ಪಂಜಾಬ್ ವಿರುದ್ಧ ಸೇಡಿನ ಕದನ: ಈ 4 ಅಂಶಗಳು ಬಲಗೊಂಡರಷ್ಟೇ ಆರ್‌ಸಿಬಿ ಕನಸು ಜೀವಂತ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ ಮಹತ್ವದ ಪಂದ್ಯವನ್ನು ಆಡಲಿದೆ. ಅಂಕಪಟ್ಟಿಯಲ್ಲಿ ಟಾಪ್ 4ರಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಆರ್‌ಸಿಬಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲುವು ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯದ ಮೇಲೆ ಆರ್‌ಸಿಬಿ ಅಭಿಮಾನಿಗಳ ಚಿತ್ತ ನೆಟ್ಟಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಈ ಭಾರಿತ ಆವೃತ್ತಿಯಲ್ಲಿ ತನ್ನ ಮೊಟ್ಟ ಮೊದಲ ಪಂದ್ಯದವನ್ನು ಆಡಿತ್ತು. ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ ಗೆಲುವನ ಮೂಲಕ ಟೂರ್ನಿಯನ್ನು ಶುಭಾರಂಭ ಮಾಡಲಿದೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ 206 ರನ್‌ಗಳ ಬೃಹತ್ ಗುರಿ ನಿಗದಿಯಾಗಿದ್ದರೂ ಈ ಮೊತ್ತವನ್ನು ಪಂಜಾಬ್ ಕಿಂಗ್ಸ್ ಪಡೆ ಐದು ವಿಕೆಟ್ ಕಳೆದುಕೊಂಡು ಇನ್ನೂ ಒಂದು ಓವರ್‌ಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತ್ತು. ಈ ಮೂಲಕ ಮೊದಲ ಪಂದ್ಯದಲ್ಲಿಯೇ ಆಘಾತ ನೀಡಿತ್ತು ಪಂಜಾಬ್ ಪಡೆ. ಹೀಗಾಗಿ ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಜೊತೆಗೆ ಆರ್‌ಸಿಬಿ ತಂಡ ಮುಂದಿನ ಹಂತಕ್ಕೇರಲು ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದೆ.
ಆದರೆ ಆರ್‌ಸಿಬಿಗೆ ಈ ಗೆಲುವು ಖಂಡಿತಾ ಸುಲಭವಿಲ್ಲ. ಈ ಪಂದ್ಯದಲ್ಲಿ ಮೇಲುಗೈ ಸಾಧಿಸಬೇಕಾದರೆ ಆರ್‌ಸಿಬಿ ಈ ನಾಲ್ಕು ಪ್ರಮುಖ ಅಂಶಗಳ ಮೇಲೆ ಖಂಡಿತಾ ಗಮನಹರಿಸಬೇಕಿದೆ.

ತಂಡಕ್ಕೆ ಬೇಕಿದೆ ಉತ್ತಮ ಆರಂಭ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ನಿಜ. ಆದರೆ ತಂಡಕ್ಕೆ ಹೆಚ್ಚಿನ ಸಂದರ್ಭದಲ್ಲಿ ಉತ್ತಮ ಆರಂಭ ದೊರೆತಿಲ್ಲ ಎಂಬುದು ಕೂಡ ನಿಜ. ಅದರಲ್ಲೂ ಅದರಲ್ಲೂ ಮಾಜಿ ನಾಯಕ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದರೂ ಪದೇ ಪದೆ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಈ ಕಳಪೆ ಫಾರ್ಮ್‌ನಿಂದ ಕೊಹ್ಲಿ ಹೊರಬರಬೇಕಿದೆ. ಇನ್ನೊಂದು ತುದಿಯಲ್ಲಿರುವ ನಾಯಕ ಫಾಫ್ ಡು ಪ್ಲೆಸಿಸ್‌ಗೆ ವಿರಾಟ್ ಕೊಹ್ಲಿಯಿಂದ ಉತ್ತಮ ಸಾಥ್ ದೊರೆತರೆ ಆರ್‌ಸಿಬಿ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ.
ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?

ನೆಟ್ ರನ್‌ರೇಟ್
ಈ ಬಾರಿಯ ಐಪಿಎಲ್‌ನಲ್ಲಿ ಹತ್ತು ತಂಡಗಳು ಭಾಗಿಯಾಗಿರುವುದರಿಂದಾಗಿ ಪ್ಲೇಆಫ್ ಹಂತಕ್ಕೇರುವ ಪೈಪೋಟಿ ಸಹಜವಾಗಿಯೇ ಹೆಚ್ಚಿರುತ್ತದೆ. ರಾಜಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಲೆಕ್ಕಾಚಾಲದಲ್ಲಿ ಈವರೆಗಿನ ಪಂದ್ಯಗಳನ್ನು ಗಮನಸಿದರೆ ಹಂತಕ್ಕೆ ಮೇಲುಗೈ ಸಾಧಿಸಿದ್ದು ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ ಯಾವುದೇ ಆತಂಕವಿಲ್ಲದೆ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಳ್ಳಲಿದೆ. ಆದರೆ ಬಾಕಿಯೊರುವ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ಕಳೆದುಕೊಂಡರೂ ಆರ್‌ಸಿಬಿಗೆ ತನ್ನ ನೆಟ್‌ರನ್‌ರೇಟ್ ಮಹತ್ವ ಪಡೆದುಕೊಳ್ಳಲಿದೆ. ಹೀಗಾಗಿ ಮುಂದಿನ ಹಂತಕ್ಕೇರುವುದೇ ಮೊದಲ ಆದ್ಯತೆಯಾಗಿರುವ ಕಾರಣ ಗೆಲುವಿನ ಜೊತೆಗೆ ಆರ್‌ಸಿಬಿ ತನ್ನ ನೆಟ್‌ರನ್‌ರೇಟ್ ಮೇಲೆಯೂ ಗಮನ ಹರಿಸಬೇಕಿದ್ದು ಉತ್ತಮ ಪಡಿಸಿಕೊಳ್ಳುವ ಅನಿವಾರ್ಯತೆಯಿದೆ. ಆರ್‌ಸಿಬಿ ತಂಡದ ನೆಟ್‌ರನ್‌ರೇಟ್ ಟಾಪ್ 7 ತಂಡಗಳಿಗಿಂತಲೂ ಹಿಂದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಬಹುದು.

ಫೀಲ್ಡಿಂಗ್‌ನಲ್ಲಿ ಮತ್ತಷ್ಟು ಚುರುಕು ಅನಿವಾರ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೀಲ್ಡಿಂಗ್‌ನಲ್ಲಿ ಮಾಡುವ ಕೆಲ ತಪ್ಪುಗಳು ತಂಡಕ್ಕೆ ಭಾರೀ ನಷ್ಟವುಂಟು ಮಾಡುವ ಸಾಧ್ಯತೆಯಿದೆ. ಅಗತ್ಯವಿಲ್ಲದ ರನ್‌ಗಳನ್ನು ಬಿಟ್ಟುಕೊಡುವುದು, ರನ್‌ಔಟ್‌ಗಳ ಅವಕಾಶವನ್ನು ಉಪಯೋಗಿಸಲು ವಿಫಲವಾಗುವುದು ಹಾಗೂ ಕ್ಯಾಚ್‌ಗಳನ್ನು ಕೈಚೆಲ್ಲುವಂತಾ ತಪ್ಪುಗಳು ಈ ಹಂತದಲ್ಲಿ ನಡೆದರೆ ಅದು ಭಾರೀ ನಷ್ಟವನ್ನುಂಟು ಮಾಡಲಿದೆ. ಈ ವಿಚಾರವಾಗಿ ಆರ್‌ಸಿಬಿ ಮತ್ಷ್ಟು ಚುರುಕುಗೊಳ್ಳಬೇಕಿದೆ.
ಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆ

ಬೌಲಿಂಗ್ ವಿಭಾಗದ ಸಮಗ್ರ ಹೋರಾಟ
ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದಿಂದ ಈ ಬಾರಿ ಉತ್ತಮ ಪ್ರದರ್ಶನ ಬಂದಿರುವುದು ಸಮಾಧಾನಕರ ಸಂಗತಿ. ಆದರೆ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 206 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದ್ದರೂ ಗೆಲುವು ಸಾಧ್ಯವಾಗದಿರುವುದು ಗಮನಿಸಬೇಕಿದೆ. ಅಂದು ನಡೆದ ತಪ್ಪುಗಳು ಈ ಪಂದ್ಯದಲ್ಲಿ ನಡೆಯಬಾರದು. ಅದರಲ್ಲೂ ಮೊಹಮ್ಮದ್ ಸಿರಾಜ್ ಈ ಆವೃತ್ತಿಯಲ್ಲಿ ಹೆಚ್ಚಿನ ಪರಿಣಾಮವನ್ನು ಬೀರಲು ವಿಫಲವಾಗಿದ್ದಾರೆ. ಪ್ರತಿಭಾವಂತ ಆಟಗಾರನಾಗಿದ್ದರೂ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ಸಿರಾಜ್ ನೀಡಬೇಕಿದೆ. ಹರ್ಷಲ್ ಪಟೇಲ್ ಹಾಗೂ ಹೇಜಲ್‌ವುಡ್ ಅವರಿಂದ ಅದ್ಭುತ ಪ್ರದರ್ಶನ ಬರುತ್ತಿದೆ. ಹಸರಂಗ ಕಳೆದ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಈ ಬೌಲಿಂಗ್ ವಿಭಾಗದಿಂದಲೂ ಸಾಂಘಿಕ ಪ್ರದರ್ಶನ ಆರ್‌ಸಿಬಿ ಗೆಲುವಿಗೆ ಅನಿವಾರ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications