ಸಿಎಸ್‌ಕೆ ತಂಡದಲ್ಲಿ ರೀಟೈನ್ ಆದ ಮೊದಲ ಪ್ಲೇಯರ್ ಜಡೇಜಾ: ಧೋನಿ, ಮೋಯಿನ್ ಅಲಿ, ರುತುರಾಜ್ ಆಯ್ಕೆ

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ವರು ಆಟಗಾರರನ್ನ ರೀಟೈನ್ ಮಾಡಿಕೊಂಡಿದೆ. ಎಲ್ಲರಿಗೂ ತುಂಬಾ ಆಶ್ಚರ್ಯ ಮೂಡಿಸಿರುವ ಆಯ್ಕೆಯಾಗಿ ರವೀಂದ್ರ ಜಡೇಜಾ ರೀಟೈನ್ ಆದ ಮೊದಲ ಪ್ಲೇಯರ್ ಆಗಿ ಹೊರಹೊಮ್ಮಿದ್ದು, ಜಡ್ಡು 16 ಕೋಟಿಗೆ ರೀಟೈನ್ ಆಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ತಲ ಮಹೇಂದ್ರ ಸಿಂಗ್ ಧೋನಿ ರೀಟೈನ್ ಆದ ಎರಡನೇ ಆಟಗಾರನಾಗಿದ್ದು, 12 ಕೋಟಿ ರೂಪಾಯಿಗೆ ಧೋನಿ ರೀಟೈನ್ ಆಗಿರುವುದು ಚೆನ್ನೈ ಅಭಿಮಾನಿಗಳಲ್ಲಿ ಖುಷಿ ತರಿಸಿದೆ.
ಸಿಎಸ್‌ಕೆ ಮೂರು ಮತ್ತು ನಾಲ್ಕನೇ ಆಟಗಾರರ ರೀಟೈನ್ ಆಗಿ ಮೋಯಿನ್ ಅಲಿ ಹಾಗೂ ರುತುರಾಜ್ ಗಾಯಕ್ವಾಡ್‌ರನ್ನ ಆಯ್ಕೆ ಮಾಡಿಕೊಂಡಿದೆ. ಮೋಯಿನ್ ಅಲಿಯನ್ನ 8 ಕೋಟಿ ರೂಪಾಯಿಗೆ ರೀಟೈನ್ ಮಾಡಿಕೊಳ್ಳಲಾಗಿದ್ದು, ರುತುರಾಜ್ ಗಾಯಕ್ವಾಡ್‌ರನ್ನ ಸಿಎಸ್‌ಕೆ 6 ಕೋಟಿ ರೂಪಾಯಿಗೆ ರೀಟೈನ್ ಮಾಡಿದೆ.
ಇನ್ನು ಸಿಎಸ್‌ಕೆ ತಂಡದಲ್ಲಿ ರಾಬಿನ್ ಉತ್ತಪ್ಪ, ಫಾಫ್ ಡುಪ್ಲೆಸಿಸ್ ಅಂಬಟಿ ರಾಯುಡು ರಂತಹ ಅನುಭವಿ ಆಟಗಾರರನ್ನ ಹರಾಜಿಗೆ ಬಿಡಲಾಗಿದ್ದು, ಸಿಎಸ್‌ಕೆ 48 ಕೋಟಿ ರೂಪಾಯಿಗಳ ಪರ್ಸ್‌ನೊಂದಿಗೆ ಹರಾಜನ್ನು ಪ್ರವೇಶಿಸಲಿದೆ.
''ರವೀಂದ್ರ ಜಡೇಜಾ, ಎಂಎಸ್ ಧೋನಿ ಮತ್ತು ಮೊಯಿನ್ ಅಲಿ ಮೂವರನ್ನು ಬದಲಾಯಿಸುವುದು ಕಷ್ಟ ಮತ್ತು ಅದಕ್ಕಾಗಿಯೇ ಅವರನ್ನು ಉಳಿಸಿಕೊಳ್ಳಲಾಗಿದೆ. ಫಾಫ್, ರಾಯುಡು ಮತ್ತು ಬ್ರಾವೋ ಅವರಂತಹ ಹುಡುಗರನ್ನು ಬಿಡುವುದು ತುಂಬಾ ಕಷ್ಟಕರವಾಗಿತ್ತು'' ಎಂದು ಲಕ್ಷ್ಮೀಪತಿ ಬಾಲಾಜಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications