For Quick Alerts
ALLOW NOTIFICATIONS  
For Daily Alerts
 

IPL 2022: ಕಗಿಸೊ ರಬಾಡಗೆ 1 ಎಸೆತಕ್ಕೆ 2.26 ಲಕ್ಷ ರೂಪಾಯಿ ಕೊಡಲಿದೆ ಪಂಜಾಬ್ ಕಿಂಗ್ಸ್‌

Kagiso rabada

ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಕಗಿಸೊ ರಬಾಡ ಅವರನ್ನು 9.25 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಖರೀದಿಸಿದೆ. ಹೊಸ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಈ ವೇಗಿಯನ್ನ ಪಡೆಯಲು ಸಾಕಷ್ಟು ಬಿಡ್‌ ನಡೆಸಿದವು. ಆದ್ರೆ ಅಂತಿಮವಾಗಿ ಪಂಜಾಬ್ ಕಿಂಗ್ಸ್‌ ಕಗಿಸೊ ರಬಾಡರನ್ನ ಪಡೆಯುವಲ್ಲಿ ಯಶಸ್ವಿಯಾಗಿದೆ. ರಬಾಡಗಾಗಿ ತನ್ನ ಹೆಚ್ಚಿನ ಹಣ ಬಿಡ್‌ ಮಾಡುವ ಮೂಲಕ ಖರೀದಿಸಲು ಯಶಸ್ವಿಯಾಗಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ಪರ ರಬಾಡ ಅಬ್ಬರ

ಡೆಲ್ಲಿ ಕ್ಯಾಪಿಟಲ್ಸ್ ಪರ ರಬಾಡ ಅಬ್ಬರ

ಐಪಿಎಲ್ 2018ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಬಾಡ ಅವರನ್ನು 5 ಕೋಟಿ ರೂ.ಗೆ ಖರೀದಿಸಿದೆ. ಆದಾಗ್ಯೂ, ಬೆನ್ನುನೋವಿನ ಕಾರಣ ರಬಾಡ ಋತುವಿನ ಉಳಿದ ಪಂದ್ಯಗಳನ್ನು ಕಳೆದುಕೊಂಡರು. 2019 ರಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿರುವ ರಬಾಡ ಸತತ ಮೂರು ಸೀಸನ್‌ಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ರು. ರಬಾಡ ಬೌಲಿಂಗ್ ಕೊಡುಗೆಯಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ಮೂರು ಸೀಸನ್‌ಗಳಲ್ಲಿ ಪ್ಲೇ-ಆಫ್ ತಲುಪಿದೆ. 2020 ರ ಸೀಸನ್‌ನಲ್ಲಿ ಡೆಲ್ಲಿ ಫೈನಲ್ ತಲುಪಿತಾದ್ರೂ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲಗೊಂಡಿತು.

ಭಾರೀ ಬೆಲೆ ನೀಡಿದ ಪಂಜಾಬ್ ಕಿಂಗ್ಸ್‌

ಭಾರೀ ಬೆಲೆ ನೀಡಿದ ಪಂಜಾಬ್ ಕಿಂಗ್ಸ್‌

ರಬಾಡ 2020 ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿ ಪರ್ಪಲ್ ಕ್ಯಾಪ್ ಅನ್ನು ಪಡೆದರು. ಐಪಿಎಲ್ 2022ರ ಋತುವಿನಲ್ಲಿ ಕನಿಷ್ಠ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ 26ರ ಹರೆಯದ ರಬಾಡಗೆ ಪಂಜಾಬ್ ಕಿಂಗ್ಸ್ ಭಾರಿ ಬೆಲೆ ನೀಡಿದೆ. ಇದರಿಂದ ರಬಾಡ ಅವರ ಸಂಬಳ ನಾಲ್ಕೂವರೆ (4.625) ಪಟ್ಟು ಹೆಚ್ಚಿದೆ. ದೆಹಲಿ ಪರ ಇದುವರೆಗೆ 50 ಐಪಿಎಲ್ ಪಂದ್ಯಗಳನ್ನು ಆಡಿರುವ ರಬಾಡ 20.53ರ ಸರಾಸರಿಯಲ್ಲಿ 76 ವಿಕೆಟ್ ಪಡೆದಿದ್ದಾರೆ. ಎಕಾನಮಿ 8.21 ರಷ್ಟಿದ್ದು, ಸ್ಟ್ರೈಕ್ ರೇಟ್ 15 ಆಗಿದೆ.

ಐಪಿಎಲ್ 2022: ಆರ್‌ಸಿಬಿ ತಂಡಕ್ಕೆ ಈತನೇ ನಾಯಕ; ಶೀಘ್ರದಲ್ಲೇ ಘೋಷಣೆ ಸಾಧ್ಯತೆ!

ಅತಿ ಹೆಚ್ಚು ಹಣಕ್ಕೆ ಬಿಕರಿಯಾದ ದಕ್ಷಿಣ ಆಫ್ರಿಕಾ ಆಟಗಾರರು

ಅತಿ ಹೆಚ್ಚು ಹಣಕ್ಕೆ ಬಿಕರಿಯಾದ ದಕ್ಷಿಣ ಆಫ್ರಿಕಾ ಆಟಗಾರರು

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ರಬಾಡ ಹೆಚ್ಚು ಮೊತ್ತಕ್ಕೆ ಮಾರಾಟವಾದ ದಕ್ಷಿಣ ಆಫ್ರಿಕಾದ ಆಟಗಾರರಲ್ಲಿ ಒಬ್ಬರು. ಇವರ ನಂತರ 7 ಕೋಟಿ ರೂಪಾಯಿಗೆ ಫಾಫ್ ಡುಪ್ಲೆಸಿಸ್‌ರನ್ನ ಆರ್‌ಸಿಬಿ ಖರೀದಿಸಿದೆ. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 6.75 ಕೋಟಿ ರೂ.ಗೆ ಆಯ್ಕೆ ಮಾಡಿದರೆ, ಮಾರ್ಕೊ ಜಾನ್ಸನ್ ಅವರನ್ನು ಸನ್‌ರೈಸರ್ಸ್ 4.2 ಕೋಟಿ ರೂಪಾಯಿಗೆ ಆಯ್ಕೆ ಪಡೆದುಕೊಂಡಿತು. ದಕ್ಷಿಣ ಆಫ್ರಿಕಾ ಅಂಡರ್-19 ಸೆನ್ಸೇಷನ್, ಬೇಬಿ ಎಬಿಡಿ ಖ್ಯಾತಿ ಡೆವಾಲ್ಡ್ ಬ್ರೆವಿಸ್ ಅವರನ್ನು ಮುಂಬೈ 3 ಕೋಟಿ ರೂ.ಗೆ ಪಡೆಯಿತು.

ಭಾರತ vs ವೆಸ್ಟ್ ಇಂಡೀಸ್: 2ನೇ ಟಿ20 ಪಂದ್ಯ: ಪ್ಲೇಯಿಂಗ್ XI, ನೇರಪ್ರಸಾರ ಮಾಹಿತಿ

RCB ಸೇರಿದ ಯುವ ಆಟಗಾರ Mahipal Lomror | Oneindia Kannada
ಪ್ರತಿ ಎಸೆತಕ್ಕೆ 2.27 ಲಕ್ಷ ರೂಪಾಯಿ

ಪ್ರತಿ ಎಸೆತಕ್ಕೆ 2.27 ಲಕ್ಷ ರೂಪಾಯಿ

ಮುಂಬರುವ ಋತುವಿನಲ್ಲಿ ಪ್ರತಿ ತಂಡಕ್ಕೂ 14 ಲೀಗ್ ಪಂದ್ಯಗಳನ್ನು ಆಡುವ ಅವಕಾಶವಿದೆ. ಇದರೊಂದಿಗೆ ಪ್ಲೇಆಫ್ ಮತ್ತು ಫೈನಲ್ ಸೇರಿದಂತೆ ಇನ್ನೂ ಮೂರು ಪಂದ್ಯಗಳು ನಡೆಯಲಿವೆ. ಕಗಿಸೊ ರಬಾಡ ಗರಿಷ್ಠ 68 ಓವರ್‌ಗಳನ್ನು ಬೌಲ್ ಮಾಡಲಿದ್ದಾರೆ. ಅಂದರೆ ಅವರು 408 ಎಸೆತಗಳನ್ನು ಬೌಲ್ ಮಾಡುತ್ತಾರೆ. ಈ ಲೆಕ್ಕಾಚಾರದಲ್ಲಿ ಅವರು 2.27 ಲಕ್ಷ ರೂಪಾಯಿ ಪಡೆಯುತ್ತಾರೆ. ಅಂದರೆ ಐಪಿಎಲ್‌ನಲ್ಲಿ ಅವರು ಎಸೆಯುವ ಪ್ರತಿ ಎಸೆತಕ್ಕೆ ಪಂಜಾಬ್ ಕಿಂಗ್ಸ್ 2.27 ಲಕ್ಷ ರೂ. ತೆರಬೇಕಾಗುತ್ತದೆ. ಹೀಗಾಗಿ ರಬಾಡ ಐಪಿಎಲ್ ದುಬಾರಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.

Story first published: Friday, February 18, 2022, 9:43 [IST]
Other articles published on Feb 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+