ ಅವರನ್ನು ಗುರಿಯಾಗಿಸಿಕೊಂಡಿದೆ. ಆದರೆ ಇವರೆಲ್ಲರೂ ಭಾರೀ ಬೆಲೆಗೆ ಬಿಡ್ ಆಗುವ ಸಾಧ್ಯತೆ ಇರುವುದರಿಂದ ಕಡಿಮೆ ಮೊತ್ತದ ಜೋಶ್ ಹೇಜಲ್‌ವುಡ್ ಮತ್ತು ಮಾರ್ಕೊ ಜಾನ್ಸೆನ್ ಅವರಂತಹ ಬೌಲರ್ ಕಡೆಗೆ ಬಿಡ್ ಮಾಡಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ
ಜೇಸನ್ ರಾಯ್ / ಕ್ವಿಂಟನ್ ಡಿಕಾಕ್, ಕ್ರಿಸ್ ಲಿನ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಶ್ರೇಯಸ್ ಅಯ್ಯರ್, ಶಾರುಖ್ ಖಾನ್, ಆಂಡ್ರೆ ರಸೆಲ್, ರಿಷಿ ಧವನ್, ಸುನಿಲ್ ನರೈನ್, ಜೋಶ್ ಹೇಜಲ್‌ವುಡ್, ಚೇತನ್ ಜಕಾರಿಯಾ, ವರುಣ್ ಚಕ್ರವರ್ತಿ, ರಜತ್ ಸಿಂಗ್ ಪಾಟಿದಾರ್, ಕರದೀಪ್ ಪಾಟಿದಾರ್, ಸಿದ್ಧಾರ್ಥ್ ಯಾದವ್, ಆಡಮ್ ಮಿಲ್ನೆ, ಜೇಸನ್ ರಾಯ್, ಮಾರ್ಕೊ ಜಾನ್ಸೆನ್, ಜಯಂತ್ ಯಾದವ್, ವೈಭವ್ ಅರೋರಾ, ಮ್ಯಾಥ್ಯೂ ವೇಡ್, ಮನನ್ ವೋಹ್ರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications