ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?

IPL 2022: Virat Kohli recalls his visit to Bengalurus famous bakery with face mask and hat

ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿ ಪ್ಲೇಆಫ್ ಪ್ರವೇಶಿಸುವ ಸನಿಹದಲ್ಲಿದೆ. ಇನ್ನು ಇದೇ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ವಿಶೇಷ ಸಂದರ್ಶನವನ್ನು ಎಂದಿನಂತೆ ಈ ಬಾರಿ ಕೂಡ ಕೂಡ ದಾನಿಶ್ ಸೇಠ್ ಮಾಡಿದ್ದು, ವಿರಾಟ್ ಕೊಹ್ಲಿ ಹಲವು ವಿಷಯಗಳ ಕುರಿತು ಮುಕ್ತ ಮನಸ್ಸಿನಿಂದ ಚರ್ಚಿಸಿದ್ದಾರೆ.

ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ ಪ್ರಕಟ; ಫಾರ್ಮ್‌ನಲ್ಲಿರುವ ಆಟಗಾರನಿಗಿಲ್ಲ ಸ್ಥಾನ!ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ ಪ್ರಕಟ; ಫಾರ್ಮ್‌ನಲ್ಲಿರುವ ಆಟಗಾರನಿಗಿಲ್ಲ ಸ್ಥಾನ!

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎಬಿ ಡಿ ವಿಲಿಯರ್ಸ್, ತಂಡದ ಸಹ ಆಟಗಾರರ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ತಮ್ಮ ಮೆಚ್ಚಿನ ನಗರ ಬೆಂಗಳೂರಿನ ಕುರಿತೂ ಸಹ ಇದೇ ವೇಳೆ ಚರ್ಚಿಸಿದ್ದಾರೆ. ಹೌದು, ನಮ್ಮ ಬೆಂಗಳೂರು ಎಂದರೆ ವಿರಾಟ್ ಕೊಹ್ಲಿಗೆ ಬಲು ಪ್ರೀತಿ. ಈ ವಿಷಯವನ್ನು ಕೊಹ್ಲಿ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ ಕೂಡ. ಅದೇ ರೀತಿ ಈ ಬಾರಿ ನಡೆದಿರುವ ಸಂದರ್ಶನದಲ್ಲಿಯೂ ಸಹ ವಿರಾಟ್ ಕೊಹ್ಲಿ ಬೆಂಗಳೂರಿನ ಕುರಿತು ವಿಶೇಷವಾಗಿ ಮಾತನಾಡಿದ್ದು, ನಗರದ ಪ್ರಮುಖ ಬೇಕರಿಯೊಂದರಲ್ಲಿ ತಿಂಡಿ ತಿನ್ನಲು ಹೋಗಿದ್ದ ಘಟನೆಯನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ರಾಜೀನಾಮೆ ಘೋಷಿಸಿ ಮತ್ತೆ ತಂಡ ಸೇರಿದ ಐವರು ಕ್ರಿಕೆಟಿಗರು ಇವರೇ!ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ರಾಜೀನಾಮೆ ಘೋಷಿಸಿ ಮತ್ತೆ ತಂಡ ಸೇರಿದ ಐವರು ಕ್ರಿಕೆಟಿಗರು ಇವರೇ!

ಬೆಂಗಳೂರಿನ ಈ ಪ್ರಸಿದ್ಧ ಬೇಕರಿಗೆ ಭೇಟಿ ನೀಡಿದ್ರು ವಿರಾಟ್ ಕೊಹ್ಲಿ

ಬೆಂಗಳೂರಿನ ಈ ಪ್ರಸಿದ್ಧ ಬೇಕರಿಗೆ ಭೇಟಿ ನೀಡಿದ್ರು ವಿರಾಟ್ ಕೊಹ್ಲಿ

ಬೆಂಗಳೂರಿನ ಫ್ರೇಜರ್ ಟೌನ್ ಎಂದೇ ಕರೆಯಲ್ಪಡುವ ಪುಲಿಕೇಶಿ ನಗರದಲ್ಲಿರುವ ಥಾಮ್ಸ್ ಎಂಬ ಪ್ರಸಿದ್ಧ ಬೇಕರಿಗೆ ವಿರಾಟ್ ಕೊಹ್ಲಿ ಪಫ್ ಖರೀದಿಸಲು ಒಬ್ಬಂಟಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಚಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಬಾಯಲ್ಲಿ ಯಾವಾಗಲೂ ಈ ಬೇಕರಿಯ ಕುರಿತು ಒಳ್ಳೆಯ ವಿಮರ್ಶೆ ಬರುತ್ತಿದ್ದ ಕಾರಣ ಈ ಬೇಕರಿಯಲ್ಲಿಯೇ ಪಫ್ ತಿನ್ನಬೇಕೆಂದು ಹೊರಟಿದ್ದನ್ನು ಕೊಹ್ಲಿ ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾದಾಗ ಕೊಹ್ಲಿ ಆ ಬೇಕರಿಗೆ ಒಬ್ಬಂಟಿಯಾಗಿ ತೆರಳಿದ್ದರಂತೆ.

ಮುಖಕ್ಕೆ ಮಾಸ್ಕ್ ಧರಿಸಿ ತೆರಳಿದ್ದ ಕೊಹ್ಲಿ

ಮುಖಕ್ಕೆ ಮಾಸ್ಕ್ ಧರಿಸಿ ತೆರಳಿದ್ದ ಕೊಹ್ಲಿ

ಇನ್ನು ಫ್ರೇಜರ್ ಟೌನ್‌ನಲ್ಲಿನ ಈ ಬೇಕರಿ ಯಾವಾಗಲೂ ಜನರ ಗುಂಪಿನಿಂದ ಕೂಡಿರುವ ಸ್ಥಳವಾದ್ದರಿಂದ ವಿರಾಟ್ ಕೊಹ್ಲಿ ಸಾಮಾನ್ಯರಂತೆ ತೆರಳುವುದು ಕಷ್ಟವಾಗಿತ್ತು. ಹೀಗಾಗಿ ಕೊಹ್ಲಿ ಮುಖ ಕಾಣದ ಹಾಗೆ ಮಾಸ್ಕ್ ಧರಿಸಿ ಮತ್ತು ತಲೆಗೆ ಟೋಪಿ ಧರಿಸಿ ಬೇಕರಿಗೆ ಎಂಟ್ರಿ ಕೊಟ್ಟಿದ್ದರು. ಇನ್ನು ತಮ್ಮ ಡ್ರೈವರ್‌ನನ್ನು ಕಾರಿನಲ್ಲಿಯೇ ಇರುವಂತೆ ಹೇಳಿ ಬೇಕರಿಗೆ ಹೋದ ತಮ್ಮನ್ನು ಅಲ್ಲಿನ ಜನ ಕಂಡು ಹಿಡಿಯಲಿಲ್ಲ ಅಷ್ಟರ ಮಟ್ಟಿಗೆ ಅಲ್ಲಿ ಜನಸಂದಣಿ ಇತ್ತು ಎಂದು ಕೊಹ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ತಿಂಡಿ ಸ್ವೀಕರಿಸಿದ ನಂತರ ಭಯ ಶುರುವಾಗಿತ್ತು

ತಿಂಡಿ ಸ್ವೀಕರಿಸಿದ ನಂತರ ಭಯ ಶುರುವಾಗಿತ್ತು

ಇನ್ನೂ ಮುಂದುವರೆದು ಮಾತನಾಡಿರುವ ವಿರಾಟ್ ಕೊಹ್ಲಿ ಪಫ್ ಸ್ವೀಕರಿಸಿದ ನಂತರ ಭಯ ಶುರುವಾಗಿತ್ತು ಎಂದು ಹೇಳಿದ್ದಾರೆ. ಬೇಕರಿಯ ಬಿಲ್ ಪಾವತಿಸಲು ತಾವು ಹಣ ತೆಗೆದುಕೊಂಡು ಹೋಗದೇ ಇದ್ದ ಕಾರಣ ಕಾರ್ಡ್ ಮೂಲಕ ಹಣ ಬಿಲ್ ಪಾವತಿಸಬೇಕಿತ್ತು, ಹೀಗೆ ಮಾಡಿದರೆ ಕ್ಯಾಶಿಯರ್‌ಗೆ ತನ್ನ ಹೆಸರು ಸುಲಭವಾಗಿ ತಿಳಿಯಲಿದ್ದು ಮುಂದೇನಾಗಬಹುದು ಎಂದು ಭಯಗೊಂಡಿದ್ದೆ ಹಾಗೂ ಹಣ ತರುವಂತೆ ತನ್ನ ಡ್ರೈವರ್‌ಗೆ ಹೇಳಲು ಕರೆ ಮಾಡಲೂ ಸಹ ಸಿದ್ಧನಿದ್ದೆ ಎಂದು ಕೊಹ್ಲಿ ಅಂದಿನ ಘಟನೆ ನೆನೆದಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಧೈರ್ಯ ಮಾಡಿ ಕಾರ್ಡ್ ಮೂಲಕವೇ ಬಿಲ್ ಪಾವತಿಸಲು ಮುಂದಾಗಿದ್ದರಂತೆ ಹಾಗೂ ಕಾರ್ಡ್ ಬಳಸಿದ ಆ ಬೇಕರಿ ಕೆಲಸಗಾರ ಕೊಹ್ಲಿಯ ಹೆಸರನ್ನೂ ಸಹ ಗಮನಿಸದೇ ಬಿಲ್ ಪಾವತಿಸಿಕೊಂಡಿದ್ದ ಹಾಗೂ ಸಹಿ ಮಾಡಿದರೂ ಸಹ ಹೆಸರನ್ನು ಆತ ಗಮನಿಸಲಿಲ್ಲ ಎಂಬ ವಿಷಯವನ್ನು ಕೊಹ್ಲಿ ಬಿಚ್ಚಿಟ್ಟಿದ್ದಾರೆ.

Story first published: Wednesday, May 11, 2022, 15:25 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X