ಐಪಿಎಲ್ 2022: ಆರ್‌ಸಿಬಿ ತಂಡಕ್ಕೆ ಈತನೇ ನಾಯಕ; ಶೀಘ್ರದಲ್ಲೇ ಘೋಷಣೆ ಸಾಧ್ಯತೆ!

ಈ ಬಾರಿಯ ಐಪಿಎಲ್ ಆವೃತ್ತಿಗಾಗಿ ಈಗಾಗಲೇ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು ಎಲ್ಲಾ ತಂಡಗಳು ಕೂಡ ತಮ್ಮ ತಂಡವನ್ನು ರಚಿಸಿಕೊಂಡಿದೆ. 90 ಕೋಟಿ ಪರ್ಸ್‌ನಲ್ಲಿ ಆಟಗಾರರನ್ನು ಖರೀದಿಸಿರುವ ಫ್ರಾಂಚೈಸಿಗಳು ಈಗ ಉತ್ತಮ ಆಡುವ 11ರ ಬಳಗವನ್ನು ಸಿದ್ಧಪಡಿಸುವತ್ತ ಚಿತ್ತ ನೆಟ್ಟಿದೆ. ಈ ಮಧ್ಯೆ ಕೆಲ ತಂಡಗಳು ನಾಯಕತ್ವದ ಹೊಣೆಗಾರಿಕೆಗಾಗಿ ಹುಡುಕಾಟದಲ್ಲಿದ್ದು ಇದರಲ್ಲಿ ಕೆಕೆಆರ್ ಫ್ರಾಂಚೈಸಿ ಇಗಾಗಲೇ ನೂತನ ನಾಯಕನನ್ನು ಘೋಷಣೆ ಮಾಡಿದೆ. ಶ್ರೇಯಸ್ ಐಯ್ಯರ್ ಮುಂಬರುವ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ. ಇದೀಗ ಆರ್‌ಸಿಬಿ ಅಭಿಮಾನಿಗಳು ಕೂಡ ತಮ್ಮ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಬಗ್ಗೆ ಕುತೂಹಲಗೊಂಡಿದ್ದಾರೆ.
ಕಳೆದ ಬಾರಿಯ ಆವೃತ್ತಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ನಾಯಕನಾಗಿದ್ದ ವಿರಾಟ್ ಕೊಹ್ಲಿ ಮುಂಬರುವ ಆವೃತ್ತಿಯಿಂದ ತಾನು ನಾಯಕನಾಗಿ ಮುಂದುವರಿಯುವುದಿಲ್ಲ, ಕೇವಲ ಆಟಗಾರನಾಗಿ ಮುಂದುವರಿಯಲಿದ್ದೇನೆ ಎಂದಿದ್ದರು. ಹೀಗಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ನಾಯಕತ್ವವನ್ನೂ ವಹಿಸಿಕೊಳ್ಳುವ ಆಟಗಾರನ ಮೇಲೆ ಆರ್‌ಸಿಬಿ ಚಿತ್ತ ನೆಟ್ಟಿತ್ತು.
ಹಾಗಾದರೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವವರು ಯಾರು? ಇಲ್ಲಿದೆ ಉತ್ತರ, ಮುಂದೆ ಓದಿ..

ದಶಕದ ಬಳಿಕ ನಾಯಕತ್ವ ಬದಲಾವಣೆ
ಐಪಿಎಲ್‌ನಲ್ಲಿ ಸುಮಾರು ಒಂದು ದಶಕದ ಬಳಿಕ ಆರ್‌ಸಿಬಿ ತಂಡ ನೂತನ ನಾಯಕನ ಅಡಿಯಲ್ಲಿ ಆಡಲು ಸಜ್ಜಾಗುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವ ತೊರೆಯುವ ನಿರ್ಧಾರ ತೆಗೆದುಕೊಂಡ ನಂತರ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ನಿವೃತ್ತಿ ಘೋಷಣೆ ಮಾಡಿರುವ ಕಾರಣ ಆರ್‌ಸಿಬಿಗೆ ಹೊಸ ನಾಯಕನ ನೇಮಕ ಅನಿವಾರ್ಯವಾಗಿದೆ. ಐಪಿಎಲ್ ಇತಿಹಾಸದಲ್ಲಿ ಈವರೆಗೂ ಟ್ರೋಫಿ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ ತಂಡಕ್ಕೆ ಸಮರ್ಥ ನಾಯಕ ಯಾರಾಗಲಿದ್ದಾರೆ ಎಂಬುದು ಈಗ ಕುತೂಹಲ ಹೆಚ್ಚಿಸಿದೆ.
ರಣಜಿ 2022: ಕರ್ನಾಟಕ vs ರೈಲ್ವೇಸ್ ಪ್ಲೇಯಿಂಗ್ ಇಲೆವೆನ್, ಪಿಚ್ ವರದಿ ಮತ್ತು ಹವಾಮಾನ ವರದಿ

ಮ್ಯಾಕ್ಸ್‌ವೆಲ್ ಹಾಗೂ ಫಾಫ್ ಡು ಪ್ಲೆಸಿಸ್ ಮಧ್ಯೆ ಸ್ಪರ್ಧೆ
ಇನ್ನು ಆರ್‌ಸಿಬಿ ತಂಡದಲ್ಲಿ ನಾಯಕತ್ವ ವಹಿಸಿಕೊಳ್ಳಲು ಇಬ್ಬರು ಪ್ರಮುಖ ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಹರಾಜಿಗೂ ಮುನ್ನವೇ ಆರ್‌ಅಇಬಿ ಫ್ರಾಂಚೈಸಿ ತಂಡದಲ್ಲಿ ಉಳಿಸಿಕೊಂಡಿತ್ತು. ತಂಡವನ್ನು ಮುನ್ನಡೆಸಲು ಅವರು ಪ್ರಮುಖ ಆಯ್ಕೆಯಾಗಬಲ್ಲರು. ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಅತ್ಯುತ್ತಮ ಅಂಕಿಅಂಶವನ್ನು ಹೊಂದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವ ಕೂಡ ಅವರಿಗೆ ಇದೆ.

ಫಾಫ್ ಡು ಪ್ಲೆಸಿಸ್ ಮುಡಿಗೆ ನಾಯಕತ್ವದ ಜವಾಬ್ಧಾರಿ ಬಹುತೇಕ ಪಕ್ಕಾ!
ಆರ್‌ಸಿಬಿ ತಂಡದ ಮೂಲಗಳು ಇನ್‌ಸೈಡ್‌ಸ್ಪೋರ್ಟ್‌ಗೆ ನಾಯಕತ್ವದ ವಿಚಾರವಾಗಿ ಮಾಹಿತಿ ನೀಡಿದ್ದು ಈ ಸಂದರ್ಭದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ರೇಸ್‌ನಲ್ಲಿ ಮುಂದಿದ್ದಾರೆ ಎಂದುಬು ತಿಳಿದುಬಂದಿದೆ. ಮದುವೆಯ ಕಾರಣದಿಂದಾಗಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆರಂಭಿಕ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬ ಬಗ್ಗೆ ವರದಿಗಳಾಗುತ್ತಿದ್ದು ಆ ಕಾರಣದಿಂದಾಗಿ ಫಾಫ್ ಡು ಪ್ಲಸಿಸ್ ಅವರಿಗೆ ನಾಯಕತ್ವ ವಹಿಸಲು ಸಿದ್ಧತೆ ನಡೆದಿದೆ. "ಫಾಫ್ ಡು ಪ್ಲೆಸಿಸ್ ಸೂಕ್ತ ಆಯ್ಕೆ ಎಂದು ನಾವು ಅಂದುಕೊಂಡಿದ್ದೇವೆ. ಆದರೆ ಅದನ್ನು ನಿರ್ಧರಿಸಲು ಸಮಯ ಬೇಕಿದೆ. ಮ್ಯಾಕ್ಸ್‌ವೆಲ್ ಅವರ ಪರಿಸ್ಥಿತಿ ಹಾಗೂ ಲಭ್ಯತೆಯ ಬಗ್ಗೆ ನಾವು ಸ್ಪಷ್ಟತೆಗಾಗಿ ಕಾಯುತ್ತಿದ್ದೇವೆ. ಈಗಿನ ಮಾಹಿತಿಗಳ ಪ್ರಕಾರ ಆರಂಭಿಕ ಕೆಲ ಪಂದ್ಯಗಳಲ್ಲಿ ಅವರ ಲಭ್ಯತೆ ಕಷ್ಟವಾಗಲಿದೆ. ಹೀಗಾಗಿ ಫಾಫ್ ಸೂಕ್ತ ಆಯ್ಕೆ" ಎಂದು ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದೆ.

ನಾಯಕತ್ವಕ್ಕೆ ಫಾಫ್ ಅತ್ಯುತ್ತಮ ಆಯ್ಕೆ ಎನ್ನುತ್ತಿವೆ ಈ ಅಂಶಗಳು
ಇನ್ನು ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಳ್ಳಲಿ ಫಾಫ್ ಡು ಪ್ಲೆಸಿಸ್ ಮ್ಯಾಕ್ಸ್‌ವೆಲ್ ಜೊತೆಗೆ ದಿನೇಶ್ ಕಾರ್ತಿಕ್ ಕೂಡ ಪ್ರಮುಖ ಆಯ್ಕೆಯಾಗಿದ್ದಾರೆ. ಆದರೆ ಈ ಮೂವರಲ್ಲಿ ಫಾಫ್ ಡು ಪ್ಲೆಸಿಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮೂರು ಮಾದರಿಯಲ್ಲಿಯೂ ಮುನ್ನಡೆಸಿದ ಉತ್ತಮ ಅನುಭವ ಹೊಂದಿದ್ದಾರೆ. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವ ವಹಿಸಿದ ಹೆಚ್ಚಿನ ಅನುಭವ ಇರುವುದು ಫಾಫ್ ಡು ಪ್ಲೆಸಿಸ್‌ಗೆ. ಆಟಗಾರನಾಗಿಯೂ ಅತ್ಯುತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಫಾಫ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಣೆ ಮಾಡಿರುವ ಕಾರಣ ಐಪಿಎಲ್ 2022ರ ಸಂಪೂರ್ಣ ಆವೃತ್ತಿಗೆ ಅವರು ಲಭ್ಯವಾಗಲಿದ್ದಾರೆ.
ಐಪಿಎಲ್ 2022: ಆರ್‌ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಆರಂಭಿಕ ಪಂದ್ಯಗಳಿಗೆ ಅನುಮಾನ! ಕಾರಣ ಇಲ್ಲಿದೆ

ಹರಾಜಿನ ಬಳಿಕ ಆರ್‌ಸಿಬಿ ತಂಡ ಹೀಗಿದೆ
ವಿರಾಟ್ ಕೊಹ್ಲಿ(15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್(11 ಕೋಟಿ), ಮೊಹಮ್ಮದ್ ಸಿರಾಜ್ (7 ಕೋಟಿ), ಫಾಫ್ ಡು ಪ್ಲೆಸಿಸ್ (7 ಕೋಟಿ), ಹರ್ಷಲ್ ಪಟೇಲ್ (10.75 ಕೋಟಿ), ವನಿಂದು ಹಸರಂಗ (10.75 ಕೋಟಿ), ದಿನೇಶ್ ಕಾರ್ತಿಕ್ (5.50 ಕೋಟಿ), ಜೋಶ್ ಹೇಜಲ್‌ವುಡ್ (7.75 ಕೋಟಿ), ಶಹಬಾಜ್ ಅಹ್ಮದ್ (2.40 ಕೋಟಿ) ಅನುಜ್ ರಾವತ್ (3.4 ಕೋಟಿ ರೂ.), ಆಕಾಶ್ ದೀಪ್ ಸಿಂಗ್ (20 ಲಕ್ಷ ರೂ.). ಮಹಿಪಾಲ್ ಲೊಮ್ರೋರ್ (95 ಲಕ್ಷ ರೂ.). ಫಿನ್ ಅಲೆನ್ (80 ಲಕ್ಷ ರೂ.), ಶೆರ್ಫೇನ್ ರುದರ್‌ಫೋರ್ಡ್ (1 ಕೋಟಿ ರೂ.), ಜೇಸನ್ ಬೆಹ್ರೆಂಡಾರ್ಫ್ (ರೂ. 75 ಲಕ್ಷ), ಸುಯಶ್ ಪ್ರಭುದೇಸಾಯಿ (ರೂ. 30 ಲಕ್ಷ), ಚಾಮಾ ಮಿಲಿಂದ್ (ರೂ. 25 ಲಕ್ಷ), ಅನೀಶ್ವರ್ ಗೌತಮ್ (ರೂ. 20 ಲಕ್ಷ), ಕರ್ಣ್ ಶರ್ಮಾ (50 ಲಕ್ಷ), ಲುವ್ನಿತ್ ಸಿಸೋಡಿಯಾ ( 20 ಲಕ್ಷ), ಸಿದ್ಧಾರ್ಥ್ ಕೌಲ್ (75 ಲಕ್ಷ), ಡೇವಿಡ್ ವಿಲ್ಲೆ (2 ಕೋಟಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications