RCB vs RR Head To Head: ಆರ್‌ಸಿಬಿ vs ಆರ್‌ಆರ್ ಬಲಾಬಲ, ಹೆಡ್ ಟು ಹೆಡ್ ರೆಕಾರ್ಡ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಂಗಳವಾರ (ಏ.04) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ರಾಜಸ್ತಾನ್ ರಾಯಲ್ಸ್ (ಆರ್‌ಆರ್) ಕಾದಾಟ ನಡೆಸಲಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ 13ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಆರ್‌ಸಿಬಿ ತಲಾ ಒಂದು ಗೆಲುವು ಹಾಗೂ ಸೋಲನ್ನ ಕಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೂರು ವಿಕೆಟ್‌ಗಳ ಜಯ ಸಾಧಿಸಿತು.
ಅತ್ತ ಸಂಜು ಸ್ಯಾಮನ್ಸ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ಈ ಸೀಸನ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ಆಡಿರುವ ಎರಡು ಪಂದ್ಯಗಳನ್ನ ಜಯಿಸಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ 61 ರನ್‌ಗಳಿಂದ ಪಂದ್ಯ ಜಯಿಸಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ 23ರನ್‌ಗಳಿಂದ ಪಂದ್ಯ ಗೆದ್ದುಕೊಂಡಿದೆ.

ಮುಂಬೈ ವಿರುದ್ಧ ಅಬ್ಬರಿಸಿದ್ದ ಜಾಸ್ ಬಟ್ಲರ್
ಮುಂಬೈ ಇಂಡಿಯನ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ಓಪನರ್ ಜಾಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್ ನಡೆಸಿ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದ್ರು. 68 ಎಸೆತಗಳಲ್ಲಿ 100 ರನ್ ಕಲೆಹಾಕಿದ ಬಟ್ಲರ್ ಜೊತೆಗೆ ಸಂಜು ಸ್ಯಾಮ್ಸನ್ 30, ಶಿಮ್ರೋನ್ ಹೆಟ್ಮಾಯರ್ 35 ರನ್ ಕಲೆಹಾಕುವ ಮೂಲಕ 8 ವಿಕೆಟ್ ಕಳೆದುಕೊಂಡು 193 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅರ್ಧಶತಕದ ಹೊರತಾಗಿಯೂ 170 ರನ್‌ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ರಾಜಸ್ತಾನ್ 23ರನ್‌ಗಳ ಗೆಲುವು ಸಾಧಿಸಿದೆ.
ಆರ್ಥಿಕ ಸಂಕಷ್ಟದಿಂದ ಕ್ರಿಕೆಟ್ ಅನ್ನೇ ತ್ಯಜಿಸಲು ಹೊರಟ್ಟಿದ್ದ ವೈಭವ್ ಅರೋರಾ: ಪಂಜಾಬ್ ಪರ ಮಿಂಚಿನ ಎಂಟ್ರಿ

ಕೆಕೆಆರ್ ಪರ ವಹಿಂದು ಹಸರಂಗ ಮ್ಯಾಜಿಕ್
ಕಳೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಎದುರಾಳಿಯನ್ನ 128 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಕೆಕೆಆರ್ ಪರ ಆ್ಂಡ್ರೆ ರಸ್ಸೆಲ್ 25 ರನ್‌ಗಳಿಸಿದ್ದೇ ಗರಿಷ್ಠ ರನ್ ಆಗಿತ್ತು. ಬೇರೆ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ 20ರನ್ ಗಡಿ ದಾಟಲಿಲ್ಲ. ಶ್ರೀಲಂಕಾ ಮೂಲದ ಸ್ಪಿನ್ನರ್ ವಹಿಂದು ಹಸರಂಗ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದರು.
ಈ ಗುರಿ ಬೆನ್ನತ್ತಿದ ಆರ್‌ಸಿಬಿ ಟಾಪ್ ಆರ್ಡರ್ ಕುಸಿತದ ನಡುವೆ ಶಬಾಜ್ ಅಹ್ಮದ್ 27, ದಿನೇಶ್ ಕಾರ್ತಿಕ್ ಅಜೇಯ 14 ರನ್‌ಗಳ ನೆರವಿನಿಂದ ಆರ್‌ಸಿಬಿ ಮೂರು ವಿಕೆಟ್‌ಗಳ ಗೆಲುವು ದಾಖಲಿಸಿತು.
2020-21 ನೇ ಸಾಲಿನ ಕ್ರೀಡಾ ಪ್ರಶಸ್ತಿ ಪ್ರಕಟ: 15 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ

ಆರ್‌ಆರ್ ವಿರುದ್ಧ ಮೇಲುಗೈ ಸಾಧಿಸಿರುವ ಆರ್‌ಸಿಬಿ
ಹೆಡ್ ಟು ಹೆಡ್ ರೆಕಾರ್ಡ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಹಾಗೂ ಆರ್‌ಸಿಬಿ ತಂಡವು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆರ್‌ಸಿಬಿ 12 ಪಂದ್ಯಗಳಲ್ಲಿ ಗೆಲುವನ್ನ ಸಾಧಿಸಿದ್ರೆ, ರಾಜಸ್ತಾನ್ ರಾಯಲ್ಸ್ 10 ಪಂದ್ಯಗಳಲ್ಲಿ ಗೆದ್ದಿದೆ. 2 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.
ಇನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಉಭಯ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದು, ಆರ್‌ಸಿಬಿ ಪಂದ್ಯ ಜಯಿಸಿದೆ. ಕಳೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಆರ್‌ಸಿಬಿಯೇ 4 ಪಂದ್ಯ ಗೆದ್ದಿದ್ದು, 1 ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಂದಿಲ್ಲ. ಅದ್ರಲ್ಲೂ ಕಳೆದ ಸೀಸನ್‌ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಿದೆ.

RCB ವರ್ಸಸ್ RR ಟಾಪ್ ಪ್ಲೇಯರ್ಸ್
ಗರಿಷ್ಠ ಸ್ಕೋರ್
ಆರ್‌ಸಿಬಿ: ದೇವದತ್ ಪಡಿಕ್ಕಲ್ (101)
ಆರ್‌ಆರ್: ಅಜಿಂಕ್ಯ ರಹಾನೆ (103)
ಬೆಸ್ಟ್ ಬ್ಯಾಟಿಂಗ್ ಸರಾಸರಿ
ಆರ್‌ಸಿಬಿ: ದೇವದತ್ ಪಡಿಕ್ಕಲ್ (73.67)
ಆರ್‌ಆರ್: ಎವಿನ್ ಲಿವಿಸ್ (58)
ಅತಿ ಹೆಚ್ಚು ರನ್
ಆರ್‌ಸಿಬಿ: ವಿರಾಟ್ ಕೊಹ್ಲಿ (579 ರನ್)
ಆರ್‌ಆರ್: ಅಜಿಂಕ್ಯ ರಹಾನೆ (347 ರನ್)
ಅತಿ ಹೆಚ್ಚು ವಿಕೆಟ್
ಆರ್‌ಸಿಬಿ: ಯುಜವೇಂದ್ರ ಚಹಾಲ್ (18)
ಆರ್‌ಆರ್: ಶ್ರೇಯಸ್ ಗೋಪಾಲ್ (14)
ಬೆಸ್ಟ್ ಬೌಲಿಂಗ್
ಆರ್‌ಸಿಬಿ: ಅನಿಲ್ ಕುಂಬ್ಳೆ (5/5)
ಆರ್‌ಆರ್: ಶ್ರೇಯಸ್ ಗೋಪಾಲ್ (4/16)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications