RCB vs LSG: ಡ್ರೀಮ್ ಫ್ಯಾಂಟೆಸಿ ಟೀಂ, ಯಾವ ಆಟಗಾರನಿಗೆ ಹೆಚ್ಚು ಬೇಡಿಕೆ?

ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ (ಏ.19) ನಡೆಯಲಿರುವ ಟೈಟನ್ಸ್ ಫೈಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗುತ್ತಿವೆ. ಗೆಲುವಿನ ಹುರುಪಿನಲ್ಲಿರುವ ಫಾಫ್ ಡುಪ್ಲೆಸಿಸ್ ಪಡೆ ಬಲಿಷ್ಠ ಲಕ್ನೋ ವಿರುದ್ಧ ಕಾದಾಟಕ್ಕಿಳಿಯಲಿದೆ.
ಪ್ರಸಕ್ತ ಸೀಸನ್‌ನಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಅಂಗಳದಲ್ಲಿ ಎದುರಾಗುತ್ತಿವೆ. ಹೀಗಿರುವಾಗ ಎರಡು ತಂಡಗಳು ಬಲಾಬಲ ಅರಿತು ರಣತಂತ್ರದೊಂದಿಗೆ ಮೈದಾನ ಪ್ರವೇಶಿಸಲಿದೆ.
ಲಕ್ನೋ ಸೂಪರ್ ಜೈಂಟ್ಸ್ ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದು, ಆಡಿರುವ 6 ಪಂದ್ಯಗಳಲ್ಲಿ 4 ಪಂದ್ಯ ಜಯಿಸಿದ್ದು, 2 ಪಂದ್ಯಗಳಲ್ಲಿ ಸೋಲನ್ನ ಕಂಡಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದ್ದು, ಲಕ್ನೋ ರೀತಿಯಲ್ಲಿ 6 ಪಂದ್ಯಗಳಲ್ಲಿ 4 ಪಂದ್ಯ ಜಯಿಸಿದ್ದು, 2 ಪಂದ್ಯಗಳಲ್ಲಿ ಪರಾಜಯಗೊಂಡಿದೆ. ಉಭಯ ತಂಡಗಳು 8 ಪಾಯಿಂಟ್ಸ್ ಹೊಂದಿವೆ.

ಗೆಲುವಿನ ಆತ್ಮವಿಶ್ವಾಸದಲ್ಲಿ ಲಕ್ನೋ ಮತ್ತು ಆರ್‌ಸಿಬಿ
ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡವು ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 18 ರನ್‌ಗಳಿಂದ ಗೆದ್ದು ಬೀಗಿತು. ರಾಹುಲ್ ತನ್ನ 100ನೇ ಐಪಿಎಲ್ ಪಂದ್ಯದಲ್ಲಿ ಶತಕ ಸಿಡಿಸಿದ್ರೆ, ಮನೀಶ್ ಪಾಂಡೆ 38 ರನ್ ಕಲೆಹಾಕಿದ್ರು.
ಆರ್‌ಸಿಬಿ ಕೂಡ ಕಳೆದ ಪಂದ್ಯ ವಿಜಯದ ಪತಾಕೆ ಹಾರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 16 ರನ್‌ಗಳ ಜಯ ಸಾಧಿಸಿತು. ಗ್ಲೆನ್ ಮ್ಯಾಕ್ಸ್ ವೆಲ್ 55 ರನ್ ಹಾಗೂ ದಿನೇಶ್ ಕಾರ್ತಿಕ್ ಅಜೇಯ 66ರನ್‌ಗಳ ನೆರವಿನಿಂದ ಡೆಲ್ಲಿ ತಂಡದ ವಿರುದ್ಧ ಗೆಲುವು ಕಂಡಿತು.
ಕೆಕೆಆರ್ ವಿರುದ್ಧ ರಾಜಸ್ಥಾನ್ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಎರಡೂ ರಾಯಲ್ಸ್ ಪಾಲು!

ಹವಾಮಾನ ಮತ್ತು ಪಿಚ್ ರಿಪೋರ್ಟ್
ಸ್ಟೇಡಿಯಂ ಸುತ್ತಮುತ್ತ 33-35 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರಲಿದ್ದು, 39-41 ಪರ್ಸೆಂಟ್‌ನಷ್ಟು ಹ್ಯುಮಿಡಿಟಿ ಇರಲಿದೆ. ಮಳೆ ಬರುವ ಯಾವುದೇ ವಾತಾವರಣ ಇರುವುದಿಲ್ಲ.
ಇನ್ನು ಡಿ.ವೈ ಪಾಟೀಲ್ ಗ್ರೌಂಡ್ ಪಿಚ್ ಹೆಚ್ಚಿನ ಬೌನ್ಸ್‌ನಿಂದ ಕೂಡಿದ್ದು ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಈ ಪಂದ್ಯದಲ್ಲಿ 160ರಿಂದ 170ರನ್ ನಿರೀಕ್ಷಿಸಬಹುದಾಗಿದ್ದು, ಇಲ್ಲಿನ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 175 ರನ್ ಆಗಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡದ ಗೆಲುವಿನ ಸರಾಸರಿ ಹೆಚ್ಚಿದ್ದು, ಚೇಸ್ ಮಾಡಿದ ತಂಡಗಳು ಶೇಕಡಾ 60ರಷ್ಟು ಗೆದ್ದಿದೆ.

ಲಕ್ನೋ ಮತ್ತು ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11
ಲಕ್ನೋ ಸೂಪರ್ ಜೈಂಟ್ಸ್: ಕೆ.ಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೋಯ್ನಿಸ್, ಆಯುಶ್ ಬದೋನಿ, ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್

ಫ್ಯಾಂಟೆಸಿ ಡ್ರೀಂ ಟೀಂ 1
ಡ್ರೀಂ ಟೀಂನಲ್ಲಿ ಇಂದು ಪ್ರಮುಖ ಆಟಗಾರರಾದ ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಹರ್ಷಲ್ ಪಟೇಲ್‌ಗೆ ಹೆಚ್ಚಿನ ಬೇಡಿಕೆಯಿದೆ. ಇದ್ರ ಜೊತೆಗೆ ಯಾವೆಲ್ಲಾ ಆಟಗಾರರು ಡ್ರೀಂ ಟೀಮ್‌ನಲ್ಲಿದ್ದಾರೆ ಈ ಕೆಳಗೆ ನೋಡಿ.
ನಾಯಕ - ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್
ಉಪನಾಯಕ - ಕೆ.ಎಲ್ ರಾಹುಲ್, ಹರ್ಷಲ್ ಪಟೇಲ್
ಕೀಪರ್ಸ್ - ಕೆ.ಎಲ್ ರಾಹುಲ್ (ಉಪನಾಯಕ), ಅನುಜ್ ರಾವತ್
ಬ್ಯಾಟ್ಸ್‌ಮನ್‌ಗಳು - ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್, ಮನೀಶ್ ಪಾಂಡೆ, ದೀಪಕ್ ಹೂಡಾ
ಆಲ್ ರೌಂಡರ್‌ಗಳು - ಜೇಸನ್ ಹೋಲ್ಡರ್, ಗ್ಲೆನ್ ಮ್ಯಾಕ್ಸ್‌ವೆಲ್
ಬೌಲರ್‌ಗಳು - ಅವೇಶ್ ಖಾನ್, ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್

ಫ್ಯಾಂಟೆಸಿ ಡ್ರೀಂ ಟೀಂ 2
ವಿಕೆಟ್ ಕೀಪರ್ಸ್ - ಕೆ.ಎಲ್ ರಾಹುಲ್, ಅನುಜ್ ರಾವತ್, ಕ್ವಿಂಟನ್ ಡಿ ಕಾಕ್
ಬ್ಯಾಟ್ಸ್‌ಮನ್‌ಗಳು - ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಾರ್ಕಸ್ ಸ್ಟೋಯ್ನಿಸ್
ಆಲ್ ರೌಂಡರ್ - ಗ್ಲೆನ್ ಮ್ಯಾಕ್ಸ್‌ವೆಲ್
ಬೌಲರ್‌ಗಳು - ಅವೇಶ್ ಖಾನ್, ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್ (ಉಪನಾಯಕ), ರವಿ ಬಿಷ್ಣೋಯ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications