CSK VS RCB: ಆರ್‌ಸಿಬಿ ವಿರುದ್ಧ ಸಿಡಿಯಲೇಬೇಕಿದೆ ರುತುರಾಜ್ ಗಾಯಕ್ವಾಡ್

ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎಡವಟ್ಟು ಮುಂದುವರಿಸಿದೆ. ಆಡಿದ ಮೊದಲ 4 ಪಂದ್ಯಗಳಲ್ಲಿ ಸೋತಿದ್ದು, ಐಪಿಎಲ್ ಇತಿಹಾಸದಲ್ಲಿ ಮೊದಲಿಗೆ ಇಂತಹ ಕೆಟ್ಟ ಮಟ್ಟದಲ್ಲಿ ಸೋತಿದೆ. ಹೀಗಾಗಿ ನೂತನ ನಾಯಕ ಜಡೇಜಾ ಮೇಲೆ ಟೀಕೆ ಹೆಚ್ಚಾಗುತ್ತಿದೆ. ಚೆನ್ನೈ ಸೋಲಿಗೆ ಬೌಲಿಂಗ್ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಸಿಎಸ್‌ಕೆ ಸ್ಟಾರ್ ಬೌಲರ್ ದೀಪಕ್ ಚಹರ್ ಅನುಪಸ್ಥಿತಿಯಲ್ಲಿ ಮುಖೇಶ್ ಚೌಧರಿ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಣಕ್ಕಿಳಿಸಲಾಗುತ್ತಿದೆ. ಆದ್ರೆ ಸಿಎಸ್‌ಕೆಗೆ ತಲೆ ನೋವಾಗಿರುವ ವಿಚಾರ ಅಂದ್ರೆ ಅದು ಸ್ಟಾರ್ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಫಾರ್ಮ್‌ನಲ್ಲಿ ಇರದೇ ಇರುವುದು. ಒಂದರ ಹಿಂದೆ ಮತ್ತೊಂದರಂತೆ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಕೇವಲ 2 ರನ್ ಗಳಿಸಿದ್ದ ರುದ್ರರಾಜ್ 4ನೇ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸುವ ನಿರೀಕ್ಷೆ ಇತ್ತು. ಆದರೆ ಅವರು ಗಳಿಸಿದ್ದು 16 ರನ್ ಮಾತ್ರ. ಅವರನ್ನು ತಂಡದಿಂದ ತೆಗೆದುಹಾಕುವ ಅವಕಾಶಕ್ಕಾಗಿ ಫ್ರಾಂಚೈಸಿ ಎದುರು ನೋಡುತ್ತಿದೆ. ಆರ್‌ಸಿಬಿ ವಿರುದ್ಧ ಕೊನೆಯ ಅವಕಾಶ ನೀಡಬಹುದು ಎನ್ನಲಾಗಿದೆ.
ಈ ಪರಿಸ್ಥಿತಿಯಲ್ಲಿ ಧೋನಿ, ರುತುರಾಜ್ ಜೊತೆ ತುರ್ತು ಸಮಾಲೋಚನೆ ನಡೆಸಿದ್ದಾರೆ. ಅದರಲ್ಲಿ, ಮುಂಬರುವ ಆರ್‌ಸಿಬಿ ವಿರುದ್ಧದ ಪಂದ್ಯವು ನಿಮಗೆ ಕೊನೆಯ ಅವಕಾಶವಾಗಿದೆ ಮತ್ತು ನೀವು ಅದನ್ನು ಉತ್ತಮಗೊಳಿಸಿದ್ರೆ, ಇನ್ನು ಮುಂದೆ ಪ್ಲೇಯಿಂಗ್ 11 ರಲ್ಲಿ ಅವಕಾಶದ ಬಗ್ಗೆ ಯೋಚಿಸಬೇಡಿ ಎಂದು ಅವರು ಎಚ್ಚರಿಸಿದ್ದಾರೆ.
ಇದಕ್ಕೆ ರುತುರಾಜ್ ಗಾಯಕ್ವಾಡ್ ಕೂಡ ಒಪ್ಪಿಗೆ ನೀಡಿದ್ದಾರೆ. ಅಂದರೆ, ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿದ್ರೆ ಮಾತ್ರ ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುವುದು ಎಂಬುದು ಗಾಯಕ್ವಾಡ್‌ಗೆ ತಿಳಿದಿದೆ. ಆರ್‌ಸಿಬಿ ವಿರುದ್ಧದ ಮುಂದಿನ ಪಂದ್ಯದಲ್ಲಿ ರುತುರಾಜ್ ಸಿಎಸ್‌ಕೆ ಜೊತೆಗಿನ ಭವಿಷ್ಯ ನಿರ್ಧಾರವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications