For Quick Alerts
ALLOW NOTIFICATIONS  
For Daily Alerts
 

IPL 2022: ಚೆನ್ನೈ ವಿರುದ್ಧ ಮೊದಲ ಪಂದ್ಯದಲ್ಲಿ ಕೆಕೆಆರ್‌ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ

KKR 2022

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನ ಪ್ರಾರಂಭಕ್ಕೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಹೀಗಿರುವಾಗ ಬಹುತೇಕ ಆಟಗಾರರು ತಮ್ಮ ಸ್ಕ್ವಾಡ್ ಸೇರಿಕೊಂಡಿದ್ದು, ಕೆಲವರು ಕ್ವಾರಂಟೈನ್‌ನಲ್ಲಿದ್ರೆ, ಮತ್ತೆ ಕೆಲವರು ಈಗಾಗಲೇ ಅಭ್ಯಾಸ ಕೂಡ ಶುರು ಮಾಡಿದ್ದಾರೆ.

ಮಾರ್ಚ್‌ 26ರಿಂದ ಪ್ರಾರಂಭವಾಗಲಿರುವ ಐಪಿಎಲ್ ಮೆಗಾ ಸೀಸನ್‌ನಲ್ಲಿ 10 ತಂಡಗಳು ಭಾಗವಹಿಸಲಿದ್ದು, ರೋಚಕ ಹಣಾಹಣಿಗೆ ಟೂರ್ನಿ ಸಾಕ್ಷಿಯಾಗಲಿದೆ. ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹೊಸ ನಾಯಕ ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಮುನ್ನಡೆಯಲಿದೆ. ತಂಡದಲ್ಲಿ ಸಾಕಷ್ಟ ಬದಲಾವಣೆಯಾಗಿದ್ದು, ಮಾರ್ಚ್‌ 26ರಂದು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಸಿಎಸ್‌ಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಯಾವೆಲ್ಲಾ ಆಟಗಾರರನ್ನ ಕಣಕ್ಕಿಳಿಸಬಹುದು ಎಂದು ತಿಳಿಯುವುದಕ್ಕೂ ಮೊದಲು ಒಟ್ಟಾರೆ ಸ್ಕ್ವಾಡ್‌ನಲ್ಲಿ ಯಾರಿದ್ದಾರೆ ಎಂಬುದನ್ನ ತಿಳಿಯಿರಿ

ಕೆಕೆಆರ್ 2022 ಸ್ಕ್ವಾಡ್

ಕೆಕೆಆರ್ 2022 ಸ್ಕ್ವಾಡ್

ಶ್ರೇಯಸ್ ಅಯ್ಯರ್ (12.25 ಕೋಟಿ), ಆಂಡ್ರೆ ರಸೆಲ್ (12 ಕೋಟಿ), ವರುಣ್ ಚಕ್ರವರ್ತಿ (8 ಕೋಟಿ), ವೆಂಕಟೇಶ್ ಅಯ್ಯರ್ (8 ಕೋಟಿ), ನಿತೀಶ್ ರಾಣಾ (8 ಕೋಟಿ), ಶಿವಂ ಮಾವಿ (7.25 ಕೋಟಿ), ಪ್ಯಾಟ್ ಕಮಿನ್ಸ್ (7.25 ಕೋಟಿ), ಉಮೇಶ್ ಯಾದವ್ (2 ಕೋಟಿ), ಸ್ಯಾಮ್ ಬಿಲ್ಲಿಂಗ್ಸ್ (2 ಕೋಟಿ), ಅಲೆಕ್ಸ್ ಹೇಲ್ಸ್ (1.50 ಕೋಟಿ), ಟಿಮ್ ಸೌಥಿ (1.50 ಕೋಟಿ), ಅಜಿಂಕ್ಯಾ ರಹಾನೆ (1 ಕೋಟಿ), ಮೊಹಮ್ಮದ್ ನಬಿ (1 ಕೋಟಿ), ಶೆಲ್ಡನ್ ಜಾಕ್ಸನ್ (60 ಲಕ್ಷ), ರಿಂಕು ಸಿಂಗ್ ( 55 ಲಕ್ಷ), ಅಶೋಕ್ ಶರ್ಮಾ (55 ಲಕ್ಷ), ಚಾಮಿಕಾ ಕರುಣಾರತ್ನೆ (50 ಲಕ್ಷ), ಅಭಿಜಿತ್ ತೋಮರ್ (40 ಲಕ್ಷ), ಅಮನ್ ಖಾನ್, ಅನುಕುಲ್ ರಾಯ್, ಪ್ರತಮ್ ಸಿಂಗ್, ರಸಿಖ್ ದಾರ್, ಬಾಬಾ ಇಂದ್ರಜಿತ್ (ತಲಾ 20 ಲಕ್ಷ).

ಓಪನರ್‌ಗಳಾಗಿ ಕಣಕ್ಕಿಳಿಯಬಲ್ಲ ಪ್ಲೇಯರ್ಸ್

ಓಪನರ್‌ಗಳಾಗಿ ಕಣಕ್ಕಿಳಿಯಬಲ್ಲ ಪ್ಲೇಯರ್ಸ್

23 ಮಂದಿಯ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಕ್ವಾಡ್‌ನಲ್ಲಿ ಅಂತಿಮ ಇಲೆವೆನ್ ತಂಡವನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸವಾಗಿದೆ. ಕಳೆದ ಋತುವಿನಲ್ಲಿ ತಂಡದ ಆರಂಭಿಕರಾಗಿ ಪದಾರ್ಪಣೆ ಮಾಡಿದ್ದ ವೆಂಕಟೇಶ್ ಅಯ್ಯರ್, ಶೆಲ್ಡನ್ ಜಾಕ್ಸನ್ ಕೂಡ ಕಣಕ್ಕಿಳಿಯುವ ಸಾಧ್ಯತೆಯಿದೆ. ತಂಡದಲ್ಲಿ ಆಲ್ ರೌಂಡರ್ ಸುನಿಲ್ ನರೈನ್ ಆರಂಭಿಕರಾಗಿಯೂ ಮತ್ತೆ ಕಣಕ್ಕಿಳಿದ್ರೂ ಆಶ್ಚರ್ಯವಿಲ್ಲ. ಈ ಹಿಂದೆ ಹಲವು ಬಾರಿ ಆರಂಭಿಕರಾಗಿ ಕಣಕ್ಕಿಳಿದಿರುವ ಸುನಿಲ್ ನರೈನ್ ಕೋಲ್ಕತ್ತಾ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟಿದ್ದಾರೆ.

ಮಿಡಲ್‌ ಆರ್ಡರ್‌ ಮತ್ತು ಕೆಳಕ್ರಮಾಂಕದಲ್ಲಿ ಯಾರಿಗೆ ಸ್ಥಾನ?

ಮಿಡಲ್‌ ಆರ್ಡರ್‌ ಮತ್ತು ಕೆಳಕ್ರಮಾಂಕದಲ್ಲಿ ಯಾರಿಗೆ ಸ್ಥಾನ?

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ನಿತೀಶ್ ರಾಣಾ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ. ಐದನೇ ಸ್ಥಾನದಲ್ಲಿ ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಇದ್ದಾರೆ. ಪೇಸ್ ಆಲ್ ರೌಂಡರ್ ಆಂಡ್ರ್ಯೂ ರಸೆಲ್ ಆರನೇ ಸ್ಥಾನದಲ್ಲಿದ್ದು, ಸ್ಪಿನ್ ಆಲ್ ರೌಂಡರ್ ಸುನಿಲ್ ನರೈನ್ ಏಳನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರ ಹೊರತಾಗಿ ಆರಂಭಿಕ ವೆಂಕಟೇಶ್ ಅಯ್ಯರ್ ಕೂಡ ಪೇಸ್ ಆಲ್ ರೌಂಡರ್ ಆಗಿದ್ದಾರೆ. ಒಟ್ಟಾರೆಯಾಗಿ ಕೋಲ್ಕತ್ತಾ ತಂಡದಲ್ಲಿ ಮೂವರು ಸ್ಟಾರ್ ಆಲ್ ರೌಂಡರ್ ಗಳಿದ್ದಾರೆ.

ಬೌಲಿಂಗ್ ನೊಗ ಯಾರು ಹೊರಲಿದ್ದಾರೆ?

ಬೌಲಿಂಗ್ ನೊಗ ಯಾರು ಹೊರಲಿದ್ದಾರೆ?

ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಶಿವಂ ಮಾವಿ ವೇಗದ ಬೌಲರ್‌ಗಳಾಗಿ ಆಡುತ್ತಿದ್ದಾರೆ. ಒಬ್ಬ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದರೆ, ಮತ್ತೊಬ್ಬ ಸ್ಪಿನ್ನರ್ ಆಗಿ ಅನುಕುಲ್ ರಾಯ್ ಆಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿ ಬಲಿಷ್ಠವಾಗಿ ಕಾಣುತ್ತಿದೆ. ತಂಡದ ಬೌಲಿಂಗ್ ವಿಭಾಗವನ್ನು ಈ ಬಾರಿಯೂ ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ. ಕೋಲ್ಕತ್ತಾ ತನ್ನ ಮೊದಲ ಪಂದ್ಯವನ್ನು ಇದೇ ತಿಂಗಳ 26 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.

ಇಷ್ಟು ದಿನ ಹೇಳಿದ್ದೆಲ್ಲ ಸುಳ್ಳು!! ಜೆರ್ಸಿ ನಂ 7ರ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ Dhoni | Oneindia Kannada
ಕೆಕೆಆರ್ ಪ್ಲೇಯಿಂಗ್ ಇಲೆವೆನ್ 2022

ಕೆಕೆಆರ್ ಪ್ಲೇಯಿಂಗ್ ಇಲೆವೆನ್ 2022

ಶೆಲ್ಡನ್ ಜಾಕ್ಸನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಆಂಡ್ರ್ಯೂ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಅನುಕುಲ್ ರಾಯ್, ವರುಣ್ ಚಕ್ರವರ್ತಿ.

Story first published: Friday, March 18, 2022, 13:26 [IST]
Other articles published on Mar 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+