Vaibhav Arora : ಆರ್ಥಿಕ ಸಂಕಷ್ಟದಿಂದ ಕ್ರಿಕೆಟ್ ಅನ್ನೇ ತ್ಯಜಿಸಲು ಹೊರಟ್ಟಿದ್ದ ವೈಭವ್ ಅರೊರಾ: ಪಂಜಾಬ್ ಪರ ಮಿಂಚಿನ ಎಂಟ್ರಿ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಕ್ರಿಕೆಟ್ ಜಗತ್ತು ಹೊಸ ಅರುಣೋದಯಕ್ಕೆ ಸಾಕ್ಷಿಯಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಯುವ ವೇಗದ ಬೌಲರ್ ವೈಭವ್ ಅರೊರಾ ಈ ಪಂದ್ಯದಲ್ಲಿ ಶುಭಾರಂಭ ಮಾಡಿದರು.
ಅವರ ಅತ್ಯುತ್ತಮ ಸ್ವಿಂಗ್ ಬೌಲಿಂಗ್‌ನಿಂದ ಅವರು ಸಿಎಸ್‌ಕೆ ಬೌಲರ್‌ಗಳಿಗೆ ನಿರಂತರವಾಗಿ ಸವಾಲು ಹಾಕಲು ಸಾಧ್ಯವಾಯಿತು. ಪಂದ್ಯದಲ್ಲಿ ಅರೊರಾ ಎರಡು ವಿಕೆಟ್ ಪಡೆದರು. ವೇಗಿ ನಾಲ್ಕು ಓವರ್ ಗಳಲ್ಲಿ 21 ರನ್ ನೀಡಿ ಎರಡು ವಿಕೆಟ್ ಪಡೆದರು.

ಆರಂಭಿಕ ಪಂದ್ಯದಲ್ಲೇ ಅಬ್ಬರಿಸಿದ ಅರೊರಾ
ಚೆನ್ನೈ ಸೂಪರ್ ಕಿಂಗ್ಸ್‌ನ ಅಪಾಯಕಾರಿ ಆರಂಭಿಕ ರಾಬಿನ್ ಉತ್ತಪ್ಪ ಮತ್ತು ಇಂಗ್ಲಿಷ್ ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು ಅರೋರಾ ಔಟ್ ಮಾಡಿದರು. 10 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 13 ರನ್ ಗಳಿಸಿದ್ದ ಉತ್ತಪ್ಪ, ಮಯಾಂಕ್ ಅಗರ್ವಾಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಇದ್ರ ಬೆನ್ನಲ್ಲೇ ಐದನೇ ಓವನ್‌ನಲ್ಲಿ ಖಾತೆ ತೆರೆಯುವ ಮುನ್ನ ಆಲ್‌ರೌಂಡರ್ ಮೊಯಿನ್ ಅಲಿ ಬೌಲ್ಡ್ ಆದರು.
CSK ಬಹು ಕೋಟಿಯ ಪ್ಲೇಯರ್ 'ದೀಪಕ್ ಚಹಾರ್' ಏಪ್ರಿಲ್ 25ಕ್ಕೆ ತಂಡಕ್ಕೆ ಸೇರ್ಪಡೆ

ಸಂದೀಪ್ ಶರ್ಮಾ ಜಾಗದಲ್ಲಿ ಸ್ಥಾನ ಪಡೆದ ವೈಭವ್
ಅನುಭವಿ ಐಪಿಎಲ್ ವೇಗಿ ಸಂದೀಪ್ ಶರ್ಮಾ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟ ನಂತರ ಸಿಎಸ್‌ಕೆ ವಿರುದ್ಧ ಪಂಜಾಬ್‌ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ವೈಭವ್ ಅರೊರಾ ಸ್ಥಾನ ಪಡೆದಿದ್ದಾರೆ. ಸಿಕ್ಕ ಅವಕಾಶದಲ್ಲಿಯೇ ಮಿಂಚಿದ ಅರೋರಾ ಸಿಎಸ್‌ಕೆಯ ಪ್ರಮುಖ ರನ್ ಸ್ಕೋರರ್‌ಗಳನ್ನೇ ಪೆವಿಲಿಯನ್‌ಗೆ ಅಟ್ಟಿದರು. ಮೊದಲ ಪಂದ್ಯದಲ್ಲಿ ಮಿಂಚಿದ ಬಲಗೈ ವೇಗದ ಬೌಲರ್ ವೈಭವ್ ಅರೊರಾ ಬಗ್ಗೆ ಈ ಕೆಳಗೆ ಇನ್ನಷ್ಟು ತಿಳಿಯಿರಿ.

ಹಿಮಾಚಲ ಪ್ರದೇಶ ಪರ ಆಡುವ ಬೌಲರ್
ವೈಭವ್ ಅರೊರಾ ಡಿಸೆಂಬರ್ 14, 1997 ರಂದು ಜನಿಸಿದ್ದು, ಈಗ ಅವರಿಗೆ 24 ವರ್ಷ. ಇವರು ಹಿಮಾಚಲ ಪ್ರದೇಶ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ. 2019 ರಲ್ಲಿ ಅರೊರಾ ಸೌರಾಷ್ಟ್ರ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲದೆ ಕಳೆದ ವರ್ಷ ಛತ್ತೀಸ್‌ಗಢ ವಿರುದ್ಧ ತನ್ನ ಚೊಚ್ಚಲ ಟಿ20 ಪಂದ್ಯವನ್ನು ಆಡಿದರು.

ಪಂಜಾಬ್‌ಗೆ ನೆಟ್ ಬೌಲರ್ ಆಗಿದ್ದ ವೈಭವ್ ಅರೋರಾ
ವೈಭವ್ ಅರೊರಾ 2020 ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ನೆಟ್ ಬೌಲರ್ ಆಗಿದ್ದರು. ಅವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಸಹ ಆಡಿದ್ದರು. ಆದ್ರೆ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಲು ಎರಡು ವರ್ಷಗಳ ಕಾಲ ಕಾಯಬೇಕಾಯಿತು.
ಈ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಅರೋರಾಗೆ ಹೆಚ್ಚಿನ ಬೇಡಿಕೆ ಇತ್ತು. ಮಾಜಿ ಫ್ರಾಂಚೈಸಿ ಕೆಕೆಆರ್ ಕೂಡ ವೈಭವ್ ಅರೋರಾ ಖರೀದಿಗೆ ಮುಗಿಬಿದ್ದಿತು. ಅಂತಿಮವಾಗಿ ಅರೊರಾ ಅವರನ್ನು ಪಂಜಾಬ್ ಕಿಂಗ್ಸ್ 2 ಕೋಟಿ ರೂ.ಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು.
CSK vs PBKS: ನಿಮ್ಮ ಡ್ರೀಮ್ ಟೀಮ್ ಗೆಲ್ಲಬೇಕೆಂದರೆ ಈ ಮೂವರನ್ನು ಹೊರಗಿಡಿ; ಈತನಿಗೆ ನಾಯಕತ್ವ ನೀಡಿ

ಅರ್ಷ್‌ದೀಪ್ ಜೊತೆಗೆ ಉತ್ತಮ ಬಾಂಧವ್ಯ
ವೈಭವ್ ಅರೊರಾ ಪ್ರಸ್ತುತ ಜೂನಿಯರ್ ಹಂತದಿಂದ ಪಂಜಾಬ್ ಕಿಂಗ್ಸ್‌ನ ಅತ್ಯಂತ ಗಮನಾರ್ಹ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರೊಂದಿಗೆ ಆಡುತ್ತಿದ್ದಾರೆ. ಇಬ್ಬರ ನಡುವೆ ತುಂಬಾ ಆತ್ಮೀಯ ಸ್ನೇಹವಿದೆ. ಕಳೆದ ವರ್ಷ ಹಣಕಾಸಿನ ತೊಂದರೆಯಿಂದಾಗಿ ಅರೋರಾ ಕ್ರಿಕೆಟ್ ಅನ್ನು ಕೊನೆಗೊಳಿಸಲು ಯೋಜಿಸಿದ್ದರು. ಆದ್ರೆ ಆಟಗಾರನ ಬಾಲ್ಯದ ಕೋಚ್ ರವಿ ವರ್ಮಾ ಅವರನ್ನು ತಡೆದಿದ್ದಲ್ಲದೆ, ಪ್ರೋತ್ಸಾಹಿಸಿದರು. ಇದರ ಪರಿಣಾಮವೇ ಪಂಜಾಬ್ ಕಿಂಗ್ಸ್ ಮೂಲಕ ಐಪಿಎಲ್‌ಗೆ ಎಂಟ್ರಿಕೊಡುವ ಮೂಲಕ ತನ್ನ ಕನಸನ್ನ ನನಸಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications