KGF 2 ಸಿನಿಮಾ ನೋಡಿ ಎಂಜಾಯ್ ಮಾಡಿದ ಆರ್‌ಸಿಬಿ ಪ್ಲೇಯರ್ಸ್: Video

ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ ಕೆಜಿಎಫ್ ಭಾಗ 2 ಸಿನಿಮಾ ನೋಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳುರು ಆಟಗಾರರು ಎಂಜಾಯ್ ಮಾಡಿದ್ದಾರೆ. ಆರ್‌ಸಿಬಿ ಆಟಗಾರರಿಗಾಗಿಯೇ ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆಯನ್ನ ಮಾಡಲಾಗಿದ್ದು, ಬಯೋಬಬಲ್ ವ್ಯವಸ್ಥೆಯಲ್ಲಿ ಹೋಟೆಲ್‌ನಲ್ಲಿಯೇ ಸಿನಿಮಾ ನೋಡುವ ಅವಕಾಶ ಕಲ್ಪಿಸಲಾಗಿತ್ತು.
ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಬಹುತೇಕ ಆಟಗಾರರು ಕೆಜಿಎಫ್ 2 ಸಿನಿಮಾ ವೀಕ್ಷಿಸಿದ್ದಾರೆ. ಆರ್‌ಸಿಬಿ ಹೆಡ್ ಕೋಚ್ ಸಂಜಯ್ ಬಂಗಾರ್ ಕೂಡ ಆರ್‌ಸಿಬಿ ಆಟಗಾರರ ಜೊತೆಯಲ್ಲಿ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ 2 ನೋಡಿದ್ದಾರೆ.
ಆರ್‌ಸಿಬಿ ಆಟಗಾರರು ಸಿನಿಮಾ ವೀಕ್ಷಣೆಯ ಕುರಿತಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್ ವೀಡಿಯೋವನ್ನ ಹರಿಬಿಟ್ಟಿದ್ದು, ಆಟಗಾರರು ಸಿನಿಮಾ ವೀಕ್ಷಿಸುತ್ತಿರುವ ವೀಡಿಯೋ ಹೆಚ್ಚು ಶೇರ್ ಆಗಿದೆ. ವೀಡಿಯೋ ಬಿಡುಗಡೆಗೊಂಡ 45 ನಿಮಿಷಗಳಲ್ಲಿ 1.20 ಲಕ್ಷದಷ್ಟು ಲೈಕ್ಸ್ ಬಂದಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಇನ್ನು ಸಿನಿಮಾ ವೀಕ್ಷಣೆಯ ಜೊತೆಗೆ ಕೆಜಿಎಫ್ ಸಿನಿಮಾದಲ್ಲಿ ಯಶ್ ಬಳಸಿದ್ದ ಗನ್ ರೀತಿಯ ಮಾಡೆಲ್ ಅನ್ನು ಸ್ಕ್ರೀನಿಂಗ್ ಬಳಿ ಇಡಲಾಗಿತ್ತು. ಈ ಗನ್ ಅನ್ನು ಹಿಡಿದುಕೊಂಡು ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಸೇರಿದಂತೆ ಉಳಿದ ಆಟಗಾರರು ಫೋಟೋಗೆ ಪೋಸ್ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications