Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR vs PBKS: ಪಂಜಾಬ್ ಕಿಂಗ್ಸ್ ವಿರುದ್ಧ 190ರನ್ ಚೇಸ್ ಮಾಡಿ ಗೆದ್ದ ರಾಜಸ್ತಾನ್

RR

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 15ನೇ ಸೀಸನ್‌ನ 52ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ನೀಡಿದ್ದ 190ರನ್‌ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ರಾಜಸ್ತಾನ್ ರಾಯಲ್ಸ್‌ ಇನ್ನೆರಡು ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್‌ಗಳ ಗೆಲುವು ದಾಖಲಿಸಿದೆ.

ರಾಜಸ್ತಾನ್‌ನ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಮೋಘ ಆಟದಿಂದಾಗಿ ಉತ್ತಮ ಆರಂಭ ಪಡೆದ ರಾಜಸ್ತಾನ್ ಸೀಸನ್‌ನಲ್ಲಿ ಮೊದಲ ಬಾರಿಗೆ ಚೇಸ್ ಮಾಡಿ ಪಂದ್ಯವನ್ನ ಗೆದ್ದು ಬೀಗಿದೆ. ಯಶಸ್ವಿ ಜೈಸ್ವಾಲ್ 41 ಎಸೆತಗಳಲ್ಲಿ 68 ರನ್ ಕಲೆಹಾಕುವ ಮೂಲಕ ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ದಾಖಲಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು.

ಜೈಸ್ವಾಲ್‌ಗೆ ಮೊದಲ ವಿಕೆಟ್‌ಗೆ ಸಾಥ್ ಕೊಟ್ಟಿದ್ದ ಜಾಸ್‌ ಬಟ್ಲರ್ ಆರಂಭದಲ್ಲೇ ವೇಗವಾಗಿ 16 ಎಸೆತಗಳಲ್ಲಿ 30 ರನ್‌ ಕಲೆಹಾಕಿ ರಬಾಡಗೆ ವಿಕೆಟ್ ಒಪ್ಪಿಸಿದ್ರು. ಸಂಜು ಸ್ಯಾಮ್ಸನ್ 23ರನ್ ಸಿಡಿಸಿ ರಿಷಿ ಧವನ್ ಬೌಲಿಂಗ್‌ನಲ್ಲಿ ಧವನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ರು. ನಾಲ್ಕನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ 31ರನ್‌ಗಳ ಕೊಡುಗೆ ನೀಡಿದ್ರು. ಕೊನೆಯಲ್ಲಿ ಶಿಮ್ರೊನ್ ಹೆಟ್ಮೆಯರ್ 16 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ನೆರವಿನಿಂದ ಅಜೇಯ 31 ರನ್‌ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಈ ಪಂದ್ಯದ ಗೆಲುವಿನೊಂದಿಗೆ ರಾಜಸ್ತಾನ್ ಪಾಯಿಂಟ್ಸ್ ಟೇಬಲ್‌ನಲ್ಲಿ 14 ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿತು. ಪಂಜಾಬ್ ಪರ ಜಾನಿ ಬೈಸ್ಟ್ರೋವ್ 56, ಧವನ್ 12, ರಾಜಪಕ್ಷೆ 27, ಮಯಾಂಕ್ ಅಗರ್ವಾಲ್ 15, ಜಿತೇಶ್ ಶರ್ಮಾ 38, ಲಿವಿಂಗ್‌ಸ್ಟೋನ್ 22 ರನ್ ಕಲೆಹಾಕಿದ್ದಾರೆ.

ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ ಹಿನ್ನಡೆ ಅನುಭವಿಸಿದ್ದ ಪಂಜಾಬ್ ಪರ ಜಿತೇಶ್ ಶರ್ಮಾ, ಲಿವಿಂಗ್‌ಸ್ಟೋನ್ ಸ್ಫೋಟಕ ಆಟವಾಡಿ ತಂಡಕ್ಕೆ ಸವಾಲಿನ ಮೊತ್ತವನ್ನ ತಂದುಕೊಟ್ಟರು. ಆದ್ರೆ ಈ ಸ್ಕೋರ್‌ ಸೋಲಿನಿಂದಾಗಿ ವ್ಯರ್ಥಗೊಂಡಿತು.

ರಾಜಸ್ತಾನ್ ರಾಯಲ್ಸ್ ಪರ ಯುಜವೇಂದ್ರ 4 ಓವರ್‌ಗಳಲ್ಲಿ 28 ರನ್‌ಗಳನ್ನ ನೀಡಿ 3 ವಿಕೆಟ್‌ ಕಬಳಿಸಿದ್ದಾರೆ. ಪ್ರಸಿದ್ಧ ಕೃಷ್ಣ, ಆರ್‌. ಅಶ್ವಿನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಮಯಾಂಕ್ ಅಗರ್ವಾಲ್(ನಾಯಕ), ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ಸಂದೀಪ್ ಶರ್ಮಾ

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ನಾಯಕ/ ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್

Story first published: Saturday, May 7, 2022, 19:41 [IST]
Other articles published on May 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+