Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS VS CSK: ಹೆಡ್ ಪ್ರೊಟೆಕ್ಷನ್ ಧರಿಸಿ ಬೌಲಿಂಗ್ ಮಾಡಿದ ರಿಷಿ ಧವನ್

Rishi Dhawan

ಆರು ವರ್ಷಗಳ ಬಳಿಕ ಐಪಿಎಲ್‌ಗೆ ಮರಳಿದ ರಿಷಿ ಧವನ್ ಮುಂಬೈನ ವಾಂಖೆಡೆ ಮೈದಾನದಲ್ಲಿ ತಮ್ಮ ವಿಭಿನ್ನ ರೀತಿಯ ಶಿರಾಸ್ತ್ರ ಮೂಲಕ ಗಮನ ಸೆಳೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 4 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು.

188 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ಆರಂಭದಲ್ಲೇ ಓಪನರ್ ರಾಬಿನ್ ಉತ್ತಪ್ಪ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಿಚೆಲ್ ಸ್ಯಾಂಟ್ನರ್ ಕೇವಲ 9ರನ್‌ಗೆ ಅರ್ಷ್‌ದೀಪ್‌ಗೆ ವಿಕೆಟ್ ಒಪ್ಪಿಸಿದ್ರು.

ಐದನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ರಿಷಿ ಧವನ್ ವಿಭಿನ್ನ ರಕ್ಷಣಾ ಸಾಧನದ ಮೂಲಕ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಆಶ್ಚರ್ಯಕ್ಕೆ ಕಾರಣರಾದ್ರು. ಇತ್ತೀಚಿನ ದಿನಗಳಲ್ಲಿ ಬ್ಯಾಟರ್‌ಗಳ ವಿಭಿನ್ನ ರೀತಿಯ ಶಾಟ್ ಪ್ರಯತ್ನ ಹಾಗೂ ಹೊಡಿ-ಬಡಿ ಆಟ ಹೆಚ್ಚಾಗಿರುವುದರಿಂದ ಬೌಲರ್ಸ್ ಹಾಗೂ ಅಂಪೈರ್ಸ್ ರಕ್ಷಣಾ ಸಾಧನಗಳನ್ನ ಬಳಸುವುದನ್ನ ಕಾಣಬಹುದಾಗಿದೆ.

ರಿಷಿ ಧವನ್ ಕೂಡ ವಿಭಿನ್ನ ರೀತಿಯಲ್ಲಿ ಮುಖದ ಮೇಲಿನ ರಕ್ಷಣಾ ಸಾಧಕವನ್ನು ಬಳಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ರು. ಈ ಹಿಂದೆ ರಣಜಿ ಟೂರ್ನಿಯಲ್ಲಿ ತಲೆಗೆ ಪೆಟ್ಟು ಬಿದ್ದ ಪರಿಣಾಮ ರಿಷಿ ಧವನ್ ತಲೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅದಾದ ಬಳಿಕ ಬೌಲರ್‌ ಸಾಕಷ್ಟು ಸಮಯ ಕ್ರಿಕೆಟ್‌ನಿಂದ ಹೊರಗುಳಿದಿದ್ದರು.

ರಿಷಿ ಧವನ್ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಶಿವಂ ದುಬೆ(8) ಹಾಗೂ ಕೊನೆಯ ಓವರ್‌ನಲ್ಲಿ ಎಂ.ಎಸ್ ಧೋನಿಯಂತಹ ಪ್ರಮುಖ ವಿಕೆಟ್ ಪಡೆಯುವ ಮೂಲಕ ಮಿಂಚಿದ್ರು.

ಪೊಲ್ಲಾರ್ಡ್ ಗೆ ಕೃನಾಲ್ ಪಾಂಡ್ಯ ಕಿಸ್ ಮಾಡಿದ್ದೇ ಈಗ ದೊಡ್ಡ ಅಪರಾಧ;ಯಾಕೆ ಗೊತ್ತಾ? | Oneindia Kannada

Story first published: Tuesday, April 26, 2022, 9:45 [IST]
Other articles published on Apr 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+